WPL ಹರಾಜು: ಸ್ಲಂ ಹುಡುಗಿ ಸಿಮ್ರನ್ ಶೇಖ್‌ಗೆ ₹1.9 ಕೋಟಿ! ಆರ್‌ಸಿಬಿ ತೆಕ್ಕೆಗೆ ಪ್ರೇಮ ರಾವತ್
ಮುಂಬೈನ ಧಾರಾವಿ ಸ್ಲಂನ ಹುಡುಗಿ ಸಿಮ್ರನ್ ಶೇಖ್ WPL ಮಿನಿ ಹರಾಜಿನಲ್ಲಿ ₹1.9 ಕೋಟಿಗೆ ಗುಜರಾತ್ ಜೈಂಟ್ಸ್ ತಂಡ ಸೇರಿದ್ದಾರೆ. ಈ ಮೂಲಕ ಅವರು WPL ಮಿನಿ ಹರಾಜಿನ ಅತಿ ದುಬಾರಿ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಬೆಂಗಳೂರು: ಮುಂಬೈನ ಧಾರಾವಿಯ ಸ್ಲಂ ಹುಡುಗಿ, ಯುವ ಆಲ್ರೌಂಡರ್ ಸಿಮ್ರನ್ ಶೇಖ್ ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಮಿನಿ ಹರಾಜಿನ ಅತಿ ದುಬಾರಿ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಮಿನಿ ಹರಾಜು ನಡೆಯಿತು. 120 ಆಟಗಾರ್ತಿರು ಹರಾಜು ಪಟ್ಟಿಯಲ್ಲಿದ್ದರು. ಈ ಪೈಕಿ 19 ಆಟಗಾರ್ತಿಯರನ್ನು 5 ತಂಡಗಳು ಖರೀದಿಸಿದವು. ನಾಲ್ವರು ಆಟಗಾರ್ತಿಯರು ₹1 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಬಿಕರಿಯಾದರು.
ಮುಂಬೈಗೆ ಮುಷ್ತಾಕ್ ಅಲಿ ಟಿ20 ಕಿರೀಟ; ರಜತ್ ಪಾಟೀದಾರ್ ಹೋರಾಟ ವ್ಯರ್ಥ!
22 ವರ್ಷದ ಸಿಮ್ರನ್ ಶೇಖ್‌ರನ್ನು ಗುಜರಾತ್ ಜೈಂಟ್ಸ್ ತಂಡ ₹1.9 ಕೋಟಿ ನೀಡಿ ಖರೀದಿಸಿತು. ವೆಸ್ಟ್‌ಇಂಡೀಸ್‌ನ ತಾರಾ ಆಟಗಾರ್ತಿ ಡಿಯಾಂಡ್ರ ಡೊಟಿನ್ ಕೂಡಾ ₹1.7 ಕೋಟಿಗೆ ಗುಜರಾತ್ ಪಾಲಾದರು. ತಮಿಳುನಾಡಿ ಜಿ.ಕಮಲಿನಿ ₹1.6 ಕೋಟಿಗೆ ಮುಂಬೈ ಇಂಡಿಯನ್ಸ್ ಸೇರ್ಪಡೆಗೊಂಡರು. ಪ್ರೇಮ ರಾವತ್‌ರನ್ನು ಹಾಲಿ ಚಾಂಪಿಯನ್ ಆರ್‌ಸಿಬಿ ₹1.2 ಕೋಟಿ ನೀಡಿ ಖರೀದಿಸಿತು.
ಕಳೆದ ಬಾರಿ ತಂಡದಲ್ಲಿದ್ದ ಬಹುತೇಕ ಆಟಗಾರ್ತಿಯರನ್ನು ಹರಾಜಿಗೂ ಮುನ್ನ ಫ್ರಾಂಚೈಸಿಗಳು ಉಳಿಸಿಕೊಂಡಿದ್ದವು. ಕೆಲ ಆಟಗಾರ್ತಿಯರನ್ನು ತಂಡದಿಂದ ಕೈಬಿಟ್ಟಿದ್ದವು. ಈ ಸ್ಥಾನಗಳನ್ನು ಹರಾಜಿನಲ್ಲಿ ಭರ್ತಿ ಮಾಡಿದವು. ಮುಂದಿನ ಡಬ್ಲ್ಯುಪಿಎಲ್ ಫೆ.21ರಿಂದ ಮಾ.16ರ ವರೆಗೆ ನಡೆಯಲಿದೆ.
ರಾಜ್ಯದ ನಿಕಿಗೆ ₹10 ಲಕ್ಷ, ಮೂವರು ಅನ್‌ಸೋಲ್ಡ್
ಹರಾಜಿನಲ್ಲಿ ಈ ಬಾರಿ ಕರ್ನಾಟಕದ ನಾಲ್ವರು ಪಾಲ್ಗೊಂಡರು. ಈ ಪೈಕಿ ನಿಕಿ ಪ್ರಸಾದ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ₹10 ಲಕ್ಷಕ್ಕೆ ಹರಾಜಾದರು. ಶುಭಾ ಸತೀಶ್, ಪ್ರತ್ಯುಷಾ ಸಿ., ಪ್ರತ್ಯೂಷಾ ಕುಮಾರ್ ಅನ್‌ಸೋಲ್ಡ್ ಆದರು.
