ದೀಪಕ್ ಹೂಡ ಹಾಗೂಯ ಆಯುಷ್ ಬದೋನಿ ಹಾಫ್ ಸೆಂಚುರಿ 6 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿದ ಲಖನೌ ಸೂಪರ್‌ಜೈಂಟ್ಸ್ ಮುಂಬೈನ ವಾಂಖೆಡೆಯಲ್ಲಿ ನಡೆಯುತ್ತಿರುವ ಪಂದ್ಯ
ಮುಂಬೈ(ಮಾ.28): ಐಪಿಎಲ್ 15ನೇ ಆವೃತ್ತಿಗೆ ಹೊಸದಾಗಿ ಸೇರಿಕೊಂಡಿರುವ ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ತಂಡದ ನಡುವಿನ ಹೋರಾಟ ಆರಂಭದಲ್ಲೇ ಕುತೂಹಲ ಸೃಷ್ಟಿಸಿದೆ. ಲಖನೌ ತಂಡ ಆರಂಭಿಕ ಆಘಾತದ ನಡುವೆ ದಿಟ್ಟ ಹೋರಾಟ ನೀಡಿ 6 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸುವಲ್ಲಿ ಯಶಸ್ವಿಯಾಗಿದೆ
ದೀಪಕ್ ಹೂಡ ಹಾಗೂ ಆಯುಷ್ ಬದೋನಿ ಜೊತೆಯಾಟ ಲಖನೌ ಸೂಪರ್‌ಜೈಂಟ್ಸ್ ತಂಡಕ್ಕೆ ನೆರವಾಯಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಈ ಜೋಡಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.ದೀಪಕ್ ಹೂಡ 41 ಎಸೆತದಲ್ಲಿ 55 ರನ್ ಸಿಡಿಸಿದರು. ಈ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿತ್ತು. ಇನ್ನು ಆಯುಷ್ ಬದೋನಿ 41 ಎಸೆತದಲ್ಲಿ 54 ರನ್ ಸಿಡಿಸಿದರು. ಬದೋನಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದರು.
IPL 2022-Indian Premier League 15ರ ಯುವ ಆಟಗಾರರು
ಆರಂಭದಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ನಾಯಕ ಕೆಎಲ್ ರಾಹುಲ್ ಖಾತೆ ತೆರೆಯುವ ಮುನ್ನವೇ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಮತ್ತೊರ್ವ ಸ್ಫೋಟಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ 7 ರನ್ ಸಿಡಿಸಿ ನಿರ್ಗಮಿಸಿದರು.
ಇವಿನ್ ಲಿವಿನ್ ಕೇವಲ10 ರನ್ ಸಿಡಿಸಿ ಔಟಾದರು. ಈ ಮೂಲಕ ಲಖನೌ 20 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಕನ್ನಡಿಗ ಮನೀಶ್ ಪಾಂಡೆ ಕೇವಲ 6 ರನ್ ಸಿಡಿಸಿ ಶಮಿಗೆ ವಿಕೆಟ್ ಒಪ್ಪಿಸಿದರು. ಅಲ್ಪ ಮೊತ್ತಕ್ಕೆ ಕುಸಿದ ತಂಡಕ್ಕೆ ದೀಪಕ್ ಹೂಡ ಹಾಗೂ ಆಯುಷ್ ಬದೋನಿ ಆಸೆರೆಯಾದರು.
ಹೂಡ ಹಾಗೂ ಬದೋನಿ ಜೊತೆಯಾಟದ ಜೊತೆಗೆ ಅಂತಿಮ ಹಂತದಲ್ಲಿ ಕ್ರುನಾಲ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕ್ರುನಾಲ್ ಪಾಂಡ್ಯ 13 ಎಸೆತದಲ್ಲಿ ಅಜೇಯ 21 ರನ್ ಸಿಡಿಸಿದರು. ಈ ಮೂಲಕ ಲಖನೌ ಸೂಪರ್‌ಜೈಂಟ್ಸ್ 6 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿತು. 159 ರನ್ ಟಾರ್ಗೆಟ್ ಚೇಸಿಂಗ್ ಮಾಡುವ ವಿಶ್ವಾಸದಲ್ಲಿ ಗುಜರಾತ್ ಟೈಟಾನ್ಸ್ ಕಣಕ್ಕಿಳಿದಿದೆ. ಅತ್ಯುತ್ತಮ ಬ್ಯಾಟ್ಸ್‌ಮನ್ ಹೊಂದಿರುವ ಗುಜರಾತ್ ತಂಡಕ್ಕೆ ಚೇಸಿಂಗ್ ಕಷ್ಟವೇನಲ್ಲ. ಆದರೆ ಲಖನೌ ಬೌಲಿಂಗ್ ದಾಳಿ ಮುಂದೆ ಚೇಸಿಂಗ್ ಸವಾಲಾಗಲಿದೆ.
IPL 2022: Mayank Agarwal ಪತ್ನಿ ಆಶಿತಾ ಸೂದ್ ಬಗೆಗಿನ ಇಂಟ್ರೆಸ್ಟಿಂಗ್ ಸಂಗತಿಗಳಿವು..!
ಲಖನೌ ಸೂಪರ್ ಜೈಂಟ್ಸ್:
ಕೆಎಲ್ ರಾಹುಲ್(ನಾಯಕ), ಕ್ವಿಂಟನ್ ಡಿಕಾಕ್, ಇವಿನ್ ಲಿವಿಸ್, ಮನೀಶ್ ಪಾಂಡೆ, ದೀಪಕ್ ಹೂಡ, ಕ್ರುನಾಲ್ ಪಾಂಡ್ಯ, ಮೊಹ್ಸಿನ್ ಖಾನ್, ಆಯೂಷ್ ಬದೋನಿ, ದುಷ್ಮಂತ ಚಮೀರಾ, ರವಿ ಬಿಶ್ನೋಯಿ, ಅವೇಶ್ ಖಾನ್
ಗುಜರಾತ್ ಟೈಟಾನ್ಸ್:
ಶುಬಮನ್ ಗಿಲ್, ಮಾಥ್ಯೂ ವೇಡ್, ವಿಜಯ್ ಶಂಕರ್, ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ಟಿವಾಟಿಯಾ, ರಶೀದ್ ಖಾನ್, ಲ್ಯೂಕ್ ಫರ್ಗ್ಯೂಸನ್, ವರುಣ್ ಆ್ಯರೋನ್, ಮೊಹಮ್ಮದ್ ಶಮಿ
159 ರನ್ ಟಾರ್ಗೆಟ್
