England Cricket

(Search results - 121)

England T20 Series

CricketJul 22, 2021, 10:38 AM IST

ಟಿ20: ಪಾಕ್‌ ವಿರುದ್ಧ ಇಂಗ್ಲೆಂಡ್‌ಗೆ ಸರಣಿ ಜಯ

ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 20 ಓವರಲ್ಲಿ 6 ವಿಕೆಟ್‌ಗೆ 154 ರನ್‌ ಗಳಿಸಿತು. ಮೊಹಮದ್‌ ರಿಜ್ವಾನ್‌ 76 ರನ್‌ ಗಳಿಸಿದರು. ಜೇಸನ್‌ ರಾಯ್‌(61)ರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್‌ 2 ಎಸೆತ ಬಾಕಿ ಇರುವಂತೆ 7 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು.

England Test Cricket

CricketJul 21, 2021, 7:08 PM IST

ಭಾರತ ವಿರುದ್ದದ ಮೊದಲೆರಡು ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ

ಜೋಫ್ರಾ ಆರ್ಚರ್‌ ಭಾರತ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳುವಷ್ಟು ಸಂಪೂರ್ಣವಾಗಿ ಫಿಟ್‌ ಆಗಿಲ್ಲ. ಇನ್ನು ಮತ್ತೋರ್ವ ವೇಗಿ ಕ್ರಿಸ್ ವೋಕ್ಸ್‌ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಪಡೆದಿಲ್ಲವಾದರೂ ಇನ್ನುಳಿದ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಕೂಡಿಕೊಳ್ಳುವ ಸುಳಿವನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ನೀಡಿದೆ.

Eoin Morgan

CricketJul 14, 2021, 5:18 PM IST

ಪಾಕ್‌ ವಿರುದ್ದದ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ

ಏಕದಿನ ಸರಣಿಗೂ ಮುನ್ನ ತಂಡದಲ್ಲಿ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ನಾಯಕ ಮಾರ್ಗನ್ ಸೇರಿದಂತೆ ಎಲ್ಲಾ ಆಟಗಾರರು ಕಡ್ಡಾಯ ಐಸೋಲೇಷನ್‌ಗೆ ಓಳಗಾಗಿದ್ದರು. ಇನ್ನು ಮತ್ತೆ ನಾಯಕನಾಗಿ ಮಾರ್ಗನ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.

babar Azam

CricketJul 14, 2021, 1:07 PM IST

ಬಾಬರ್ ಅಜಂ ಶತಕ ವ್ಯರ್ಥ: ಪಾಕ್ ಎದುರು ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ಇಂಗ್ಲೆಂಡ್‌

ಪಾಕಿಸ್ತಾನ ನೀಡಿದ್ದ 332 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಆರಂಭಿಕ ಆಘಾತ ಅನುಭವಿಸಿತು. 165 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ 6ನೇ ವಿಕೆಟ್‌ಗೆ ಜತೆಯಾದ ಜೇಮ್ಸ್ ವಿನ್ಸ್‌ ಹಾಗೂ ಲೆವಿಸ್ ಗ್ರೆಗೊರಿ 129 ರನ್‌ಗಳ ಜತೆಯಾಟವಾಡುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು.

Ben Stokes

CricketJul 6, 2021, 5:26 PM IST

ಕೋವಿಡ್ ಶಾಕ್ ಬೆನ್ನಲ್ಲೇ ಇಂಗ್ಲೆಂಡ್‌ ಕ್ರಿಕೆಟ್ ತಂಡಕ್ಕೆ ಬೆನ್ ಸ್ಟೋಕ್ಸ್ ಕ್ಯಾಪ್ಟನ್‌

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಪರ ಕ್ಷೇತ್ರರಕ್ಷಣೆ ಮಾಡುವಾಗ ಎಡಗೈ ತೋರು ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಕಲೆ ತಿಂಗಳುಗಳಿಂದ ಸ್ಟೋಕ್ಸ್‌ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು.

