Asianet Suvarna News Asianet Suvarna News

ಸಿಟ್ಟಿನಲ್ಲಿ ಬಾಲ್ ಎಸೆದ ಬೌಲರ್, ಟೀಂ ಇಂಡಿಯಾ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ತಲೆಗೆ ಗಾಯ!

ಕ್ರಿಕೆಟ್‌ನಲ್ಲಿ ಸ್ಲೆಡ್ಜಿಂಗ್ ಸಾಮಾನ್ಯ. ಆದರೆ ಎಲ್ಲೆ ಮೀರಿದರೆ ಅಪಾಯ. ಇದೀಗ ಬೌಲರ್ ಚಿಂತನ್ ಗಜಾ ಸಿಟ್ಟಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೆಂಕಟೇಶ್ ಅಯ್ಯರ್‌ಗೆ ಬಾಲ್ ಥ್ರೋ ಮಾಡಿದ್ದಾನೆ. ನೇರವಾಗಿ ತಲೆಗೆ ಬಿದ್ದ ಕಾರಣ ಆ್ಯಂಬುಲೆನ್ಸ್ ಮೂಲಕ ವೆಂಕಟೇಶ್ ಅಯ್ಯರ್ ಅವರನ್ನು ಮೈದಾನದಿಂದ ಕರೆದುಕೊಂಡು ಹೋದ ಘಟನೆ ನಡೆದಿದೆ.

Duleep Trophy Semifinal bowler sledging throw hits Team India cricketer Venkatesh Iyer head Ambulance rushed to spot ckm
Author
First Published Sep 16, 2022, 8:24 PM IST

ಕೊಯಂಬತ್ತೂರು(ಸೆ.16):  ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಘಟನೆ ಕ್ರಿಕೆಟಿಗನಿದೆ ತಾಳ್ಮೆ ಎಷ್ಟು ಮುಖ್ಯ ಅನ್ನೋದನ್ನು ಮತ್ತೆ ಮತ್ತೆ ಸಾರಿ ಹೇಳಿದೆ. ವೆಸ್ಟ್ ಜೋನ್ ಬೌಲರ್ ಚಿಂತನ್ ಗಜಾ ಎಸೆತದಲ್ಲಿ  ಸೆಂಟ್ರಲ್ ಜೋನ್ ತಂಡದ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್  ಭರ್ಜರಿ ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಮರು ಎಸೆತವನ್ನು ಡಿಫೆಂಡ್ ಮಾಡಿಕೊಂಡರು. ಆದರೆ ಮೊದಲೆ ರೊಚ್ಚಿಗೆದ್ದಿದ್ದ ಚಿಂತನ್ ತನ್ನತ್ತ ಬಂದ ಬಾಲ್‌ನ್ನು ತಿರುಗಿ ಅಯ್ಯರ್‌ನತ್ತ ಬಲವಾಗಿ ಎಸೆದಿದ್ದಾರೆ. ಕ್ರೀಸ್‌ನಲ್ಲಿದ್ದ ಅಯ್ಯರ್ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನೇರವಾಗಿ ತಲೆಗೆ ಬಡಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ವೆಂಕಟೇಶ್ ಅಯ್ಯರ್ ನೆಲಕ್ಕೆ ಕುಸಿದು ಬಿದ್ದರು. ಇತ್ತ ಆ್ಯಂಬುಲೆನ್ಸ್ ಮೂಲಕ ವೆಂಕಟೇಶ್ ಅಯ್ಯರ್ ಅವರನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಚಿಂತನ್ ಗಜಾ ವಿರುದ್ಧ ಆಕ್ರೋಶ ಕೇಳಿಬಂದಿದೆ. 

ಕ್ರೀಸ್‌ಗೆ ಬಂದ ವೆಂಕಟೇಶ್ ಅಯ್ಯರ್(Venkatesh Rajasekaran Iyer) ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಇದು ಚಿಂತನ್ ಗಜಾ ಸಿಟ್ಟು ನೆತ್ತಿಗೇರಿಸಿದೆ. ಮರು ಎಸೆತದಲ್ಲಿ ಚಿಂತನ್ ಗಾಜ(Chintan Gaja) ಆಕ್ರೋಶದಿಂದ ಬೌಲಿಂಗ್ ಮಾಡಿದ್ದಾರೆ. ಅಯ್ಯರ್ ಸ್ಟ್ರೈಟ್ ಡಿಫೆಂಡ್ ನಿಂದ ಬಾಲ್ ನೇರವಾಗಿ ಬೌಲರ್ ಬಳಿ ಬಂದಿದೆ. ಬಾಲ್ ಹಿಡಿದು ಆಕ್ರೋಶದಿಂದಲೇ ತಿರುಗಿಸಿ ಅಯ್ಯರ್‌ನತ್ತ ಎಸೆದಿದ್ದಾನೆ. ಇದು ಅಯ್ಯರ್ ತಲೆಗೆ ಬಡಿದಿದೆ. ದುಲೀಪ್ ಟ್ರೋಫಿ ಸೆಮಿಫೈನಲ್(Duleep Trophy Semifinals) ಪಂದ್ಯದಲ್ಲಿ ನಡೆದ ಈ ಘಟನೆ ಇದೀಗ ಭಾರಿ ಚರ್ಚೆಗೆ ಒಳಗಾಗಿದೆ.

