Asianet Suvarna News Asianet Suvarna News

Virat Kohli Post ತಿನ್ನಿ, ಆನಂದಿಸಿ ಆದ್ರೆ ಯಾರನ್ನೂ ನೋಯಿಸಬೇಡಿ, ಬಾಲ್ಯದ ಫೋಟೋ ಜೊತೆ ಕೊಹ್ಲಿ ಮಾರ್ಮಿಕ ಮಾತು!

ಏಷ್ಯಾಕಪ್ ಟೂರ್ನಿಯಲ್ಲಿ ಸೆಂಚುರಿ ಸಿಡಿಸುವ ಮೂಲಕ ಶತಕದ ಬರ ನೀಗಿಸಿಕೊಂಡ ವಿರಾಟ್ ಕೊಹ್ಲಿ ಇದೀಗ ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಮಹತ್ವದ ಸಂದೇಶವನ್ನು ಸಾರಿಸಿದ್ದಾರೆ. 
 

Eat drink and enjoy dont hurt anyone feelings Virat kohli Share childhood photo with cryptic message ckm
Author
First Published Sep 10, 2022, 8:25 PM IST

ನವದೆಹಲಿ(ಸೆ.10):  ಫಾರ್ಮ್ ಸಮಸ್ಸೆ, ಶತಕದ ಬರ ಸೇರಿದಂತೆ ಹಲವು ಕಾರಣಗಳಿಂದ ವಿರಾಟ್ ಕೊಹ್ಲಿ ಟೀಕೆಗೆ ಗುರಿಯಾಗುತ್ತಲೇ ಬಂದಿದ್ದಾರೆ. ಆದರೆ ಏಷ್ಯಾಕಪ್ ಟೂರ್ನಿಯ ಆಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಸೆಂಚುರಿ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಇದರ ಜೊತೆಗೆ ಸುದೀರ್ಘ ದಿನಗಳ ಬಳಿಕ ಶತಕದ ಕೊರಗನ್ನು ನೀಗಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಬಾಲ್ಯದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆ ಮಹತ್ವದ ಸಂದೇಶವನ್ನು ಸಾರಿದ್ದಾರೆ. ಕೊಹ್ಲಿ ಹಂಚಿಕೊಂಡ ಫೋಟೋದಲ್ಲಿ ವಿರಾಟ್ ಕೊಹ್ಲಿ ಆಹಾರ ಸವಿಯುತ್ತಿರುವ ಚಿತ್ರವಿದೆ. ಇದರ ಜೊತೆಗೆ ಮಾರ್ಮಿಕ ಮಾತನ್ನು ಆಡಿದ್ದಾರೆ. ತಿನ್ನಿರಿ, ಕುಡಿಯಿರಿ, ಆನಂದಿಸಿ. ಆದರೆ ಯಾರ ಭಾವನೆಗೆ ನೋವುಂಟು ಮಾಡಬೇಡಿ ಎಂದು ಬರೆದುಕೊಂಡಿದ್ದಾರೆ. ಕೊಹ್ಲಿ ಫೋಟೋ ಭಾರಿ ವೈರಲ್ ಆಗಿದೆ. 

ವಿರಾಟ್ ಕೊಹ್ಲಿ(Virat Kohli) ಈ ಫೋಟೋ ಶೇರ್ ಮಾಡಿದ ಬೆನ್ನಲ್ಲೇ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಸೆಂಚುರಿಯಿಂದ ಕೊಹ್ಲಿ(Virat Kohli Century) ಖುಷಿಯಾಗಿದ್ದಾರೆ. ಮತ್ತಷ್ಟು ಸಿಹಿ ತಿನ್ನಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ(Asia Cup 2022) ಕೊಹ್ಲಿ ಸಿಡಿಸಿದ ಸೆಂಚುರಿ ಹಲವು ಟೀಕೆಗಳಿಗೆ ಉತ್ತರ ನೀಡಿದೆ. ಇಷ್ಟೇ ಅಲ್ಲ ಕೊಹ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸಿದೆ.

Virat Kohli 71st Century: ಮೂರು ವರ್ಷಗಳ ಬಳಿಕ ಕೊಹ್ಲಿ ಸೆಂಚುರಿ, ಟಿ20ಯಲ್ಲಿ ಮೊಟ್ಟಮೊದಲ ಶತಕ

