Kannada

ಐಪಿಎಲ್ 2026 ರೀಟೆನ್ಶನ್:

10 ತಂಡಗಳ ಪೈಕಿ ಯಾರ ಪರ್ಸ್‌ನಲ್ಲಿ ಹೆಚ್ಚು ಹಣವಿದೆ?

Kannada

ಐಪಿಎಲ್ 2026 ರೀಟೆನ್ಶನ್ ಪಟ್ಟಿ

ಐಪಿಎಲ್ 2026ರ ರೀಟೆನ್ಶನ್ ಪಟ್ಟಿಯನ್ನು ನವೆಂಬರ್ 15 ರಂದು ಬಿಡುಗಡೆ ಮಾಡಲಾಗುತ್ತದೆ. ಇದರ ನಂತರ, ಯಾವ ತಂಡವು ಯಾವ ಆಟಗಾರರನ್ನು ಉಳಿಸಿಕೊಂಡಿದೆ ಮತ್ತು ಯಾರನ್ನು ಕೈಬಿಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.

Image credits: stockPhoto
Kannada

ಯಾವ ತಂಡದ ಬಳಿ ಎಷ್ಟು ಹಣವಿದೆ

ಐಪಿಎಲ್‌ನ ಎಲ್ಲಾ 10 ತಂಡಗಳ ಪರ್ಸ್‌ನಲ್ಲಿ ಎಷ್ಟು ಹಣ ಉಳಿದಿದೆ ಎಂಬುದನ್ನು ಇಲ್ಲಿ ನಾವು ನಿಮಗೆ ಹೇಳುತ್ತಿದ್ದೇವೆ. 

Image credits: stockPhoto
Kannada

ಪಂಜಾಬ್ ಕಿಂಗ್ಸ್ (PBKS)

ಕಳೆದ ಸೀಸನ್‌ನಲ್ಲಿ ಫೈನಲ್‌ ತಲುಪಿದ್ದ ಪಂಜಾಬ್‌ ಕಿಂಗ್ಸ್‌ ಬಳಿ ಒಟ್ಟು 35 ಲಕ್ಷ ರೂಪಾಯಿ ಉಳಿದಿದೆ. ಅವರ ತಂಡದಲ್ಲಿ ಹಲವು ದೊಡ್ಡ ಆಟಗಾರರಿದ್ದಾರೆ.

Image credits: ANI
Kannada

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಈ ಬಾರಿ ತವರು ಮೈದಾನ ಬದಲಾಗಿದೆ. ಆದರೆ, ಪರ್ಸ್‌ನಲ್ಲಿ ಹಣದ ಕೊರತೆಯಿಲ್ಲ. ಫ್ರಾಂಚೈಸಿ ಬಳಿ 75 ಲಕ್ಷ ರೂಪಾಯಿ ಇದೆ.

Image credits: ANI
Kannada

ರಾಜಸ್ಥಾನ್ ರಾಯಲ್ಸ್ (RR)

ಐಪಿಎಲ್ 2026ಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡ ಸಾಕಷ್ಟು ಚರ್ಚೆಯಲ್ಲಿದೆ. ಸದ್ಯ ಅವರ ಬಳಿ 30 ಲಕ್ಷ ರೂಪಾಯಿ ಪರ್ಸ್‌ನಲ್ಲಿದೆ.

Image credits: stockPhoto
Kannada

ಸನ್‌ರೈಸರ್ಸ್ ಹೈದರಾಬಾದ್ (SRH)

ಕಾವ್ಯಾ ಮಾರನ್ ಅವರ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 2026ರ ಹರಾಜಿಗೂ ಮುನ್ನ ಚರ್ಚೆಯಲ್ಲಿದೆ. ಸದ್ಯ ಈ ತಂಡದ ಬಳಿ 20 ಲಕ್ಷ ರೂಪಾಯಿ ಉಳಿದಿದೆ.

Image credits: ANI
Kannada

ಡೆಲ್ಲಿ ಕ್ಯಾಪಿಟಲ್ಸ್ (DC)

ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಒಂದೇ ಒಂದು ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ತಂಡವು ತನ್ನ ಪರ್ಸ್‌ನಲ್ಲಿ ಒಟ್ಟು 20 ಲಕ್ಷ ರೂಪಾಯಿಗಳನ್ನು ಉಳಿಸಿಕೊಂಡಿದೆ.

Image credits: ANI
Kannada

ಗುಜರಾತ್ ಟೈಟಾನ್ಸ್ (GT)

ಐಪಿಎಲ್ 2026ರ ರೀಟೆನ್ಶನ್‌ಗೂ ಮುನ್ನ ಗುಜರಾತ್ ಟೈಟಾನ್ಸ್ ಬಳಿ ಸದ್ಯ 15 ಲಕ್ಷ ರೂಪಾಯಿ ಉಳಿದಿದೆ.

Image credits: ANI
Kannada

ಲಖನೌ ಸೂಪರ್ ಜೈಂಟ್ಸ್ (LSG)

ಲಖನೌ ಸೂಪರ್ ಜೈಂಟ್ಸ್ ತಂಡದ ಕಳೆದ ಸೀಸನ್ ತುಂಬಾ ಕಳಪೆಯಾಗಿತ್ತು. ಆದರೆ, ಈ ಬಾರಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಲಿದೆ. ಅವರ ಬಳಿ 10 ಲಕ್ಷ ರೂಪಾಯಿ ಉಳಿದಿದೆ.

Image credits: ANI
Kannada

ಚೆನ್ನೈ ಸೂಪರ್ ಕಿಂಗ್ಸ್-ಕೋಲ್ಕತ್ತಾ ನೈಟ್ ರೈಡರ್ಸ್

ಐಪಿಎಲ್ 2026ರ ರೀಟೆನ್ಶನ್‌ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಲಾ 5 ಲಕ್ಷ ರೂಪಾಯಿಗಳನ್ನು ತಮ್ಮ ಪರ್ಸ್‌ನಲ್ಲಿ ಉಳಿಸಿಕೊಂಡಿವೆ.

Image credits: ANI

ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಭಾರತೀಯ ಬ್ಯಾಟರ್‌ಗಳಿವರು!

ಐಪಿಎಲ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಟಾಪ್ 5 ಆಟಗಾರರಿವರು!

ರಶೀದ್ ಖಾನ್‌ಗಿಂತ ಮೊದಲು 2 ಮದುವೆಯಾದ ಟಾಪ್ 5 ಕ್ರಿಕೆಟಿಗರಿವರು!

ಐಪಿಎಲ್‌ನಲ್ಲಿ ಎಂದಿಗೂ ತಂಡದಿಂದ ರಿಲೀಸ್ ಆಗದ ಟಾಪ್ 5 ಸ್ಟಾರ್ ಆಟಗಾರರಿವರು!