* ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ಬಗ್ಗುಬಡಿದ ಟೀಂ ಇಂಡಿಯಾ* ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ* ಐರ್ಲೆಂಡ್ ಎದುರು 7 ವಿಕೆಟ್‌ಗಳ ಜಯ ಸಾಧಿಸಿದ ಭಾರತ

ಡಬ್ಲಿನ್‌(ಜೂ.27): ಐರ್ಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ಕ್ರಿಕೆಟ್ ತಂಡವು 7 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ಹಾರ್ದಿಕ್‌ ಪಾಂಡ್ಯ ಗೆಲುವಿನ ಸಿಹಿ ಅನುಭವಿಸಿದರು. ಮಳೆಯ ಅಡಚಣೆಯ ನಡುವೆಯೂ ಹಾರ್ದಿಕ್ ಪಾಂಡ್ಯ ಪಡೆ ಭರ್ಜರಿ ಗೆಲುವು ಸಾಧಿಸಿತು.

ಟಾಸ್‌ ಬಳಿಕ ಸುರಿದ ಭಾರೀ ಮಳೆಯಿಂದಾಗಿ ಪಂದ್ಯ ಸುಮಾರು 3 ಗಂಟೆ ತಡವಾಗಿ ಆರಂಭವಾಯಿತು. ಹೀಗಾಗಿ ಪಂದ್ಯವನ್ನು ತಲಾ 12 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಮೊದಲ ಬ್ಯಾಟ್‌ ಮಾಡಿದ ಐರ್ಲೆಂಡ್‌ 4 ವಿಕೆಟ್‌ಗೆ 108 ರನ್‌ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ 9.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಜಯಸಾಧಿಸಿತು. ಆರಂಭದಲ್ಲೇ ಸ್ಫೋಟಕ ಆಟವಾಡಿದ ಇಶಾನ್‌ ಕಿಶನ್‌ (Ishan Kishan) 11 ಎಸೆತಗಳಲ್ಲಿ 26 ರನ್‌ ಸಿಡಿಸಿದರು. ಸೂರ‍್ಯಕುಮಾರ್‌ ಯಾದವ್‌ ತಾವೆದುರಿಸಿದ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ದೀಪಕ್‌ ಹೂಡಾ (Deepak Hooda) -ಹಾರ್ದಿಕ್‌ ಪಾಂಡ್ಯ(24) ಜೋಡಿ 64 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಿತು. ಹೂಡಾ 47 ರನ್‌ ಗಳಿಸಿದರು.

Scroll to load tweet…

ಟೆಕ್ಟರ್‌ ಸ್ಫೋಟಕ ಫಿಫ್ಟಿ

ಆರಂಭದಲ್ಲೇ ಕುಸಿತ ತಂಡ ಐರ್ಲೆಂಡ್‌ 4 ಓವರ್‌ಗಳ ಪವರ್‌ಪ್ಲೇ ಮುಕ್ತಾಯದ ವೇಳೆಗೆ 3 ವಿಕೆಟ್‌ಗೆ ಕೇವಲ 22 ರನ್‌ ಗಳಿಸಿತ್ತು. ಬಳಿಕ ಸ್ಫೋಟಕ ಆಟಕ್ಕೆ ಒತ್ತುಕೊಟ್ಟ ತಂಡ 2 ಓವರಲ್ಲಿ 30 ರನ್‌ ದೋಚಿತು. ಹ್ಯಾರಿ ಟೆಕ್ಟರ್‌ ಭಾರತೀಯ ಬೌಲರ್‌ಗಳನ್ನು ಚೆಂಡಾಡಿದರು. ಅವರು ಕೇವಲ 33 ಎಸೆತಗಳಲ್ಲಿ 64 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು. ಅವರ ಇನ್ನಿಂಗ್‌್ಸನಲ್ಲಿ 6 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು. ಭುವನೇಶ್ವರ್‌ 3 ಓವರಲ್ಲಿ 1 ಮೇಡನ್‌ ಸಹಿತ 16 ರನ್‌ ನೀಡಿ 1 ವಿಕೆಟ್‌ ಕಿತ್ತರೆ, ಚಹಲ್‌ 11 ರನ್‌ಗೆ 1 ವಿಕೆಟ್‌ ಪಡೆದರು.

ಸ್ಕೋರ್‌: 
ಐರ್ಲೆಂಡ್‌ 12 ಓವರಲ್ಲಿ 108/4(ಟೆಕ್ಟರ್‌ 64, ಚಹಲ್‌ 1-11, ಭುವನೇಶ್ವರ್‌ 1-16)

ಭಾರತ 9.2 ಓವರಲ್ಲಿ 111(ಹೂಡಾ 47*, ಇಶಾನ್‌ 26, ಯಂಗ್‌ 2-18)

ಅಭ್ಯಾಸ ಪಂದ್ಯ: ಭಾರತದ-ಲೀಸೆಸ್ಟರ್‌ಶೈರ್‌ ಪಂದ್ಯ ಡ್ರಾ

ಲೀಸೆಸ್ಟರ್‌: ಭಾರತ ಹಾಗೂ ಲೀಸೆಸ್ಟರ್‌ಶೈರ್‌ ನಡುವಿನ 4 ದಿನಗಳ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಗೆಲುವಿಗೆ 367 ರನ್‌ ಗುರಿ ಪಡೆದಿದ್ದ ಲೀಸೆಸ್ಟರ್‌ಶೈರ್‌ 4 ವಿಕೆಟ್‌ಗೆ 219 ರನ್‌ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲು ನಿರ್ಧರಿಸಲಾಯಿತು. ಲೀಸೆಸ್ಟರ್‌ಶೈರ್‌ ಪರ ಶುಭ್‌ಮನ್‌ ಗಿಲ್‌ 62, ಲೂಯಿಸ್‌ ಕಿಂಬೆರ್‌ ಔಟಾಗದೆ 58 ರನ್‌ ಸಿಡಿಸಿದರು. ಭಾರತದ ಪರ ಆರ್‌.ಅಶ್ವಿನ್‌ 2 ವಿಕೆಟ್‌ ಕಿತ್ತರು.

#IREvIND ಐರ್ಲೆಂಡ್-ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ!

ಇದಕ್ಕೂ ಮೊದಲು 2 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ ಭಾರತ 6 ವಿಕೆಟ್‌ 343 ರನ್‌ ಗಳಿಸಿ ಇನ್ನಿಂಗ್‌್ಸ ಡಿಕ್ಲೇರ್‌ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್‌್ಸನಲ್ಲಿ ಭಾರತ 8 ವಿಕೆಟ್‌ಗೆ 246 ರನ್‌ ಗಳಿಸಿದ್ದರೆ, ಲೀಸೆಸ್ಟರ್‌ಶೈರ್‌ 244ಕ್ಕೆ ಆಲೌಟ್‌ ಆಗಿತ್ತು. ಕನ್ನಡಿಗ ಪ್ರಸಿದ್‌್ಧ ಕೃಷ್ಣ ಹಾಗೂ ಜಸ್‌ಪ್ರೀತ್‌ ಬುಮ್ರಾ ಪಂದ್ಯದಲ್ಲಿ ಎರಡೂ ತಂಡಗಳ ಬೌಲಿಂಗ್‌ ಮಾಡಿದರೆ, ಹನುಮ ವಿಹಾರಿ ಮತ್ತು ಶುಭ್‌ಮನ್‌ ಗಿಲ್‌ ಎರಡೂ ತಂಡಗಳಲ್ಲಿ ಬ್ಯಾಟ್‌ ಮಾಡುವ ಅವಕಾಶ ಪಡೆದುಕೊಂಡರು.