Deodhar Trophy ಮಯಾಂಕ್‌ ಅಗರ್‌ವಾಲ್ ಆಕರ್ಷಕ ಬ್ಯಾಟಿಂಗ್, ದಕ್ಷಿಣ ವಲಯಕ್ಕೆ ಸತತ ಎರಡನೇ ಜಯ..!

ದೇವಧರ್ ಟ್ರೋಫಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ದಕ್ಷಿಣ ವಲಯ
ಆಕರ್ಷಕ ಬ್ಯಾಟಿಂಗ್ ಮೂಲಕ ಮಿಂಚಿದ ನಾಯಕ ಮಯಾಂಕ್‌ ಅಗರ್‌ವಾಲ್‌
ಪಶ್ಚಿಮ ವಲಯ ಎದುರು 12 ರನ್ ರೋಚಕ ಜಯ ಸಾಧಿಸಿದ ದಕ್ಷಿಣ ವಲಯ

Deodhar Trophy Mayanak Agarwal 98 runs batting helps South Zone register consecutive win kvn

ಪುದುಚೇರಿ(ಜು.27): ದೇವಧರ್‌ ಟ್ರೋಫಿ ಲಿಸ್ಟ್‌ ‘ಎ’ ಟೂರ್ನಿಯಲ್ಲಿ ದಕ್ಷಿಣ ವಲಯ ಸತತ 2ನೇ ಗೆಲುವು ಸಾಧಿಸಿದೆ. ಬುಧವಾರ ನಡೆದ ಪಶ್ಚಿಮ ವಲಯ ವಿರುದ್ಧದ ಪಂದ್ಯದಲ್ಲಿ 12 ರನ್‌ ಗೆಲುವು ಸಾಧಿಸಿತು. ನಾಯಕ ಮಯಾಂಕ್‌ ಅಗರ್‌ವಾಲ್‌(98 ರನ್‌, 115 ಎಸೆತ, 9 ಬೌಂಡರಿ)ರ ಏಕಾಂಗಿ ಹೋರಾಟದ ನೆರವಿನಿಂದ ದಕ್ಷಿಣ ವಲಯ 46.4 ಓವರಲ್ಲಿ 206 ರನ್‌ಗೆ ಆಲೌಟ್‌ ಆಯಿತು. 

ಸುಲಭ ಗುರಿ ಬೆನ್ನತ್ತಿದ ಪಶ್ಚಿಮ ವಲಯ 96 ರನ್‌ಗೆ 5 ವಿಕೆಟ್‌ ಕಳೆದುಕೊಂಡರೂ, 6ನೇ ವಿಕೆಟ್‌ಗೆ ಶಿವಂ ದುಬೆ ಹಾಗೂ ಅತೀತ್‌ ಶೇಠ್‌ 65 ರನ್‌ ಜೊತೆಯಾಟವಾಡಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಆದರೆ ಸ್ಪಿನ್ನರ್‌ಗಳಾದ ಸಾಯಿ ಕಿಶೋರ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ದಕ್ಷಿಣ ವಲಯವನ್ನು ಸೋಲಿನಿಂದ ಕಾಪಾಡಿದರು. ಪಶ್ಚಿಮ ವಲಯ 33 ರನ್‌ಗೆ ಕೊನೆಯ 5 ವಿಕೆಟ್‌ ಕಳೆದುಕೊಂಡು 36.2 ಓವರಲ್ಲಿ 194 ರನ್‌ಗೆ ಆಲೌಟ್‌ ಆಯಿತು. ಈ ಜಯದೊಂದಿಗೆ ದಕ್ಷಿಣ ವಲಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.

ಸ್ಕೋರ್‌: 
ದಕ್ಷಿಣ ವಲಯ 46.4 ಓವರಲ್ಲಿ 206/10(ಮಯಾಂಕ್‌ 98, ಅರುಣ್‌ 23, ಪಾರ್ಥ್‌ 3-25) 
ಪಶ್ಚಿಮ ವಲಯ 36.2 ಓವರಲ್ಲಿ 194/10(ಸರ್ಫರಾಜ್ 42, ಅತೀತ್‌ 40, ಸಾಯಿ ಕಿಶೋರ್‌ 3-44)

ಪೂರ್ವ, ಉತ್ತರ ವಲಯಗಳಿಗೆ ಜಯ

ಬುಧವಾರ ನಡೆದ ಮತ್ತೆರೆಡು ಪಂದ್ಯಗಳಲ್ಲಿ ಪೂರ್ವ ಹಾಗೂ ಉತ್ತರ ವಲಯ ತಂಡಗಳು ಜಯ ಸಾಧಿಸಿದವು. ಕೇಂದ್ರ ವಲಯ ವಿರುದ್ಧ ಉತ್ತರ ವಲಯ 48 ರನ್‌ಗಳಿಂದ ಗೆದ್ದರೆ, ಈಶಾನ್ಯದ ವಿರುದ್ಧ ಪಶ್ಚಿಮ ವಲಯ 8 ವಿಕೆಟ್‌ ಜಯ ಪಡೆಯಿತು.

