ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಗೂ ಮುನ್ನ ಸೆಪ್ಟೆಂಬರ್ 05ರಿಂದ ದುಲೀಪ್ ಟ್ರೋಫಿ ಟೂರ್ನಿ ನಡೆಯಲಿದೆ. ಈ ಸರಣಿಗೆ 4 ತಂಡಗಳು ಪ್ರಕಟವಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ: ದುಲೀಪ್ ಟ್ರೋಫಿ ಪ್ರಥಮ ದರ್ಜೆ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳಿಗೆ ಬಿಸಿಸಿಐ ಬುಧವಾರ 4 ತಂಡಗಳನ್ನು ಪ್ರಕಟಿಸಿದ್ದು, ಕೆ.ಎಲ್‌. ರಾಹುಲ್‌, ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯ‌ರ್ ಸೇರಿ ಹಲವು ತಾರಾ ಆಟಗಾರರು ಭಾಗಿಯಾಗಲಿದ್ದಾರೆ. 

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾ ಹಾಗೂ ಆರ್.ಅಶ್ವಿನ್‌ಗೆ ವಿನಾಯಿತಿ ನೀಡಲಾಗಿದೆ. ಸೆ.5ರಿಂದ ಮೊದಲ ಸುತ್ತು ಆರಂಭಗೊಳ್ಳಲಿದ್ದು, 'ಎ' ಹಾಗೂ 'ಬಿ' ತಂಡಗಳ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, 'ಸಿ' ಹಾಗೂ 'ಡಿ' ತಂಡಗಳ ನಡುವಿನ ಪಂದ್ಯ ಅನಂತಪುರ ದಲ್ಲಿ ನಡೆಯಲಿದೆ. ಈ ಪಂದ್ಯಗಳಲ್ಲಿನ ಪ್ರದರ್ಶನ ಗಮನಿಸಿಸೆ.19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ.

ಇಂದಿನಿಂದ ಮಹಾರಾಜ ಟ್ರೋಫಿ ಟಿ20 ಕದನ ಆರಂಭ; ಪ್ರಶಸ್ತಿಗಾಗಿ 6 ತಂಡಗಳ ನಡುವೆ ಕಾದಾಟ

ಕರ್ನಾಟಕದ ಒಟ್ಟು 6 ಆಟಗಾರರು ಸ್ಥಾನ ಪಡೆದಿದ್ದು, 'ಎ' ಗುಂಪಿನಲ್ಲಿ ಶುಭಮನ್‌ ನಾಯಕತ್ವದಲ್ಲಿ ಕೆ.ಎಲ್.ರಾಹುಲ್ ಆಡಲಿ ದ್ದಾರೆ. ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳ ಬೇಕಿದ್ದರೆ ರಾಹುಲ್ ಉತ್ತಮ ಪ್ರದರ್ಶನ ತೋರಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ತಂಡಗಳ ವಿವರ

ಟೀಂ 'ಎ': (ನಾಯಕ), ಮಯಾಂಕ್ ಅಗರ್‌ವಾಲ್, ಪರಾಗ್, ಜುರೆಲ್, ರಾಹುಲ್, ತಿಲಕ್, ದುಬೆ, ತನುಷ್ ಕೋಟ್ಯಾನ್, ಕುಲೀಪ್ ಯಾದವ್, ಆಕಾಶ್ ದೀಪ್, ಪ್ರಸಿದ್ ಕೃಷ್ಣ, ಖಲೀಲ್ ಅಹ್ಮದ್, ಆವೇಶ್ ಖಾನ್, ವಿದ್ವತ್ ಕಾವೇರಪ್ಪ, ಕುಮಾ‌ ಕುಶಾಗ್ರ, ಶಾಶ್ವತ್ ರಾವತ್.

ಟೀಂ 'ಬಿ': ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಭ್ ಪಂತ್, ಮುಶೀರ್ ಖಾನ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಮೊಹಮದ್ ಸಿರಾಜ್, ಯಶ್ ದಯಾಳ್,ಮುಕೇಶ್‌ ಕುಮಾರ್, ರಾಹುಲ್ ಚಹರ್, ಸಾಯಿ ಕಿಶೋರ್, ಮೋಹಿತ್‌ ಅವಸ್ಥಿ, ಎನ್.ಜಗದೀಶನ್.

ಬಿಸಿಸಿಐ ಚಾಟಿಗೆ ಬಗ್ಗಿದ ಶ್ರೇಯಸ್‌ ಅಯ್ಯರ್, ಇಶಾನ್‌ ಕಿಶನ್!

ಟೀಂ 'ಸಿ': ಋತುರಾಜ್ (ನಾಯಕ), ಸಾಯಿಸುದರ್ಶನ್, ರಜತ್‌ ಪಾಟೀದಾರ್, ಅಭಿಷೇಕ್ ಪೊರೆಲ್, ಸೂರ್ಯಕುಮಾರ್, ಬಾಬಾ ಇಂದ್ರಜಿತ್, ಹೃತಿಕ್ ತೊಕೀನ್, ಮಾನವ ಸುಥಾರ್, ಉಮ್ರಾನ್ ಮಲಿಕ್, ವೈಶಾಖ್ ವಿಜಯ್‌ಕುಮಾರ್, ಅನ್ಸುಲ್ ಕಾಂಬೋಜ್, ಹಿಮಾನು ಚೌವ್ಹಾಣ್, ಮಯಾಂಕ್ ಮಾರ್ಕಂಡೆ, ಆರ್ಯನ್ ಜುಯಲ್, ಸಂದೀಪ್ ವಾರಿಯರ್. 

ಟೀಂ 'ಡಿ': ಶ್ರೇಯಸ್ ಅಯ್ಯರ್ (ನಾಯಕ), ಅಥರ್ವ ತೈಡೆ, ಯಶ್ ದುಬೆ, ದೇವದತ್‌ ಪಡಿಕ್ಕಲ್, ಇಶಾನ್ ಕಿಶನ್, ರಿಕಿ ಭುಯಿ, ಸಾರನ್‌ಜೈನ್, ಅಕ್ಷರ್ ಪಟೇಲ್, ಅರ್ಶ್ ದೀಪ್ ಸಿಂಗ್, ಆದಿತ್ಯ ಥಾಕರೆ, ಹರ್ಷಿತ್ ರಾಣಾ, ತುಷಾರ್ ದೇಶಪಾಂಡೆ, ಆಕಾಶ್ ಸೇನ್‌ಗುಪ್ತಾ, ಕೆ.ಎಸ್.ಭರತ್, ಸೌರಭ್ ಕುಮಾರ್.