ಭಾರತದ ಭರವಸೆ ಸ್ಪಿನ್ನರ್ ಆಗಿ ಗುರುತಿಸಿಕೊಂಡ ಯುಜುವೇಂದ್ರ ಚಹಾಲ್ ಡಿವೋರ್ಸ್ ಬಳಿಕ ಜೀವನವೇ ಅಯೋಮಯವಾಗಿದೆ. ಒಂದೆಡೆ ವಿಪರೀತ ಕುಡಿತ, ತಾಳ ತಪ್ಪಿದ ಜೀವನದಲ್ಲಿ ಕರಿಯರ್ ಬಹುತೇಕ ಖತಂ, ಇತ್ತ ಕಣ್ಣೀರಲ್ಲಿ ಬದುಕು ಮುಂದೂಡುತ್ತಿದ್ದಾರೆ.
ನವದೆಹಲಿ (ಅ.18) ಟೀಂ ಇಂಡಿಯಾದ ಭರವಸೆಯ ಸ್ಪಿನ್ನರ್, ಆರ್ಸಿಬಿಯ ಮಾಜಿ ಕ್ರಿಕೆಟಿಗ ಯುಜುವೇಂದ್ರ ಚಹಾಲ್ ಸದ್ಯ ಟೀಂ ಇಂಡಿಯಾದಲ್ಲಿ ಇಲ್ಲ, ಕೇವಲ ಐಪಿಎಲ್ ಟೂರ್ನಿಗೆ ಸೀಮಿತವಾಗಿದ್ದಾರೆ. ಇತ್ತೀಚೆಗೆ ಫಸ್ಟ್ ಕ್ಲಾಸ್ ಕ್ರಿಕೆಟ್ಗೂ ವಿದಾಯ ಹೇಳಿದ್ದಾರೆ. ಚಹಾಲ್ ಬದುಕಿನಲ್ಲಿ ಕೋಲಾಹಲ ನಡೆದಿದೆ. ಧನಶ್ರಿ ವರ್ಮಾ ಜೊತೆಗಿನ ಡಿವೋರ್ಸ್ ಚಹಾಲ್ ಬದುಕಿನಲ್ಲಿ ಅತೀ ದೊಡ್ಡ ಬಿರುಗಾಳಿಯನ್ನೇ ಬೀಸಿದೆ. ಚಹಾಲ್ ಕುಡಿತದ ದಾಸನಾಗಿದ್ದ. ವಿಪರೀತ ಕುಡಿತದಿಂದ ಕ್ರಿಕೆಟ್ ದೂರವಾಯಿತು, ಕರಿಯರ್ ಬಹುತೇಕ ಅಂತ್ಯಗೊಂಡಿತು. 26 ದಿನ ಮದ್ಯ ವ್ಯಸನ ಮುಕ್ತ ಕೇಂದ್ರದಲ್ಲಿ ದಾಖಲಾದ ಕಣ್ಣೀರ ಕತೆಯನ್ನು ಸ್ವತಃ ಚಹಾಲ್ ಬಹಿರಂಗಪಡಿಸಿದ್ದಾರೆ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪಾಡ್ಕಾಸ್ಟ್ನಲ್ಲಿ ಯುಜುವೇಂದ್ರ ಚಹಾಲ್ ತಮ್ಮ ಬುದಕಿನಲ್ಲಿ ನಡೆದ ಹಲವು ಘಟನೆಗಳನ್ನು ವಿವರಿಸಿ ಭಾವುಕರಾಗಿದ್ದಾರೆ. ಹಿಂದಿರುಗಿ ನೋಡಿದಾಗ ಸುಂದರ ಬದುಕು ಎಲ್ಲಿ ತಾಳ ತಪ್ಪಿತು ಅನ್ನೋದು ಗೊತ್ತಾದ ಪರಿಸ್ಥಿತಿಯಲ್ಲಿ ಚಹಾಲ್ ದಿನ ದೂಡುತ್ತಿದ್ದಾರೆ.
ಪುನರ್ವಸತಿ ಕೇಂದ್ರದಲ್ಲಿ26 ದಿನ
ಚಹಾಲ್ ಐಪಿಎಲ್ ಟೂರ್ನಿಯ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರು. ಸ್ಪಿನ್ ಮ್ಯಾಜಿಕ್ ಮೂಲಕ ಹಲವು ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿದ್ದಾರೆ. ಆದರೆ ಧನಶ್ರೀ ವರ್ಮಾ ಜೊತೆಗಿನ ಡಿವೋರ್ಸ್, ಬೀದಿಜಗಳ, ರಂಪಾಟಗಳು ಚಹಾಲ್ನನ್ನು ಮಾನಸಿಕವಾಗಿ ಕುಗ್ಗಿಸಿತು. ಹೀಗಾಗಿ ಕುಡಿತ ದಾಸನಾಗಿ ಬಿಟ್ಟಿದ್ದ. ಪೋಷಕರು ಆತಂಕಗೊಂಡಿದ್ದರು, ಆಪ್ತರು, ಗೆಳೆಯರು ಎಲ್ಲರೂ ಸೇರಿ ಚಹಾಲ್ನ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ ಕಹಿ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ. ಪುನರ್ವಸತಿ ಕೇಂದ್ರದಲ್ಲಿ ನಾನು ಬದುಕಿನ ದಾರಿಗೆ ಬರಲು ಇರಬೇಕಾಯಿತು. ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು ಎಂದು ಚಹಾಲ್ ಕಣ್ಣೀರಿಟ್ಟಿದ್ದಾರೆ.