England Cricket

CricketJul 6, 2021, 3:48 PM IST

ಇಂಗ್ಲೆಂಡ್‌ ಕ್ರಿಕೆಟ್ ತಂಡದ 7 ಮಂದಿಗೆ ಕೋವಿಡ್ ಪಾಸಿಟಿವ್

ಬ್ರಿಸ್ಟಲ್‌ನಲ್ಲಿ ಸೋಮವಾರ(ಜು.05) ನಡೆಸಿದ ಪಿಸಿಆರ್ ಟೆಸ್ಟ್‌ನಲ್ಲಿ ಏಕದಿನ ಕ್ರಿಕೆಟ್ ತಂಡದ ಮೂವರು ಆಟಗಾರರು ಹಾಗೂ ನಾಲ್ವರು ಸಹಾಯಕ ಸಿಬ್ಬಂದಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

England Cricket

CricketJul 5, 2021, 5:59 PM IST

ಪಾಕ್ ವಿರುದ್ದದ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ

ಗಾಯದ ಸಮಸ್ಯೆಯಿಂದ ಜೋಸ್‌ ಬಟ್ಲರ್ ಹೊರಬಿದ್ದಿದ್ದರೆ, ಫಿಟ್ನೆಸ್‌ ಗಳಿಸದ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್‌ಗೆ ಮತ್ತೊಮ್ಮೆ ವಿಶ್ರಾಂತಿ ನೀಡಲಾಗಿದೆ. ಡೇವಿಡ್ ಮಲಾನ್‌ ಬದಲಿಗೆ ಟಾಮ್ ಕರ್ರನ್‌ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ದದ ಮೂರು ಪಂದ್ಯಗಳ ಸರಣಿಯನ್ನು ಇಯಾನ್‌ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡವು 2-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.

Team India Test

CricketJul 3, 2021, 9:44 AM IST

ಆಯ್ದ ಆಟಗಾರರನ್ನೊಳಗೊಂಡ ಕೌಂಟಿ ತಂಡದ ಜತೆ ಟೀಂ ಇಂಡಿಯಾ ಅಭ್ಯಾಸ ಪಂದ್ಯ

ಬಯೋ ಬಬಲ್‌ ನಿರ್ವಹಣೆ ಹಾಗೂ ‘ದಿ ಹಂಡ್ರೆಡ್‌’ ಟೂರ್ನಿಯ ನೆಪ ಹೇಳಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ), ಅಭ್ಯಾಸ ಪಂದ್ಯಕ್ಕೆ ತಂಡವನ್ನು ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಆದರೆ ಬಿಸಿಸಿಐ ಮತ್ತೊಮ್ಮೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹಲವು ಕೌಂಟಿಗಳ ಆಟಗಾರರನ್ನು ಸೇರಿಸಿ ತಂಡವೊಂದನ್ನು ರಚಿಸಲು ಇಸಿಬಿ ಒಪ್ಪಿಗೆ ನೀಡಿದ್ದು, ಡರ್ಹಮ್‌ನಲ್ಲಿ 3 ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ.

sam curran

CricketJul 2, 2021, 11:44 AM IST

ಸ್ಯಾಮ್ ಕರ್ರನ್‌ಗೆ 5 ವಿಕೆಟ್; ಲಂಕಾ ಎದುರಿನ ಏಕದಿನ ಸರಣಿ ಇಂಗ್ಲೆಂಡ್ ಪಾಲು

ಶ್ರೀಲಂಕಾ ನೀಡಿದ್ದ 242 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಜೇಸನ್ ರಾಯ್ ಹಾಗೂ ಜಾನಿ ಬೇರ್‌ಸ್ಟೋವ್‌ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 76 ರನ್‌ಗಳ ಜತೆಯಾಟ ನಿಭಾಯಿಸಿದರು. ಬೇರ್‌ಸ್ಟೋವ್ 29 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ರಾಯ್ 52 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

Jos Buttler

CricketJun 26, 2021, 3:49 PM IST

ಶ್ರೀಲಂಕಾ ವಿರುದ್ದದ ಸರಣಿಯಿಂದ ಹೊರಬಿದ್ದ ಜೋಸ್ ಬಟ್ಲರ್

ಇಂಗ್ಲೆಂಡ್ ತಂಡದ ಸ್ಟಾರ್ ಜೋಸ್ ಬಟ್ಲರ್, ಲಂಕಾ ವಿರುದ್ದದ ಮೊದಲ ಟಿ20 ಪಂದ್ಯದ ವೇಳೆ ಗಾಯಗೊಂಡಿದ್ದರು. ಕಾರ್ಡಿಫ್‌ನಲ್ಲಿ ಹೆಚ್ಚಿನ ಚಿಕಿತ್ಸೆ ನಡೆಸಿದಾಗ ಸಣ್ಣದಾಗಿ ಗಾಯದ ತೀವ್ರತೆ ಬೆಳಕಿಗೆ ಬಂದಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Jos Buttler

