ಪಂದ್ಯ ಮುಗಿದ ಬಳಿಕ ಎಂಎಸ್‌ ಧೋನಿ ಆರ್‌ಸಿಬಿ ಆಟಗಾರರಿಗೆ ಶೇಕ್‌ಹ್ಯಾಂಡ್‌ ಮಾಡಲು ನಿರಾಕರಿಸಿದರು ಎನ್ನುವ ವಿಡಿಯೋಗಳ ನಡುವೆ ಎಂಎಸ್‌ ಧೋನಿಯ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. 

ಬೆಂಗಳೂರು (ಮೇ.20): ಟೀಮ್‌ ಇಂಡಿಯಾ ದಿಗ್ಗಜ ಪ್ಲೇಯರ್‌ ಎಂಎಸ್‌ ಧೋನಿ ತಮ್ಮ ಐಪಿಎಲ್‌ ಜೀವನಕ್ಕೂ ವಿದಾಯ ಹೇಳುವ ಸಾಧ್ಯತೆ ಇದೆ. ಆರ್‌ಸಿಬಿ ವಿರುದ್ಧ ಆಡಿದ ಪಂದ್ಯವೇ ಐಪಿಎಲ್‌ನಲ್ಲಿ ಅವರು ಕೊನೆಯ ಪಂದ್ಯ ಎನ್ನುವ ಊಹಾಪೋಹಗಳಿವೆ. ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಎಂಎಸ್‌ ಧೋನಿ ಶೀಘ್ರದಲ್ಲಿಯೇ ಐಪಿಎಲ್‌ಗೆ ವಿದಾಯವನ್ನೂ ಘೋಷಿಸಬಹುದು. ಇವೆಲ್ಲವೂ ಇನ್ನು ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಆದರೆ, ಈ ಬಾರಿ ತಂಡವನ್ನು ಪ್ಲೇಆಫ್‌ಗೆ ಏರಿಸುವ ಅವರ ಆಸೆ ಭಗ್ನಗೊಂಡಿದೆ. ಆ ಮೂಲಕ ಟ್ರೋಫಿ ಜಯಿಸಿ ವಿದಾಯ ಹೇಳುವ ಅವರ ಆಸೆಯೂ ಮುಕ್ತಾಯವಾಗಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂಎಸ್ ಧೋನಿ ಕ್ರೀಸ್‌ನಲ್ಲಿದ್ದಾಗ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಬಹಳಷ್ಟು ಭರವಸೆಗಳನ್ನು ಹೊಂದಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಪ್ಲೇಆಫ್‌ಗಳಲ್ಲಿ 4 ನೇ ಸ್ಥಾನವನ್ನು ಲಾಕ್ ಮಾಡಲು ಎರಡೂ ತಂಡಗಳು ಗೆಲ್ಲಬೇಕಿದ್ದ ಕಾರಣಕ್ಕೆ ಪಂದ್ಯವು ವರ್ಚುವಲ್‌ ಎಲಿಮಿನಟರ್‌ ರೀತಿ ಆಗಿತ್ತು.

ಆರ್‌ಸಿಬಿ ತಂಡ 218 ರನ್‌ ಬಾರಿಸಿದರೂ ಚೆನ್ನೈ ತಂಡಕ್ಕೆ ಪ್ಲೇ ಆಫ್‌ಗೆ ಏರಲು ಕೇವಲ 200 ರನ್‌ ಬಾರಿಸಿದ್ದರೆ ಸಾಕಿತ್ತು. ಆದರೆ, ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಲೇ ಸಾಗಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಎಂಎಸ್‌ ಧೋನಿ ಕ್ರೀಸ್‌ನಲ್ಲಿ ಇರುವವರೆಗೂ ಪಂದ್ಯ ಗೆಲ್ಲುತ್ತೇವೆ ಅಥವಾ ಕನಿಷ್ಠ 200 ರನ್‌ ದಾಟುವ ನಿರೀಕ್ಷೆಯಲ್ಲಿತ್ತು. ಪ್ಲೇಆಫ್‌ಗೇರಲು ಕೊನೇ ಓವರ್‌ನಲ್ಲಿ 17 ರನ್ ಬೇಕಿದ್ದಾಗ ಎಂಎಸ್‌ ಧೋನಿ 110 ಮೀಟರ್‌ನ ದೂರದ ಸಿಕ್ಸರ್‌ ಬಾರಿಸಿದ್ದರು. ಆದರೆ, ನಂತರದ ಎಸೆತದಲ್ಲೇ ಧೋನಿ ಔಟಾಗಿದ್ದು ಚೆನ್ನೈ ಅಭಿಮಾನಿಗಳ ಹೃದಯ ಭಗ್ನವಾಗಲು ಕಾರಣವಾಯಿತು. ಆರ್‌ಸಿಬಿ ವಿರುದ್ಧದ ಪಂದ್ಯವೇ ಧೋನಿಯ ಕೊನೇ ಪಂದ್ಯ ಎನ್ನುವ ಊಹಾಪೋಹ ಹರಿದಾಡುತ್ತಿದ್ದ ಕಾರಣಕ್ಕೆ ಹೆಚ್ಚಿನ ಚೆನ್ನೈ ಅಭಿಮಾನಿಗಳು ಚಿನ್ನಸ್ವಾಮಿ ಮೈದಾನದಲ್ಲಿದ್ದರು.