Uber ಬಗ್ಗೆ ಬೇಸರ ಹೊರಹಾಕಿದ ಹರ್ಷ ಬೋಗ್ಲೆ; ಬಾಯ್ಕಾಟ್ ಮಾಡೋಣ್ವಾ ಎಂದ ನೆಟ್ಟಿಗನಿಗೆ ಚಿನ್ನದಂತ ರಿಪ್ಲೇ ಕೊಟ್ಟ ಕಾಮೆಂಟರ್

27 ವರ್ಷದ ಅಯ್ಯರ್(Venkatesh Iyer Injury) ತೀವ್ರ ನೋವಿನಿಂದ ಮೈದಾನದಲ್ಲಿ ಕುಸಿದು ಬಿದ್ದರು. ತಕ್ಷಣವೇ ಆ್ಯಂಬುಲೆನ್ಸ್ ಮೈದಾನದೊಳಕ್ಕೆ ಎಂಟ್ರಿಕೊಟ್ಟಿತು. ಆ್ಯಂಬುಲೆನ್ಸ್ ಮೂಲಕ ಅಯ್ಯರ್ ಕರೆದುಕೊಂಡ ಹೋದ ವೈದ್ಯಕೀಯ ತಂಡ(Medical Team) ತಪಾಸಣೆ ನಡೆಸಿತು.  ಚಿಕಿತ್ಸೆಯಿಂದ ಚೇತರಿಸಿಕೊಂಡ ಅಯ್ಯರ್ ಮತ್ತೆ ಬ್ಯಾಟಿಂಗ್ ಇಳಿದರೂ ಅಬ್ಬರಿಸಲು ಸಾಧ್ಯವಾಗಿಲ್ಲ. 14 ರನ್ ಸಿಡಿಸಿ ಔಟಾದರು. ಇನ್ನು ಫೀಲ್ಡಿಂಗ್ ವೇಳೆ ಗೈರಾಗಿದ್ದರು. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅಯ್ಯರ್‌ಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ.

ವೆಂಕಟೇಶ್ ಅಯ್ಯರ್ 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ(Cricket) ಪದಾರ್ಪಣೆ ಮಾಡಿದ್ದಾರೆ. ಐಪಿಎಲ್ ಟೂರ್ನಿ(IPL)  ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಮಿಂಚಿದ ಅಯ್ಯರ್, ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಟೀಂ ಇಂಡಿಯಾಗೆ(Team India) ಡೆಬ್ಯೂ ಮಾಡಿದರು. 2022ರ ಆರಂಭದಲ್ಲಿ ಸೌತ್ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಕ್ಕೂ ಪದರ್ಪಾಣೆ ಮಾಡಿದರು. ಟೀಂ ಇಂಡಿಯಾ 2 ಏಕದಿನ ಹಾಗೂ 9 ಟಿ20 ಪಂದ್ಯ ಆಡಿದ್ದಾರೆ.

ವಿಶ್ವಕಪ್, ಐಪಿಎಲ್ ಗೆದ್ದ ಕೋಚ್ ಈಗ ಪಂಜಾಬ್ ಕಿಂಗ್ಸ್‌ ನೂತನ ಹೆಡ್ ಕೋಚ್..!

ಶಸ್ತ್ರಚಿಕಿತ್ಸೆಗೆ ಒಳಗಾದ ಆಲ್ರೌಂಡರ್‌ ಜಡೇಜಾ
ಗಾಯಗೊಂಡಿರುವ ಭಾರತದ ಆಲ್ರೌಂಡರ್‌ ರವೀಂದ್ರ ಜಡೇಜಾ ಮಂಗಳವಾರ ಬಲಗಾಲಿನ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಸದ್ಯದಲ್ಲೇ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.  ಭಾರತದ ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ ಮಂಡಿ ಗಾಯಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಏಷ್ಯಾಕಪ್‌ ಪಂದ್ಯದಲ್ಲಿ ಆಡುವಾಗ ಗಾಯಗೊಳ್ಳಲಿಲ್ಲ. ಬದಲಿಗೆ ಮೈದಾನದ ಹೊರಗೆ ಟೀಂ ಬಾಂಡಿಂಗ್‌ ಚಟುವಟಿಕೆ ವೇಳೆ ಸ್ಕೀ ಬೋರ್ಡ್‌ ಮೇಲೆ ಸಾಹಸ ಮಾಡಲು ಹೋದಾಗ ಗಾಯಗೊಂಡರು ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಬಿಸಿಸಿಐ ತಂಡದ ಆಡಳಿತದ ವಿರುದ್ಧ ಗರಂ ಆಗಿದ್ದು, ವರದಿ ಕೇಳಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Follow Us:
Download App:
  • android
  • ios