CricketJun 22, 2021, 5:33 PM IST

ಐಪಿಎಲ್ 2021 ಭಾಗ-2 ಟೂರ್ನಿಯಲ್ಲಿ ಜೋಸ್‌ ಬಟ್ಲರ್ ಆಡೋದು ಡೌಟ್..!

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಅವಧಿಯಲ್ಲಿ ಇನ್ನುಳಿದ ಐಪಿಎಲ್ ಪಂದ್ಯಗಳು ಯುಎಇನಲ್ಲಿ ನಡೆಯಲಿದೆ. ಇದೇ ಅವಧಿಯಲ್ಲಿ ಇಂಗ್ಲೆಂಡ್ ತಂಡವು ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ದ ಸೀಮಿತ ಓವರ್‌ಗಳ ಸರಣಿಯನ್ನಾಡಲಿದೆ.

England Cricket

CricketJun 19, 2021, 7:26 PM IST

ಲಂಕಾ ಎದುರಿನ ಸರಣಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ

ತಂಡದ ಸ್ಟಾರ್ ಆಟಗಾರರಾದ ಬೆನ್ ಸ್ಟೋಕ್ಸ್ ಹಾಗೂ ಜೋಫ್ರಾ ಆರ್ಚರ್‌ಗೆ ವಿಶ್ರಾಂತಿ ನೀಡಲಾಗಿದ್ದು, ಇಯಾನ್ ಮಾರ್ಗನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿದ್ದ ಜೋ ರೂಟ್ ಕೂಡಾ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Chris Woakes

CricketJun 14, 2021, 5:43 PM IST

ಲಂಕಾ ಎದುರಿನ ಟಿ20 ಸರಣಿಗೆ ಇಂಗ್ಲೆಂಡ್ ತಂಡ ಕೂಡಿಕೊಂಡ ಕ್ರಿಸ್ ವೋಕ್ಸ್

ಕ್ರಿಸ್‌ ವೋಕ್ಸ್‌ ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆಲುವಿನಲ್ಲಿ ವೋಕ್ಸ್‌ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದರು. ಹೀಗಿದ್ದೂ ಟಿ20 ತಂಡದಲ್ಲಿ ಕಾಯಂ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

Dom Bess

CricketJun 8, 2021, 4:16 PM IST

ಕಿವೀಸ್ ಎದುರಿನ 2ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಕೂಡಿಕೊಂಡ ಡಾಮ್ ಬೆಸ್

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್‌ ನಡುವೆ ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಎರಡನೆ ಟೆಸ್ಟ್‌ ಪಂದ್ಯದಲ್ಲಿ ಯಾವ ತಂಡದ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Ollie Robinson

CricketJun 8, 2021, 8:34 AM IST

8 ವರ್ಷದ ಹಿಂದೆ ಟ್ವೀಟ್‌ ಮಾಡಿದ ತಪ್ಪಿಗಾಗಿ ಇಂಗ್ಲೆಂಡ್‌ ವೇಗಿ ಈಗ ಸಸ್ಪೆಂಡ್!

ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಓಲಿ ರಾಬಿನ್ಸನ್‌ ನ್ಯೂಜಿಲೆಂಡ್ ವಿರುದ್ದದ ಮೊದಲ ಪಂದ್ಯದ ಎರಡು ಇನಿಂಗ್ಸ್‌ಗಳಿಂದ 7 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಬ್ಯಾಟಿಂಗ್‌ನಲ್ಲೂ 42 ರನ್ ಬಾರಿಸುವ ಮೂಲಕ ಭವಿಷ್ಯದಲ್ಲಿ ತಾವೊಬ್ಬ ಉಪಯುಕ್ತ ಆಲ್ರೌಂಡರ್ ಆಗಬಲ್ಲೆ ಎನ್ನುವ ಭರವಸೆಯನ್ನು ಮೂಡಿಸಿದ್ದರು.