ಐಪಿಎಲ್ ಮಿನಿ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಫಾಫ್ ಡು ಪ್ಲೆಸಿಸ್ ಹಾಗೂ ಜೇಕ್ ಫ್ರೇಸರ್ ಮೆಕ್‌ಗರ್ಕ್ ಸೇರಿದಂತೆ ಏಳು ಆಟಗಾರರನ್ನು ಕೈಬಿಟ್ಟಿದೆ. ಕೆ ಎಲ್ ರಾಹುಲ್, ಅಕ್ಷರ್ ಪಟೇಲ್ ಅವರಂತಹ ಪ್ರಮುಖರನ್ನು ಉಳಿಸಿಕೊಂಡಿದೆ.

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್‌ಗೇರಲು ವಿಫಲವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಸಾಕಷ್ಟು ಅಳೆದು-ತೂಗಿ ಏಳು ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. ಅದರಲ್ಲಿ ಇಬ್ಬರು ಸ್ಪೋಟಕ ಬ್ಯಾಟರ್‌ಗಳು ಎನ್ನುವುದು ವಿಶೇಷ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ದಕ್ಷಿಣ ಆಫ್ರಿಕಾ ಮೂಲದ ಅನುಭವಿ ಸ್ಫೋಟಕ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಹಾಗೂ ಆಸ್ಟ್ರೇಲಿಯಾದ ಯುವ ಸ್ಪೋಟಕ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗರ್ಕ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ.

ಹೌದು, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅನುಭವಿ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಹಾಗೂ ಯುವ ಬ್ಯಾಟರ್ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಹೀಗಾಗಿ ಈ ಇಬ್ಬರು ಆಟಗಾರರನ್ನು ಕೈಬಿಡಲಾಗಿದೆ. ಇನ್ನು ಮತ್ತೋರ್ವ ಸ್ಪೋಟಕ ಬ್ಯಾಟರ್ ಡೊನೊವನಾ ಫೆರೆರಾ ಅವರನ್ನು ಒಂದು ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್‌ಗೆ ಮಾರಾಟ ಮಾಡಿದೆ.

Scroll to load tweet…

ಇದಷ್ಟೇ ಅಲ್ಲದೇ ಬ್ಯಾಕ್‌ಅಪ್ ವಿಕೆಟ್ ಕೀಪರ್ ಆಗಿದ್ದ ಸಿದ್ದಿಕ್ಕುಲ್ಲಾ ಅಥಲ್, ಆಲ್ರೌಂಡರ್ ಮನ್ವಂಥ್ ಕುಮಾರ್ ಹಾಗೂ ವೇಗಿಗಳಾದ ದರ್ಶನ್ ನಾಲ್ಕಂಡೆ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ರಿಲೀಸ್ ಮಾಡಿದೆ.

ಪ್ರಮುಖ ಆಟಗಾರರನ್ನು ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್:

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ರಮುಖ ಆಟಗಾರರಾದ ಕೆ ಎಲ್ ರಾಹುಲ್, ಅಕ್ಷರ್ ಪಟೇಲ್, ಟ್ರಿಸ್ಟಿನ್ ಸ್ಟಬ್ಸ್, ಕರುಣ್ ನಾಯರ್, ಅಶುತೋಷ್ ಶರ್ಮಾ, ಕುಲ್ದೀಪ್ ಯಾದವ್, ಮಿಚೆಲ್ ಸ್ಟಾರ್ಕ್, ಟಿ, ನಟರಾಜನ್ ಹೀಗೆ ಪ್ರಮುಖ ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ.

ಹರಾಜಿನಲ್ಲಿ 21.8 ಕೋಟಿ ಪರ್ಸ್ ಉಳಿಸಿಕೊಂಡ ಡೆಲ್ಲಿ ಕ್ಯಾಪಿಟಲ್ಸ್:

ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬರುವ ಐಪಿಎಲ್ ಮಿನಿ ಹರಾಜಿಗೆ ಬರೋಬ್ಬರಿ 21.8 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ. ಈ ಮೊತ್ತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಗರಿಷ್ಠ 8 ಆಟಗಾರರನ್ನು ಖರೀದಿಸಲು ಅವಕಾಶವಿದೆ.

ಮಿನಿ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ರೀಟೈನ್ ಮಾಡಿಕೊಂಡ ಆಟಗಾರರ ವಿವರ ಹೀಗಿದೆ:

ಕೆ ಎಲ್ ರಾಹುಲ್, ಅಭಿಷೇಕ್ ಪೊರೆಲ್, ಟ್ರಿಸ್ಟಿನ್ ಸ್ಟಬ್ಸ್, ಸಮೀರ್ ರಿಜ್ವಿ, ಕರುಣ್ ನಾಯರ್, ಅಕ್ಷರ್ ಪಟೇಲ್(ನಾಯಕ), ಅಶುತೋಶ್ ಶರ್ಮಾ, ವಿಪ್ರಾಜ್ ನಿಗಮ್, ಮಾಧವ್ ತಿವಾರಿ, ತ್ರಿಪುರಣ್ ವಿಜಯ್, ಅಜಯ್ ಮಂಡಲ್, ಕುಲ್ದೀಪ್ ಯಾದವ್, ಮಿಚೆಲ್ ಸ್ಟಾರ್ಕ್, ಟಿ ನಟರಾಜನ್, ಮುಕೇಶ್ ಕುಮಾರ್, ದುಸ್ಮಂತಾ ಚಮೀರಾ.