ಆನ್‌ಲೈನ್ ಬೆಟ್ಟಿಂಗ್ ಹಗರಣದಲ್ಲಿ ಭಾರತೀಯ ಕ್ರಿಕೆಟ್ ತಾರೆಯರಾದ ಯುವರಾಜ್ ಸಿಂಗ್, ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದೆ.
ಮುಂಬೈ: ಆನ್‌ಲೈನ್ ಬೆಟ್ಟಿಂಗ್ ಸ್ಕ್ಯಾಮ್ ಜತೆಗೆ ಸಂಬಂಧ ಹೊಂದಿರುವ ಆರೋಪದಡಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಅವರಿಗೆ ಜಾರಿ ನಿರ್ದೇಶನಾಲಯ ಈ ಮೂವರನ್ನು ವಿಚಾರಣೆಗೆ ಕರೆಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಕೇವಲ ಕ್ರಿಕೆಟಿಗರು ಮಾತ್ರವಲ್ಲದೇ ಬಾಲಿವುಡ್ ತಾರೆಯರಾದ ಸೋನು ಸೂದ್ ಹಾಗೂ ನಟಿ ಊರ್ವಶಿ ರೌಟೇಲಾ ಅವರನ್ನು ಜಾರಿ ನಿರ್ದೇಶನಾಲಯವು ವಿಚಾರಣೆಗೆ ಒಳಪಡಿಸಿದೆ ಎಂದು ಎನ್‌ಡಿ ಟಿವಿ ವಾಹಿನಿ ವರದಿ ಮಾಡಿದೆ.
ಭಾರತೀಯ ಕಾನೂನಿನ ಉಲ್ಲಂಘನೆ:
ED ವಿಚಾರಣೆ ನಡೆಸುತ್ತಿರುವುದು Lotus 365, Pari Match, Fairplay, 1xBet ಮುಂತಾದ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳಿಗೆ ಸೆಲೆಬ್ರಿಟಿಗಳಿಂದ ನೀಡಲಾದ ಪ್ರಚಾರದ ಕುರಿತದ್ದಾಗಿದೆ. ಈ ಆ್ಯಪ್‌ಗಳು ‘1xBet’ ಮುಂತಾದ ರೀತಿಯಲ್ಲಿ ಹೆಸರು ಬದಲಿಸಿಕೊಂಡು (surrogate names) ಜಾಹಿರಾತುಗಳಲ್ಲಿ ಬಳಕೆದಾರರನ್ನು ಕ್ಯೂಆರ್ ಕೋಡ್ ಮೂಲಕ ಆಕರ್ಷಿಸುತ್ತಿವೆ, ಇದು ಭಾರತೀಯ ಕಾನೂನುಗಳ ಉಲ್ಲಂಘನೆಗೆ ಸರಿ ಎಂದು ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಈ ಪ್ಲಾಟ್‌ಫಾರ್ಮ್‌ಗಳು ಕ್ಯೂಆರ್ ಕೋಡ್‌ಗಳ ಮೂಲಕ ‘ದಿ_skill‑based_ ಆಟಗಳು’ ಎಂದೂ ಪ್ರಚಾರ ಮಾಡುತ್ತಿವೆ.
ಈಗಾಗಲೇ ಕೆಲವು ಸೆಲಿಬ್ರಿಟಿಗಳಿಗೆ ನೋಟೀಸ್ ನೀಡಲಾಗಿದೆ. ಇನ್ನು ಕೆಲವು ಮಂದಿಗೆ ಸದ್ಯದಲ್ಲಿಯೇ ನೋಟಿಸ್ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ. ತಕ್ಷಣದ ಪ್ರಾಥಮಿಕ ತನಿಖೆಯಲ್ಲಿ, ಈ ಜಾಹಿರಾತುಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act), ವಿದೇಶಿ ವಿನಿಮಯ ನಿರ್ವಹಣೆ (FEMA), ಮನಿ ಲಾಂಡ್ರಿಂಗ್ ಪ್ರಿವೆನ್ಷನ್ ಆಕ್ಟ್ (PMLA) ಹಾಗೂ ಬೆನಾಮಿ ವಹಿವಾಟು (Benami Transactions Act) ಮುಂತಾದ ಕಾನೂನುಗಳ ಸ್ಪಷ್ಟ ಉಲ್ಲಂಘನೆಯನ್ನು ಮಾಡಿರುವುದು ಜಾನಿ ನಿರ್ದೇಶನಾಲಯದ ಗಮನಕ್ಕೆ ಬಂದಿದೆ ಎಂದು ವರದಿಯಾಗಿದೆ.
ಭಾರತಕ್ಕೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಬಳಿಕ ಐಪಿಎಲ್ ವೀಕ್ಷಕ ವಿವರಣೆಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಈ ಕ್ರಿಕೆಟಿಗರು ಆಗಾಗ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಹಾಗೂ ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯುತ್ತಾ ಬಂದಿದ್ದಾರೆ.
ಐಪಿಎಲ್‌ನಲ್ಲಿ ಬೆಟ್ಟಿಂಗ್ ಕಾಮನ್:
ಜಗತ್ತಿನ ಅತಿದೊಡ್ಡ ಟಿ20 ಲೀಗ್ ಎಂದೇ ಗುರುತಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತೇ ತುದಿಗಾಲಿನಲ್ಲಿ ನಿಂತಿರುತ್ತದೆ. ಇಲ್ಲಿ ಬೆಟ್ಟಿಂಗ್ ಕೂಡಾ ಸರ್ವೆ ಸಾಮಾನ್ಯ ಎನ್ನುವಂತಹ ಮಾತುಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಹಲವು ವಿವಿಧ ಹೆಸರಿನ ಆಪ್ ಮೂಲಕ ಸಾಕಷ್ಟು ಮಂದಿ ತಮ್ಮದೇ ತಂಡವನ್ನು ರಚಿಸಿಕೊಂಡು ಹಣ ಗೆಲ್ಲಲು ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಇನ್ನು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಲಿದೆ ಎಂದು ಕೆನಡಾ ಮೂಲದ ರ್ಯಾಪರ್ 750,000 ಡಾಲರ್ ಬೆಟ್ ಕಟ್ಟಿದ್ದರು. ಆರ್‌ಸಿಬಿ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಆ ರ್ಯಾಪರ್ 1,312,500 ಬೆಟ್ಟಿಂಗ್ ಬಹುಮಾನ ಜಯಿಸಿದ್ದರು.
ಒಟ್ಟಿನಲ್ಲಿ ಬೆಟ್ಟಿಂಗ್ ಸ್ಕ್ಯಾಮ್ ಆಪ್‌ನಲ್ಲಿ ಈ ದಿಗ್ಗಜ ಕ್ರಿಕೆಟಿಗರ ಹೆಸರು ಥಳುಕು ಹಾಕಿಕೊಂಡಿರುವುದು ನಿಜಕ್ಕೂ ಅವರ ಅಭಿಮಾನಿಗಳ ಪಾಲಿಗೆ ಆತಂಕ ಮೂಡಿಸಿರುವುದಂತೂ ಸುಳ್ಳಲ್ಲ. ಮುಂಬರುವ ದಿನಗಳಲ್ಲಿ ಈ ಪ್ರಕರಣ ಯಾವ ದಿಕ್ಕು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
