ಭಾರತ ಕ್ರಿಕೆಟ್ ತಂಡಕ್ಕೆ ಆ್ಯಡಿಡಾಸ್ ಕಿಟ್ ಪ್ರಾಯೋಜಕತ್ವ?
ಬಿಸಿಸಿಐ ಮತ್ತೊಂದು ಬಹುಕೋಟಿ ಒಪ್ಪಂದಕ್ಕೆ ರೆಡಿ
ಪ್ರತಿಷ್ಠಿತ ಆ್ಯಡಿಡಾಸ್ ಸಂಸ್ಥೆಯೊಂದಿಗೆ ಕಿಟ್ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ?
ಬಿಸಿಸಿಐ ಮುಂದಿನ ತಿಂಗಳು ಅಧಿಕೃತ ಮಾಹಿತಿ ಪ್ರಕಟಣೆ?
ನವದೆಹಲಿ(ಫೆ.22): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮತ್ತೊಂದು ಬಹುಕೋಟಿ ಒಪ್ಪಂದಕ್ಕೆ ರೆಡಿಯಾಗಿದ್ದು, ಶೀಘ್ರದಲ್ಲೇ ಪ್ರತಿಷ್ಠಿತ ಆ್ಯಡಿಡಾಸ್ ಸಂಸ್ಥೆಯೊಂದಿಗೆ ಕಿಟ್ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಆ್ಯಡಿಡಾಸ್ ಜೊತೆಗಿನ ಒಪ್ಪಂದದ ಬಗ್ಗೆ ಬಿಸಿಸಿಐ ಮುಂದಿನ ತಿಂಗಳು ಅಧಿಕೃತ ಮಾಹಿತಿ ಪ್ರಕಟಿಸಲಿದ್ದು, ಜೂನ್‌ನಿಂದ ಒಪ್ಪಂದ ಚಾಲ್ತಿಗೆ ಬರಲಿದೆ. 2028ರ ವರೆಗೂ ಅಂದರೆ 5 ವರ್ಷ ಪ್ರಾಯೋಜಕತ್ವ ಚಾಲ್ತಿಯಲ್ಲಿ ಇರಲಿದೆ ಎಂದು ತಿಳಿದುಬಂದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಆಡುವುದು ಬಹುತೇಕ ಖಚಿತವಾಗಿದ್ದು, ಆ ಪಂದ್ಯದಲ್ಲಿ ಭಾರತ ಮೊದಲ ಬಾರಿಗೆ ಆ್ಯಡಿಡಾಸ್ ಜೆರ್ಸಿ ತೊಡಬಹುದು ಎನ್ನಲಾಗಿದೆ.
2006ರಿಂದ 2020ರ ವರೆಗೂ ಪ್ರತಿಷ್ಠಿತ ನೈಕಿ ಸಂಸ್ಥೆ ಭಾರತದ ಜೆರ್ಸಿ ಪ್ರಾಯೋಜಕತ್ವ ಹೊಂದಿತ್ತು. ಬಳಿಕ ಎಂಪಿಎಲ್ ಸ್ಪೋಟ್ಸ್‌ರ್ ಸಂಸ್ಥೆಯು ಪ್ರತಿ ಪಂದ್ಯಕ್ಕೆ 65 ಲಕ್ಷ ರುಪಾಯಿ ಪಾವತಿಸುತ್ತಿತ್ತು. ಆದರೆ ಅವಧಿ ಮುಗಿಯುವ ಮೊದಲೇ ಪ್ರಾಯೋಜಕತ್ವ ಹಕ್ಕನ್ನು ಕಿಲ್ಲರ್ ಜೀನ್ಸ್ ಸಂಸ್ಥೆಗೆ ಹಸ್ತಾಂತರಿಸಿತ್ತು.
ಭಾರತ ಕ್ರಿಕೆಟ್ ತಂಡಕ್ಕೆ ಆ್ಯಡಿಡಾಸ್ ಪ್ರಾಯೋಜಕತ್ವ?
ನವದೆಹಲಿ: ಆಸ್ಪ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು ಕೇವಲ 3 ದಿನಗಳೊಳಗೆ ಜಯಿಸಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಹೆಚ್ಚುವರಿ ವಿಶ್ರಾಂತಿ ಲಭಿಸಿದ್ದು, ಆಟಗಾರರಿಗೆ ಬಿಸಿಸಿಐ 6 ದಿನಗಳ ಕಾಲ ರಜೆ ನೀಡಿದೆ. ಸತತ ಸರಣಿಗಳಿಂದ ದಣಿದಿರುವ ಆಟಗಾರರಿಗೆ ಈ ಬಿಡುವು ಮಹತ್ವದ್ದೆನಿಸಿದೆ.