3 ವರ್ಷದಲ್ಲಿ ಕೊಹ್ಲಿ ಮೊದಲ ಶತಕ!
ಭಾರತದ ‘ರನ್‌ ಮಷಿನ್‌’ ವಿರಾಟ್‌ ಕೊಹ್ಲಿಯ ಬಹುನಿರೀಕ್ಷಿತ 71ನೇ ಅಂತಾರಾಷ್ಟ್ರೀಯ ಶತಕ ಕೊನೆಗೂ ದಾಖಲಾಗಿದೆ. 2019ರ ನವೆಂಬರ್‌ ಬಳಿಕ ಶತಕದ ಬರ ಎದುರಿಸುತ್ತಿದ್ದ ಕೊಹ್ಲಿ, ಅಷ್ಘಾನಿಸ್ತಾನ ವಿರುದ್ಧ ಗುರುವಾರ ನಡೆದ ಏಷ್ಯಾಕಪ್‌ ಸೂಪರ್‌-4 ಪಂದ್ಯದಲ್ಲಿ ಅಮೋಘ ಸೆಂಚುರಿ ಸಿಡಿಸಿದರು. ಅಂ.ರಾ.ಟಿ20ಯಲ್ಲಿ ಇದು ಅವರ ಮೊದಲ ಶತಕ ಎನ್ನುವುದು ವಿಶೇಷ. ಆರಂಭಿಕನಾಗಿ ಕ್ರೀಸ್‌ಗಿಳಿದ ವಿರಾಟ್‌ 53 ಎಸೆತಗಳಲ್ಲಿ ಶತಕ ಪೂರೈಸಿದರು. 61 ಎಸೆತಗಳಲ್ಲಿ 12 ಬೌಂಡರಿ, 6 ಸಿಕ್ಸರ್‌ನೊಂದಿಗೆ ಔಟಾಗದೆ 122 ರನ್‌ ಗಳಿಸಿದರು. ಅಂ.ರಾ.ಟಿ20ಯಲ್ಲಿ ಇದು ಭಾರತ ಪರ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತ. 2017ರಲ್ಲಿ ಶ್ರೀಲಂಕಾ ವಿರುದ್ಧ ಇಂದೋರ್‌ನಲ್ಲಿ ರೋಹಿತ್‌ ಶರ್ಮಾ ಗಳಿಸಿದ್ದ 118 ರನ್‌ ವೈಯಕ್ತಿಕ ಗರಿಷ್ಠ ಎನಿಸಿತ್ತು.

Team India ಟೆಸ್ಟ್ ನಾಯಕತ್ವ ಬಿಟ್ಟಾಗ ಧೋನಿ ಬಿಟ್ಟು ಯಾರೂ ಮೆಸೇಜ್‌ ಮಾಡ್ಲಿಲ್ಲ..!

ಪಾಂಟಿಂಗ್‌ ದಾಖಲೆ ಸಮ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್‌, ಜಂಟಿ 2ನೇ ಸ್ಥಾನಕ್ಕೇರಿದ್ದಾರೆ. ಆಸ್ಪ್ರೇಲಿಯಾದ ರಿಕಿ ಪಾಂಟಿಂಗ್‌ರ 71 ಶತಕಗಳ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. ಸಚಿನ್‌ ತೆಂಡುಲ್ಕರ್‌ 100 ಶತಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಈ ಶತಕವನ್ನು ಪತ್ನಿಗೆ ಅರ್ಪಿಸಿದ ಕೊಹ್ಲಿ
ಕಳೆದ ಎರಡೂವರೆ ವರ್ಷ ನನಗೆ ಹಲವು ಪಾಠಗಳನ್ನು ಕಲಿಸಿದೆ. ಟಿ20ಯಲ್ಲಿ ನನ್ನ ಶತಕದ ಬರ ನೀಗಲಿದೆ ಎಂದು ಭಾವಿಸಿರಲಿಲ್ಲ. ಕಠಿಣ ಸಮಯದಲ್ಲಿ ನನ್ನೊಂದಿಗೆ ನನ್ನ ತಂಡ ನಿಂತಿದೆ. ಶತಕ ಬಾರಿಸುತ್ತಿಲ್ಲ ಎನ್ನುವ ಬಗ್ಗೆ ಹೊರಗೆ ಸಾಕಷ್ಟುಚರ್ಚೆಯಾಗುತ್ತಿತ್ತು ಎಂದು ನನಗೆ ಗೊತ್ತು. ನಾನಿಲ್ಲಿ ಇಂದು ನಿಂತಿದ್ದೇನೆ ಎಂದರೆ ಅದಕ್ಕೆ ಒಬ್ಬ ವ್ಯಕ್ತಿ ಪ್ರಮುಖ ಕಾರಣ. ಅದು ನನ್ನ ಪತ್ನಿ ಅನುಷ್ಕಾ. ಈ ಶತಕ ಆಕೆ ಹಾಗೂ ನಮ್ಮ ಪುತ್ರಿ ವಾಮಿಕಾಗೆ ಅರ್ಪಿಸುವೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅನುಷ್ಕಾ ನನ್ನ ಜೊತೆಗಿದ್ದಾರೆ. ಅವರಿಂದ ಸಾಕಷ್ಟುವಿಷಯಗಳನ್ನು ಕಲಿತಿದ್ದೇನೆ ಎಂದು ಕೊಹ್ಲಿ ಹೇಳಿದ್ದರು.
 

Follow Us:
Download App:
  • android
  • ios