ಜೋಹಾನ್ಸ್‌ಬರ್ಗ್(ಫೆ.07): ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಹಲವು ಬಾರಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸ್ಟೇನ್ ಅಂರ್ತಾಜಾಲ ದಿಗ್ಗಜ ಗೂಗಲ್ ಬಳಿ ವಿಶೇಷ ಮನವಿ ಮಾಡಿದ್ದಾರೆ. ವಿಕಿಪೀಡಿಯಾದಲ್ಲಿ ಸ್ಟೇನ್ ಕುರಿತು ಲಭ್ಯವಿರುವ ಮಾಹಿತಿಯಲ್ಲಿ ತಪ್ಪಿದೆ. ಇದನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: 2ನೇ ಏಕದಿನ: ಭಾರತ ತಂಡದಲ್ಲಿ 2 ಬದಲಾವಣೆ? ಯಾರಿಗೆ ಚಾನ್ಸ್, ಯಾರಿಗೆ ಕೊಕ್?

ಟ್ವಿಟರ್ ಮೂಲಕ ಡೇಲ್ ಸ್ಟೇನ್ ಮನವಿ ಮಾಡಿದ್ದಾರೆ. ಯಾರಾದರೂ ಗೂಗಲ್‌ನಿಂದ ಸಹಾಯ ಮಾಡುವಿರಾ? ವಿಕಿಪೀಡಿಯಾದಲ್ಲಿರುವ ಮಾಹಿತಿ ತಪ್ಪಾಗಿದೆ. ಇದನ್ನು ಸರಿಪಡಿಸಬೇಕಿದೆ ಎಂದು ಸ್ಟೇನ್ ಟ್ವೀಟ್ ಮಾಡಿದ್ದಾರೆ.

 

ಇದನ್ನೂ ಓದಿ:IPL 2020: RCB ಕಪ್ ಗೆಲ್ಲುವ ಸುಳಿವು ನೀಡಿದ ಡೇಲ್ ಸ್ಟೇನ್! 

ಡೇಲ್ ಸ್ಟೇನ್ ಮನವಿಗೆ ತಕ್ಷಣವೇ ಅಭಿಮಾನಿಗಳು ಸ್ಪಂದಿಸಿದ್ದಾರೆ. ಕೆಲವರು ಸ್ಟೇನ್ ಕಾಲೆಳೆದಿದ್ದರೆ, ಮತ್ತೆ ಕೆಲವರು ಮಾಹಿತಿ ತಪ್ಪಿದ್ದರೂ ಸ್ಟೇನ್ ಮಾರಕ ದಾಳಿ ಹಾಗೂ ದಾಖಲೆ ಅಭಿಮಾನಿಗಳ ಮನದಲ್ಲಿದೆ ಎಂದಿದ್ದಾರೆ.