ಆದರೆ, ಆರ್‌ಸಿಬಿ ಪಂದ್ಯ ಗೆದ್ದ ಬಳಿಕ ಎಂಎಸ್‌ ಧೋನಿ ಎದುರಾಳಿ ಆಟಗಾರರಿಗೆ ಕನಿಷ್ಠ ಹ್ಯಾಂಡ್‌ಶೇಕ್‌ ಕೂಡ ಮಾಡಲಿಲ್ಲ ಎನ್ನುವ ಆರೋಪಗಳನ್ನು ಸಾಕ್ಷೀಕರಿಸುವಂಥ ಸಾಕಷ್ಟು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದವು. ಇನ್ನೂ ಕೆಲವು ವಿಡಿಯೋದಲ್ಲಿ ಧೋನಿ ಯುವ ಬೌಲರ್‌ ಯಶ್‌ ದಯಾಳ್‌ಗೆ ಟೀಕೆ ಮಾಡುತ್ತಿರುವುದೂ ಕೂಡ ದಾಖಲಾಗಿತ್ತು. ದಿಗ್ಗಜ ಪ್ಲೇಯರ್‌ ಆದ್ರೂ ಎದುರಾಳಿ ತಂಡಕ್ಕೆ ಹಾಘೂ ತಂಡದ ಆಟಗಾರರಿಗೆ ಕನಿಷ್ಠ ಸೌಜನ್ಯ ಕೂಡ ತೋರಿಸಿದ ಧೋನಿ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

ಇಷ್ಟೆಲಲ್ಲಾ ನೆಗೆಟಿವ್‌ ವಿಡಿಯೋಗಳ ಮಧ್ಯೆ ಎಂಎಸ್‌ ಧೋನಿಯ ಪಾಸಿಟಿವ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಧೋನಿ ಕೊನೇ ಪಂದ್ಯವಾಗಿರಬಹುದು ಎನ್ನುವ ಕಾರಣಕ್ಕೆ ಆರ್‌ಸಿಬಿಯ ಆಲ್ರೌಂಡರ್ ಮಯಾಂಕ್‌ ದಗಾರ್‌ ಧೋನಿ ಅವರಿಂದ ತಮ್ಮ ಬ್ಯಾಟ್‌ಗೆ ಸಹಿ ಪಡೆದುಕೊಂಡಿದ್ದಾರೆ. ಪಂದ್ಯ ಮುಗಿದ ಬಳಿಕ ಚೆನ್ನೈ ಟೀಮ್‌ನ ಡ್ರೆಸಿಂಗ್‌ ರೂಮ್‌ಗೆ ಹೋಗಿದ್ದ ಮಯಾಕ್‌ ದಗಾರ್‌ಗೆ ಅಲ್ಲಿಯೇ ಧೋನಿ ಸಹಿ ನೀಡಿದ್ದಾರೆ. ಇದನ್ನು ಮಯಾಂಕ್‌ ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಎರಡು ಅಚ್ಚರಿಯ ವಿದಾಯ..ಕಾದಿದ್ಯಾ ಮತ್ತೊಂದು ಸರ್‌ಪ್ರೈಜ್? ಸೋಲಿನೊಂದಿಗೆ ಅಂತ್ಯವಾಯ್ತಾ ಮಹೇಂದ್ರನ ಕ್ರಿಕೆಟ್ ಬದುಕು?

"ಧೋನಿ ಅವರು ವಿದಾಯದ ಬಗ್ಗೆ ಯಾರಿಗೂ ಹೇಳಿಲ್ಲ, ಅವರು ಅಂತಿಮ ಕರೆ ತೆಗೆದುಕೊಳ್ಳುವ ಮೊದಲು ಒಂದೆರಡು ತಿಂಗಳು ಕಾಯುವುದಾಗಿ ಅವರು ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದಾರೆ. ವಿಕೆಟ್‌ಗಳ ನಡುವೆ ಓಡುವಲ್ಲಿ ಅವರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ಇದು ಅವರಿಗೆ ಪ್ಲಸ್‌ ಆಗಿದೆ. ಧೋನಿಯ ಕಮ್ಯುನಿಕೇಶನ್‌ಗಾಗಿ ನಾವು ಕಾಯುತ್ತೇವೆ, ಅವರು ಯಾವಾಗಲೂ ತಂಡದ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ' ಎಂದು ಚೆನ್ನೈ ಟೀಮ್‌ನ ಆಪ್ತ ಮೂಲಗಳು ತಿಳಿಸಿವೆ.

ಆರ್‌ಸಿಬಿ ವಿರುದ್ಧದ ಸೋಲಿನ ಬೆನ್ನಲ್ಲೇ ವಿವಾದ, ರಾಂಚಿ ಮನೆಗೆ ಮರಳಿದ ಎಂಎಸ್ ಧೋನಿ!

View post on Instagram