ICC Test Rankings: 11 ಸ್ಥಾನ ಜಿಗಿದ ಯಶಸ್ವಿ ಜೈಸ್ವಾಲ್‌, ಟಾಪ್ 10 ಪಟ್ಟಿಯೊಳಗೆ ರೋಹಿತ್ ಶರ್ಮಾಗೆ ಸ್ಥಾನ..!

ಟೆಸ್ಟ್‌: ಲಂಕಾ ವಿರುದ್ಧ ಪಾಕ್‌ ಬೃಹತ್‌ ಮೊತ್ತ

ಕೊಲಂಬೊ: ಅಬ್ದುಲ್ಲಾ ಶಫೀಕ್‌(201)ರ ದ್ವಿಶತಕ ಹಾಗೂ ಅಘಾ ಸಲ್ಮಾನ್‌(ಔಟಾಗದೆ 132)ರ ಶತಕದ ನೆರವಿನಿಂದ, ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 563 ರನ್‌ ಗಳಿಸಿದೆ. 397 ರನ್‌ ಮುನ್ನಡೆ ಪಡೆದಿರುವ ಪಾಕಿಸ್ತಾನ, ಇನ್ನಿಂಗ್ಸ್‌ ಜಯ ಸಾಧಿಸಿ 2-0ಯಲ್ಲಿ ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಮೊದಲ ಇನ್ನಿಂಗ್ಸಲ್ಲಿ ಲಂಕಾ 166ಕ್ಕೆ ಆಲೌಟ್‌ ಆಗಿತ್ತು.

ಆ್ಯಷಸ್‌: ಇಂದಿನಿಂದ 5ನೇ ಟೆಸ್ಟ್‌ ಆರಂಭ

ಲಂಡನ್‌: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ಆ್ಯಷಸ್‌ ಸರಣಿಯ 5ನೇ ಟೆಸ್ಟ್‌ ಗುರುವಾರದಿಂದ ಆರಂಭಗೊಳ್ಳಲಿದೆ. ಇಲ್ಲಿನ ದಿ ಓವಲ್‌ ಕ್ರೀಡಾಂಗಣ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಆಸ್ಟ್ರೇಲಿಯಾ 3-1ರಲ್ಲಿ ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಟ್ರೋಫಿ ತನ್ನದಾಗಿಸಿಕೊಳ್ಳುವ ಅವಕಾಶ ಕೈತಪ್ಪಿದ್ದರೂ, ಈ ಪಂದ್ಯ ಗೆದ್ದು 2-2ರಲ್ಲಿ ಸರಣಿ ಸಮಗೊಳಿಸಲು ಇಂಗ್ಲೆಂಡ್‌ ಕಾತರಿಸುತ್ತಿದೆ.

ಅಂತಿಮ ಆ್ಯಷಸ್‌ ಟೆಸ್ಟ್ ಪಂದ್ಯಕ್ಕೂ ಮುನ್ನ ನಿವೃತ್ತಿ ಬಗ್ಗೆ ಮೌನ ಮುರಿದ ಜೇಮ್ಸ್ ಆ್ಯಂಡರ್‌ಸನ್..!

7 ವಿಕೆಟ್‌ ಕಿತ್ತ ಮಲೇಷ್ಯಾ ವೇಗಿ: ಟಿ20 ದಾಖಲೆ!

ಕೌಲಾಲಂಪುರ: ಚೀನಾ ವಿರುದ್ಧದ ಪಂದ್ಯದಲ್ಲಿ ಮಲೇಷ್ಯಾದ ಸ್ಯಾಜ್ರುಲ್‌ ಇದ್ರುಸ್‌ 8 ರನ್‌ಗೆ 7 ವಿಕೆಟ್‌ ಕಬಳಿಸಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಶ್ರೇಷ್ಠ ವೈಯಕ್ತಿಕ ಬೌಲಿಂಗ್‌ ಪ್ರದರ್ಶನದ ವಿಶ್ವ ದಾಖಲೆ ಬರೆದಿದ್ದಾರೆ. ಅಂ.ರಾ.ಟಿ20ಯಲ್ಲಿ ಬೌಲರ್‌ ಒಬ್ಬ 7 ವಿಕೆಟ್‌ ಪಡೆದಿದ್ದು ಇದೇ ಮೊದಲು. ಒಟ್ಟಾರೆ ಟಿ20ಯಲ್ಲೂ ಇದು ಶ್ರೇಷ್ಠ ವೈಯಕ್ತಿಕ ಪ್ರದರ್ಶನ ಎನಿಸಿದ್ದು, 7 ವಿಕೆಟ್‌ ಕಬಳಿಸಿದ 2ನೇ ಬೌಲರ್‌ ಎನ್ನುವ ಹಿರಿಮೆಗೆ ಇದ್ರುಸ್‌ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ ಟಿ20 ಬ್ಲ್ಯಾಸ್ಟ್‌ ಟೂರ್ನಿಯಲ್ಲಿ ಲೀಚೆಸ್ಟರ್‌ನ ಕಾಲಿನ್‌ ಆ್ಯಕರ್‌ಮನ್‌ ಬರ್ಮಿಂಗ್‌ಹ್ಯಾಮ್‌ ವಿರುದ್ಧ 18 ರನ್‌ಗೆ 7 ವಿಕೆಟ್‌ ಪಡೆದಿದ್ದರು.

Latest Videos
Follow Us:
Download App:
  • android
  • ios