ಇಂದು ಬೆಂಗ್ಳೂರಲ್ಲಿ ಡಬ್ಲ್ಯುಪಿಎಲ್ ಮಿನಿ ಹರಾಜು: 19 ಸ್ಥಾನಕ್ಕೆ 120 ಮಂದಿ ಅದೃಷ್ಟ ಪರೀಕ್ಷೆ
ಪ್ರೇಮಗೆ ₹1.2 ಕೋಟಿ ನೀಡಿದ ಆರ್‌ಸಿಬಿ ತಂಡ
ಉತ್ತರಾಖಂಡದ 23 ವರ್ಷದ ಆಲ್ರೌಂಡರ್ ಪ್ರೇಮ ರಾವತ್‌ಗೆ ಆರ್‌ಸಿಬಿ ₹1.2 ಕೋಟಿ ನೀಡಿ ಖರೀದಿಸಿತು. ಅವರು ₹10 ಲಕ್ಷ ಮೂಲೆಬೆಲೆ ಹೊಂದಿದ್ದರು. ಉಳಿದಂತೆ ಜೋಶಿತಾ, ರಾಘವಿ ಬಿಸ್ತ್, ಜಾಗ್ರವಿ ಪವಾರ್‌ರನ್ನು ತಲಾ ₹10 ಲಕ್ಷ ನೀಡಿ ತಂಡಕ್ಕೆ ಸೇರ್ಪಡೆಗೊಳಿಸಿತು.
ಹೀಥರ್, ಸ್ನೇಹ, ಅನ್‌ಸೋಲ್ಡ್
ಹರಾಜಿನಲ್ಲಿ ಪ್ರಮುಖ ಆಟಗಾರರು ಬಿಕರಿಯಾಗದೆ ಉಳಿದರು. ಹೀಥರ್ ನೈಟ್, ಲಿಜೆಲ್ಲೆ ಲೀ, ಲಾರೆನ್ ಬೆಲ್, ಡಾರ್ಸಿ ಬ್ರೌನ್, ಕಿಮ್ ಗಾರ್ಥ್, ಭಾರತದ ತಾರಾ ಆಲ್ರೌಂಡರ್ ಸ್ನೇಹ ರಾಣಾ, ಪೂನಂ ಯಾದವ್ ಸೇರಿ ಪ್ರಮುಖರು ಅನ್‌ಸೋಲ್ಡ್ ಆದರು.
ಸ್ಲಂನಲ್ಲಿ ಹುಡುಗರ ಜತೆ ಕ್ರಿಕೆಟ್ ಆಡ್ತಿದ್ದ ಸಿಮ್ರನ್
ವಿಶ್ವದ ಅತಿದೊಡ್ಡ ಸ್ಲಂಗಳಲ್ಲಿ ಒಂದಾಗಿರುವ ಧಾರಾವಿಯಲ್ಲಿ ಹುಟ್ಟಿ, ಬೆಳೆದ ಸಿಮ್ರನ್ ಬಾಲ್ಯದಲ್ಲಿ ಹುಡುಗರ ಜೊತೆಗೆ ಕ್ರಿಕೆಟ್ ಆಡುತ್ತಿದ್ದರು. ತಂದೆ ಎಲೆಕ್ಟ್ರಿಷಿಯನ್ ಆಗಿದ್ದು, ಕುಟುಂಬ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿತ್ತು. ಆರಂಭದಲ್ಲಿ ಸಿಮ್ರನ್ ಆಟಕ್ಕೆ ಮನೆಯಲ್ಲಿ ಬೆಂಬಲವಿರಲಿಲ್ಲ. ಆದರೆ ಸ್ಥಳೀಯ ಯುನೈಟೆಡ್ ಕ್ರಿಕೆಟರ್ಸ್ ಕ್ಲಬ್ ಸೇರ್ಪಡೆಗೊಂಡ ಬಳಿಕ ಸಿಮ್ರನ್‌ನ ಕೌಶಲ್ಯ ಗಮನಿಸಿದ ಕೋಚ್‌ಗಳು, ಅವರನ್ನು ಕ್ರಿಕೆಟ್‌ನಲ್ಲಿ ಬೆಳೆಯುವಂತೆ ಮಾಡಿದರು. 2023ರ ಡಬ್ಲ್ಯುಪಿಎಲ್‌ನಲ್ಲಿ ಯುಪಿ ವಾರಿಯರ್ಸ್‌ಗೆ ₹10 ಲಕ್ಷಕ್ಕೆ ಸೇರ್ಪಡೆಗೊಂಡಿದ್ದ ಸಿಮ್ರನ್, ವೈಫಲ್ಯ ಅನುಭವಿಸಿದ್ದರು. ಕಳೆದ ವರ್ಷ ಹರಾಜಿನಲ್ಲಿ ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ.
WPL ಅಂಕಿ-ಅಂಶ:
19 ಆಟಗಾರ್ತಿಯರು: ಹರಾಜಿನಲ್ಲಿ ಒಟ್ಟು 19 ಆಟಗಾರ್ತಿಯರು ವಿವಿಧ ತಂಡಗಳ ಪಾಲಾದರು.
9.05 ಕೋಟಿ ರು.: ಹರಾಜಿನಲ್ಲಿ 5 ತಂಡಗಳು ಖರ್ಚು ಮಾಡಿದ ಮೊತ್ತ ₹9.05 ಕೋಟಿ.
05 ವಿದೇಶಿಗರು: ವಿವಿಧ ತಂಡಗಳಿಗೆ ಹರಾಜಾದ 19 ಮಂದಿ ಪೈಕಿ 5 ವಿದೇಶಿ ಆಟಗಾರ್ತಿಯರು.