ಕುಡಿತದಿಂದ ಕ್ರಿಕೆಟ್ ಕೂಡ ದೂರವಾಯಿತು
ಡಿವೋರ್ಸ್ ಬಳಿಕ ಬದುಕು ತಾಳತಪ್ಪಿತು. ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಸರಿ, ತಪ್ಪುಗಳು, ವಿಪರೀಚ ಯೋಚನೆಗಳಿಂದ ಕುಡಿತ ವಿಪರೀತವಾಯಿತು. ಕ್ರಿಕೆಟ್ನಿಂದ ದೂರವಾಗ ತೊಡಗಿದೆ. ಕ್ರಿಕೆಟಿಗನಾಗಿ ಸಾರ್ವಜನಿಕ ಜೀವನದಲ್ಲಿ ಪರಿಸ್ಥಿತಿ ನಿಭಾಯಿಸಲು ನಾನು ವಿಫಲನಾದೆ. ನನ್ನ ವೈಯುಕ್ತಿಕ ಬದುಕಿನ ಪ್ರತಿಯೊಂದು ಘಟನೆಗಳು ಸಾರ್ವಜನಿಕವಾಗಿ ಚರ್ಚೆಯಾಗಿತ್ತು. ಹಲವರು ಕೆಟ್ಟ ಕಮೆಂಟ್ಸ್ ಮಾಡಿದ್ದರು. ಮೊದಲೇ ನೋವು, ಆಘಾತದಲ್ಲಿದ್ದ ನನಗೆ ಬ್ಯಾಲೆನ್ಸ್ ಮಾಡಲು ಸಾಧ್ಯವಾಗಲಿಲ್ಲ. ಚೊಚ್ಚಲ ಬಾರಿಗೆ 2011ರಲ್ಲಿ ಐಪಿಎಲ್ ಕ್ರಿಕೆಟ್ ಆಡುವಾಗ ಎಬಿ ಡಿವಿಲಿಯರ್ಸ್ ಒಂದು ಮಾತು ಹೇಳಿದ್ದರು. ಲೈಫ್ ಬ್ಯಾಲೆನ್ಸ್ ಮಾಡಬೇಕು ಎಂದಿದ್ದರು. ಆದರೆ ಅಂದು ಹೇಳುವಾಗ ಕೇವಲ ಉಪದೇಶವಾಗಿ ಕಂಡಿತ್ತು. ನನ್ನ ಜೀವನದ ಘಟನೆಗಳು ನಡೆದಾಗ ನನಗೆ ಬ್ಯಾಲೆನ್ಸ್ ಮಾಡಲು ಅಸಾಧ್ಯವಾಯಿತು.
ಬಿಸಿಸಿಐನಿಂದ ಬ್ರೇಕ್ ಪಡೆದಿದ್ದ ಚಹಾಲ್
ಡಿವೋರ್ಸ್, ಕುಡಿತದಿಂದ ನಾನು ಬಿಸಿಸಿಐ ಬಳಿ ವಿಶೇಷ ಮನವಿಯೊಂದನ್ನು ಮಾಡಿದ್ದೆ. ನನಗೆ ಕೆಲ ಕಾಲ ಬ್ರೇಕ್ ಬೇಕು ಎಂದಿದ್ದೆ. ನನ್ನ ಕೂರಿಸಿಕೊಂಡು ಮಾಜಿ ಬಿಸಿಸಿಐ ಖಜಾಂಜಿ ಅನಿರುದ್ ಸರ್ ಮಾತನಾಡಿದರು. ನನ್ನ ಬೆಂಬಲಕ್ಕೆ ನಿಂತರು. ನನ್ನ ಮುಖ ಸೊರಗಿತ್ತು, ಆರೋಗ್ಯ ಹದಗೆಟ್ಟಿತ್ತು ಎಂದು ಚಹಾಲ್ ಸಂಕಷ್ಟ ದಿನಗಳನ್ನು ನೆನೆದಿದ್ದಾರೆ.
ನಾನು ಅತೀ ಹೆಚ್ಚು ಪ್ರೀತಿಸುವ ಕ್ರಿಕೆಟ್ ದೂರವಾಗುತ್ತಿದ್ದಂತೆ ನನ್ನ ಪೋಷಕರು ಆತಂಕಗೊಂಡರು, ಆಪ್ತರು, ಕುಟುಂಬಸ್ಥರು ಸೇರಿ ನನ್ನ ನರವಿಗೆ ನಿಂತರು, ಪುನರ್ವಸತಿ ಕೇಂದ್ರದಲ್ಲಿನ 26 ದಿನದಲ್ಲಿ ಬದುಕು ಮರಳಿ ಹಿಡಿಯುವ ಆತ್ಮವಿಶ್ವಾಸ ಬೆಳೆಯಿತು. ಇದೀಗ ನಿಧಾನವಾಗಿ ನಾನು ಕ್ರಿಕೆಟ್ಗೆ ಮರಳುತ್ತಿದ್ದೇನೆ. ಕಳೆದ ಐಪಿಎಲ್ ಟೂರ್ನಿ ವೇಳೆ ನಾನು ಮತ್ತಷ್ಟು ಚಿಕ್ಕವನಾದಂತೆ ತೋರುತ್ತಿತ್ತು. ಇದೀಗ ಅಭ್ಯಾಸದಲ್ಲಿ ಗಮನ ಕೇಂದ್ರೀಕರಿಸಿದ್ದೇನೆ ಎಂದು ಚಹಾಲ್ ಹಲವು ಘಟನೆಗಳ ಕುರಿತು ಹೇಳಿದ್ದಾರೆ.