ಫೆಬ್ರವರಿ 17ಕ್ಕೆ ಆರಂಭಗೊಂಡಿದ್ದ 2ನೇ ಪಂದ್ಯ ಮೂರೇ ದಿನಕ್ಕೆ ಕೊನೆಗೊಂಡಿತ್ತು. ಬಳಿಕ ಆಟಗಾರರು ನವದೆಹಲಿಯಲ್ಲಿರುವ ಪ್ರಧಾನಮಂತ್ರಿ ಮ್ಯೂಸಿಯಂಗೆ ತೆರಳಿದ್ದರು. ಸದ್ಯ ಕೆಲ ಆಟಗಾರರು ತಮ್ಮ ಮನೆಗಳಿಗೆ ತೆರಳಿದ್ದು, ಇನ್ನೂ ಕೆಲವರು ಪ್ರವಾಸಕ್ಕೆ ಹೋಗಿದ್ದಾರೆ. 3ನೇ ಟೆಸ್ಟ್ ಪಂದ್ಯ ಮಾ.1ರಂದು ಆರಂಭಗೊಳ್ಳಲಿದ್ದು, ಫೆ.25ರಂದು ಆಟಗಾರರು ಇಂದೋರ್ನಲ್ಲಿ ಮತ್ತೆ ತಂಡವನ್ನು ಕೂಡಿಕೊಂಡು ಅಭ್ಯಾಸ ಆರಂಭಿಸಲಿದ್ದಾರೆ.
'ತವರಿನಲ್ಲಿ ಟೀಂ ಇಂಡಿಯಾ ಸೋಲಿಸೋದು ಸುಲಭವಲ್ಲ' ರೋಹಿತ್ ಪಡೆ ಕೊಂಡಾಡಿದ ಪಾಕ್ ಕ್ರಿಕೆಟಿಗ
ಸರಣಿಯ 4ನೇ ಟೆಸ್ಟ್ ಪಂದ್ಯ ಮಾ.9ರಿಂದ 13ರ ವರೆಗೆ ನಡೆಯಲಿದೆ. 3 ಪಂದ್ಯಗಳ ಏಕದಿನ ಸರಣಿ ಮಾ.17ರಿಂದ 22ರ ವರೆಗೆ ನಿಗದಿಯಾಗಿದೆ. ಬಳಿಕ ಕೇವಲ 9 ದಿನಗಳಲ್ಲೇ ಐಪಿಎಲ್ ಆರಂಭವಾಗಲಿರುವ ಕಾರಣ ಆಟಗಾರರಿಗೆ ಹೆಚ್ಚಿನ ವಿಶ್ರಾಂತಿ ಸಿಗುವುದಿಲ್ಲ. ಜೂ.7ರಿಂದ ಟೆಸ್ಟ್ ವಿಶ್ವಕಪ್ ಫೈನಲ್ ಕೂಡಾ ನಡೆಯಲಿದ್ದು, ಭಾರತ ಫೈನಲ್ಗೇರಿದರೆ ಆಟಗಾರರು ಐಪಿಎಲ್ ಬೆನ್ನಲ್ಲೇ ಮತ್ತೆ ಮೈದಾನಕ್ಕೆ ಮರಳಲಿದ್ದಾರೆ. ಹೀಗಾಗಿ ಟೆಸ್ಟ್ ಸರಣಿ ನಡುವೆಯೇ ಬಿಸಿಸಿಐ ಆಟಗಾರರಿಗೆ ಬಿಡುವು ನೀಡಿದೆ.
ತಿರುಪತಿಗೆ ಸೂರ್ಯಕುಮಾರ್ ಯಾದವ್ ಭೇಟಿ: ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ತಮ್ಮ ಪತ್ನಿ ದೇವಿಶಾ ಜೊತೆ ಮಂಗಳವಾರ ತಿರುಪತಿಯ ತಿರುಮಲ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಆಸೀಸ್ಗೆ ಸಲಹೆ ನೀಡಲು ಸಿದ್ಧ: ಮ್ಯಾಥ್ಯೂ ಹೇಡನ್ ಪ್ರಸ್ತಾಪ:
ನವದೆಹಲಿ: ಸಂಕಷ್ಟದಲ್ಲಿರುವ ಆಸ್ಪ್ರೇಲಿಯಾ ತಂಡಕ್ಕೆ ಉಚಿತವಾಗಿ ಸಲಹೆ, ಮಾರ್ಗದರ್ಶನ ನೀಡುವುದಾಗಿ ಆಸೀಸ್ ಮಾಜಿ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಹೇಡನ್ ತಿಳಿಸಿದ್ದಾರೆ. ಆಸೀಸ್ ಆಟಗಾರರು ಭಾರತದಲ್ಲಿ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲ ರಾಗುತ್ತಿದ್ದಾರೆ. ಆಟಗಾರರಿಗೆ ಈ ಬಗ್ಗೆ ಸಲಹೆ ಬೇಕಿದ್ದರೆ ಕ್ರಿಕೆಟ್ ಆಸ್ಪ್ರೇಲಿಯಾ ನನ್ನನ್ನು ಸಂಪರ್ಕಿಸಬಹುದು. ಯಾವುದೇ ಕ್ಷಣದಲ್ಲಿ ಬೇಕಾದರೂ ಉಚಿತವಾಗಿ ಆಟಗಾರರಿಗೆ ಮಾರ್ಗದರ್ಶನ ನೀಡಲು ನಾನು ಸಿದ್ಧ’ ಎಂದಿದ್ದಾರೆ.