* ಇಂಗ್ಲೆಂಡ್ ಟೆಸ್ಟ್ ತಂಡ ಕೂಡಿಕೊಂಡ ಡಾಮ್ ಬೆಸ್* ಡಾಮ್‌ ಬೆಸ್‌ ಇಂಗ್ಲೆಂಡ್ ಅಫ್ ಸ್ಪಿನ್ ಬೌಲರ್* ಓಲಿ ರಾಬಿನ್‌ಸನ್‌ ಬದಲಿಗೆ ಡಾಮ್‌ ಬೆಸ್‌ಗೆ ಒಲಿದ ಬಂತು ಅವಕಾಶ

ಬರ್ಮಿಂಗ್‌ಹ್ಯಾಮ್‌(ಜೂ.08): ನ್ಯೂಜಿಲೆಂಡ್ ವಿರುದ್ದ ಜೂನ್‌ 10ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಆಫ್‌ ಸ್ಪಿನ್ನರ್ ಡಾಮ್ ಬೆಸ್‌ ಇಂಗ್ಲೆಂಡ್ ಕ್ರಿಕೆಟ್ ತಂಡ ಕೂಡಿಕೊಂಡಿರುವುದಾಗಿ ಕೋಚ್ ಕ್ರಿಸ್ ಸಿಲ್ವರ್‌ವುಡ್‌ ತಿಳಿಸಿದ್ದಾರೆ.

ಆಲ್ರೌಂಡರ್ ಓಲಿ ರಾಬಿನ್ಸನ್‌ ಅವರನ್ನು ತಂಡದಿಂದ ಹೊರಗಿಟ್ಟ ಬೆನ್ನಲ್ಲೇ ಇದೀಗ ಬೆಸ್‌ಗೆ ತಂಡ ಕೂಡಿಕೊಳ್ಳುವ ಅವಕಾಶ ಬಂದೊದಗಿದೆ. ಕೆಲ ವರ್ಷಗಳ ಹಿಂದೆ ಟ್ವಿಟರ್‌ನಲ್ಲಿ ಜನಾಂಗೀಯ ನಿಂದನೆಯ ಪೋಸ್ಟ್‌ ಮಾಡಿದ ತಪ್ಪಿಗಾಗಿ ಓಲಿ ರಾಬಿನ್ಸನ್‌ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತು ಮಾಡಿದೆ.

8 ವರ್ಷದ ಹಿಂದೆ ಟ್ವೀಟ್‌ ಮಾಡಿದ ತಪ್ಪಿಗಾಗಿ ಇಂಗ್ಲೆಂಡ್‌ ವೇಗಿ ಈಗ ಸಸ್ಪೆಂಡ್!

ಜಾಕ್‌ ಲೀಚ್ ಇಂಗ್ಲೆಂಡ್‌ ಕ್ರಿಕೆಟ್ ತಂಡದ ಮೊದಲ ಆಯ್ಕೆಯ ಸ್ಪಿನ್ನರ್ ಆಗಿದ್ದು, ಅವರು ಸಂಪೂರ್ಣ ಫಿಟ್ ಅಗಿದ್ದು, ಆಯ್ಕೆಗೆ ಲಭ್ಯರಿದ್ದಾರೆ. ಬೆಸ್ ಅವರನ್ನು ಕವರ್ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಯಾರಾದರೂ ಗಾಯಗೊಂಡರೆ ಕೋವಿಡ್ ನಿಯಮಾವಳಿಗಳ ಪ್ರಕಾರ ತಕ್ಷಣಕ್ಕೆ ಬಲಿ ಆಟಗಾರನನ್ನು ಹುಡುಕುವುದು ಅನುಮಾನ. ಹೀಗಾಗಿ ಬೆಸ್‌ ಅವರು ತಂಡ ಕೂಡಿಕೊಂಡಿದ್ದಾರೆ ಎಂದು ಇಂಗ್ಲೆಂಡ್ ಹೆಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ ತಿಳಿಸಿದ್ದಾರೆ.

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್‌ ನಡುವೆ ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಎರಡನೆ ಟೆಸ್ಟ್‌ ಪಂದ್ಯದಲ್ಲಿ ಯಾವ ತಂಡದ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.