ಚೆನ್ನೈನ ಟಿಟಿಡಿ ದೇವಸ್ಥಾನದಲ್ಲಿ ಐಪಿಎಲ್ ಟ್ರೋಫಿಗೆ ವಿಶೇಷ ಪೂಜೆ, ವಿಡಿಯೋ ವೈರಲ್!
ಐಪಿಎಲ್ ಟ್ರೋಫಿ ಗೆಲುವಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಟೀಮ್ ಮ್ಯಾನೇಜ್‌ಮೆಂಟ್ ಚೆನ್ನೈನ ತ್ಯಾಗರಾಜನಗರದಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ಟ್ರೋಫಿಗೆ ವಿಶೇಷ ಪೂಜೆ ಮಾಡಿ ಪ್ರಾರ್ಥನೆ ನಡೆಸಿದರು.
ಚೆನ್ನೈ (ಮೇ.31): ದಕ್ಷಿಣ ಭಾರತಕ್ಕೆ ಐಪಿಎಲ್ ಟ್ರೋಫಿ ಮರಳಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್‌ಮಂಟ್ ಮಂಗಳವಾರ ಚೆನ್ನೈನ ತ್ಯಾಗರಾಜನಗರದಲ್ಲಿರುವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಐಪಿಎಲ್ ಟಗರೋಫಿಗೆ ವಿಶೇಷ ಪೂಜೆ ನಡೆಸಿತು. ಅಹಮದಾಬಾದ್‌ನಲ್ಲಿ ನಡೆದ ಸೆನ್ಸೇಷನಲ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಚೆನ್ನೈ ಭರ್ಜರಿ ಗೆಲುವು ಕಂಡಿತ್ತು. ಟ್ರೋಫಿಯನ್ನು ಟಿಟಿಡಿ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿಯ ಪಾದದ ಬಳಿ ಇಟ್ಟು ಪೂಜೆ ನಡೆಸಲಾಗಿತು. ಚೆನ್ನೈ ಸೂಪರ್ ಕಿಂಗ್ಸ್ ಅಧಿಕಾರಿಗಳು ಐಪಿಎಲ್ 2023 ಟ್ರೋಫಿಯನ್ನು ಚೆನ್ನೈ ವಿಮಾನ ನಿಲ್ದಾಣದಿಂದ ನೇರವಾಗಿ ನಗರದ ಪ್ರಖ್ಯಾತ ದೇವಸ್ಥಾನಕ್ಕೆ ತರಲಾಯಿತು. ಈ ವೇಳೆ ಯಾವುದೇ ಆಟಗಾರರು ಸಹಾಯಕ ಸಿಬ್ಬಂದಿ ಹಾಜರಿರಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕ ಎನ್ ಶ್ರೀನಿವಾಸನ್ ಅವರ ನೆಚ್ಚಿನ ದೇವಸ್ಥಾನ ಇದಾಗಿದೆ.
ಐಪಿಎಲ್ ಟ್ರೋಫಿ ಗೆದ್ದ ಬಳಿಕ ಚೆನ್ನೈನ ತ್ಯಾಗರಾಜನಗರದಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಟ್ರೋಫಿ ದರ್ಶನ ಮಾಡಿಸಿ ಪೂಜೆ ಮಾಡಿಸೋದನ್ನ ಸಿಎಸ್‌ಕೆ ವಾಡಿಕೆ. 2021ರಲ್ಲಿ ಚೆನ್ನೈ ತಂಡ ಟ್ರೋಫಿ ಗೆದ್ದಾಗಲೂ, ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾಗಿರುವ ಇಂಡಿಯಾ ಸಿಮೆಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಎನ್ ಶ್ರೀನಿವಾಸನ್ ಟ್ರೋಫಿ ಜೊತೆ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಅಂದು ಅವರೊಂದಿಗೆ ಶ್ರೀನಿವಾಸನ್ ಅವರ ಪುತ್ರಿ ಹಾಗೂ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷೆಯೂ ಆಗಿದ್ದ ರೂಪಾ ಗುರುನಾಥ್ ಕೂಡ ಭಾಗವಹಿಸಿದ್ದರು. ಮುಖ್ಯ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಸೇರಿದಂತೆ ಸಿಎಸ್‌ಕೆ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸದಸ್ಯರು ಅಹಮದಾಬಾದ್‌ನಲ್ಲಿ ನಡೆದ ದೊಡ್ಡ ಐಪಿಎಲ್ ಫೈನಲ್‌ನ ಒಂದು ದಿನದ ನಂತರ ಚೆನ್ನೈಗೆ ಆಗಮಿಸಿದರು.
ರಸ್ತೆಯಲ್ಲಿ ನಿಂತು ಸೆಲ್ಫಿ ಕೇಳಿದ್ದ ಅಭಿಮಾನಿಯನ್ನೇ ವಿವಾಹವಾಗಲಿರುವ ಟೆನಿಸ್ ತಾರೆ ಗಾರ್ಬಿನ್ ಮುಗುರುಜಾ!
ಐಪಿಎಲ್‌ನಲ್ಲಿ ಗರಿಷ್ಠ ಬಾರಿ ಟ್ರೋಫಿ ಜಯಿಸಿದ ದಾಖಲೆಯನ್ನು ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಹಂಚಿಕೊಂಡಿದೆ. ಗುಜರಾತ್ ತಂಡವನ್ನು ಮಣಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಚೆನ್ನೈ ತಂಡ ಐಪಿಎಲ್ ಟ್ರೋಫಿ ಜಯಿಸಿದೆ. ಎರಡು ವರ್ಷಗಳ ಐಪಿಎಲ್ ನಿಷೇಧದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡ 2018, 2021 ಹಾಗೂ 2023ರಲ್ಲಿ ಟ್ರೋಫಿ ಗೆಲ್ಲುವಲ್ಲಿ ಯಶ ಕಂಡಿದೆ.