ಡು ಆರ್ ಡೈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ರಾಯಲ್ಸ್ ಸವಾಲು
ರಾಜಸ್ಥಾನದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಬೇಕಿದ್ದರೆ ಡೆಲ್ಲಿಯ ಸ್ಪಿನ್ ಜೋಡಿಯಾದ ಅಕ್ಷರ್ ಪಟೇಲ್ (ಎಕಾನಮಿ 7.24) ಹಾಗೂ ಕುಲ್ದೀಪ್ ಯಾದವ್ (ಎಕಾನಮಿ 8.45) ಅಸಾಧಾರಣ ಪ್ರದರ್ಶನ ತೋರಬೇಕು. ಈ ಇಬ್ಬರು ಮಾತ್ರ 9ಕ್ಕಿಂತ ಕಡಿಮೆ ಎಕಾನಮಿ ರೇಟ್ ಹೊಂದಿದ್ದಾರೆ.
ನವದೆಹಲಿ(ಮೇ.07): 11 ಪಂದ್ಯಗಳಲ್ಲಿ 6ರಲ್ಲಿ ಸೋತು, ಕೇವಲ 5 ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್, ಲೀಗ್ ಹಂತದ ತನ್ನ 12ನೇ ಪಂದ್ಯದಲ್ಲಿ ಮಂಗಳವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಲಿದೆ. ಡೆಲ್ಲಿ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ತನ್ನ ಸ್ಫೋಟಕ ಬ್ಯಾಟರ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಮತ್ತೊಂದೆಡೆ 10 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿ ಈಗಾಗಲೇ ಪ್ಲೇ-ಆಫ್ ಪ್ರವೇಶಿಸುವುದನ್ನು ಬಹುತೇಕ ಖಚಿತಪಡಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್, ಈ ಪಂದ್ಯದಲ್ಲಿ ಜಯಿಸಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿದೆ. ಮತ್ತೊಂದು ಜಯ ಪ್ಲೇ-ಆಫ್ ಪ್ರವೇಶವನ್ನು ಅಧಿಕೃತಗೊಳಿಸಲಿದೆ.
ಸನ್‌ರೈಸರ್ಸ್ ಹೈದರಾಬಾದ್ ಮೇಲೆ ಸೂರ್ಯಕುಮಾರ್ ಯಾದವ್ ಸೆಂಚುರಿ ದಾಳಿ!
ರಾಜಸ್ಥಾನದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಬೇಕಿದ್ದರೆ ಡೆಲ್ಲಿಯ ಸ್ಪಿನ್ ಜೋಡಿಯಾದ ಅಕ್ಷರ್ ಪಟೇಲ್ (ಎಕಾನಮಿ 7.24) ಹಾಗೂ ಕುಲ್ದೀಪ್ ಯಾದವ್ (ಎಕಾನಮಿ 8.45) ಅಸಾಧಾರಣ ಪ್ರದರ್ಶನ ತೋರಬೇಕು. ಈ ಇಬ್ಬರು ಮಾತ್ರ 9ಕ್ಕಿಂತ ಕಡಿಮೆ ಎಕಾನಮಿ ರೇಟ್ ಹೊಂದಿದ್ದಾರೆ. ಖಲೀಲ್ (9.47), ಮುಕೇಶ್ (11.05), ನೋಕಿಯ(13.36)ರಿಂದ ಸುಧಾರಿತ ಪ್ರದರ್ಶನ ಮೂಡಿಬಂದರಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ಜಯದ ಆಸೆ ಜೀವಂತವಾಗಿರಿಸಿಕೊಳ್ಳಬಹುದು.
ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 1 ರನ್‌ನಿಂದ ಸೋತಿತ್ತು. ತಂಡ ತನ್ನ ತಾರಾ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್, ಆರ್.ಅಶ್ವಿನ್ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದೆ.
ಐಸಿಸಿ ಟಿ20 ವಿಶ್ವಕಪ್ ಮೇಲೆ ಉಗ್ರರ ಕರಿ ನೆರಳು..! ಪಾಕ್ ಮೂಲದ ಭಯೋತ್ಪಾದಕ ಸಂಘಟನೆಯಿಂದ ವಾರ್ನಿಂಗ್
ಒಟ್ಟು ಮುಖಾಮುಖಿ: 28
ರಾಜಸ್ಥಾನ: 15
ಡೆಲ್ಲಿ: 13
ಸಂಭವನೀಯ ಆಟಗಾರರ ಪಟ್ಟಿ
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ರಿಯಾನ್ ಪರಾಗ್, ಶಿಮ್ರೊನ್ ಹೆಟ್ಮೇಯರ್, ರೋವ್ಮನ್ ಪೋವೆಲ್, ಧೃವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಸಂದೀಪ್ ಶರ್ಮಾ, ಯುಜುವೇಂದ್ರ ಚಹಲ್.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಜೇಕ್ ಫ್ರೇಸರ್, ಅಭಿಷೇಕ್ ಪೊರೆಲ್, ಶಾಯ್ ಹೋಪ್, ರಿಷಭ್ ಪಂತ್ (ನಾಯಕ), ಅಕ್ಷರ್ ಪಟೇಲ್, ಟ್ರಿಸ್ಟಿನ್ ಸ್ಟಬ್ಸ್, ಕುಶಾಗ್ರ, ಕುಲ್ದೀಪ್ ಯಾದವ್, ರಸಿಖ್ ಸಲಾಂ, ಲಿಜಾಡ್ ವಿಲಿಯಮ್ಸ್, ಖಲೀಲ್ ಅಹಮದ್.
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