Asianet Suvarna News Asianet Suvarna News

ಮುದ್ದಾದ ಫೋಟೋ ಶೇರ್ ಮಾಡಿದ ವಿರುಷ್ಕಾ ಜೋಡಿ... ನೆಟ್ಟಿಗರಿಗೆ ಕಂಡಿದ್ದೇ ಬೇರೆ

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ತಮ್ಮದೊಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ಫೋಟೋದಲ್ಲಿ ಅಭಿಮಾನಿಗಳು ಈ ಜೋಡಿಯನ್ನು ನೋಡುವ ಮೊದಲು ಅವರಿದ್ದ ಸ್ಥಳವನ್ನು ಗಮನಿಸಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ.

cricketer virat Kohli and Actress Anushka Sharma social Media photo goes viral for wrong reason akb
Author
First Published Nov 23, 2022, 4:04 PM IST

ಸಾಮಾನ್ಯವಾಗಿ ಸಿನಿಮಾ ತಾರೆಯರು, ಕ್ರೀಡಾ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅದಕ್ಕೆ ಅಭಿಮಾನಿಗಳು ಮೆಚ್ಚಿಗೆ ಸೂಚಿಸುತ್ತಿದ್ದಾರೆ. ಅಭಿಮಾನಿಗಳು ಹಾಗೂ ಸಲೆಬ್ರಿಟಿಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಸಾಮಾಜಿಕ ಜಾಲತಾಣಗಳು ಕೆಲಸ ಮಾಡುತ್ತವೆ. ಅದೇ ರೀತಿ ಸಿನಿಮಾ ಕ್ರಿಕೆಟ್ ಜನಪ್ರಿಯ ಜೋಡಿ ಎನಿಸಿದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ತಮ್ಮದೊಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ಫೋಟೋದಲ್ಲಿ ಅಭಿಮಾನಿಗಳು ಈ ಜೋಡಿಯನ್ನು ನೋಡುವ ಮೊದಲು ಅವರಿದ್ದ ಸ್ಥಳವನ್ನು ಗಮನಿಸಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಕ್ರಿಕೆಟರ್ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಲಿವುಡ್ ನಟಿ ಅನುಷ್ಕಾ (Anushka Sharma) ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವುದರಿಂದ ಆಗಾಗ ಅವರ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಈ ಬಾರಿ ಬೇರೆ ಕಾರಣಕ್ಕೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಫೋಟೋ ವೈರಲ್ (Viral) ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ಒಂದು ಫೋಟೋವನ್ನು ಅಳೆದು ತೂಗಿ ಯಾವ ರೀತಿ ಗಮನಹರಿಸಿ ಕಾಮೆಂಟ್ ಮಾಡುತ್ತಾರೆ ಎಂಬುದಕ್ಕೆ ಈ ಫೋಟೋ ಸಾಕ್ಷಿ ಆಗಿದೆ. 

ಮಗಳೊಂದಿಗೆ ಕೈಂಚಿ ಧಾಮಕ್ಕೆ ಭೇಟಿ ನೀಡಿದ ವಿರುಷ್ಕಾ ಜೋಡಿ: ಅಭಿಮಾನಿಗಳೊಂದಿಗೆ ಫೋಸ್

ಅಂದಹಾಗೆ ಈ ಫೋಟೋವೇನು ಇತ್ತೀಚಿನದಲ್ಲ. ಫೋಟೋದಲ್ಲಿ ಇಬ್ಬರು ತುಂಬಾ ಮುದ್ದಾಗಿ ಕಾಣುತ್ತಿದ್ದು, ಅಡುಗೆ ಮನೆಯಲ್ಲಿ ನಿಂತುಕೊಂಡು ಒಬ್ಬರಿಗೊಬ್ಬರು ಅಂಟಿಕೊಂಡು ಫೋಸ್ ಕೊಟ್ಟಿದ್ದಾರೆ. ವಿರಾಟ್ ಕೈಯಲ್ಲಿ ಟೀ ಕಪ್ ಮತ್ತು ತಿನಿಸಿನ ಪೊಟ್ಟಣವೊಂದರ ಮುಚ್ಚಳವಿದ್ದರೆ, ವಿರಾಟ್ ಬೆನ್ನಿಗೊರಗಿ ಅನುಷ್ಕಾ ನಿಂತಿದ್ದಾರೆ. ಇಬ್ಬರು ತುಂಬಾ ಮುದ್ದಾಗಿಯೇ ಕಾಣುತ್ತಿದ್ದಾರೆ. ಆದರೆ ಜನರಿಗೆ ಕಂಡಿದ್ದು, ಇವರ ಕ್ಯೂಟ್‌ನೆಸ್ ಅಲ್ಲ, ಸ್ವಚ್ಛತೆ ಇಲ್ಲದೇ ಅಸ್ತವ್ಯಸ್ತಗೊಂಡಂತಿರುವ ಅಡುಗೆ ಮನೆ. 

ಅನೇಕರು ನಿಮ್ಮ ಅಡುಗೆ ಮನೆ ಏಕೆ ಇಷ್ಟೊಂದು ಗಲೀಜಾಗಿದೆ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ವಿರುಷ್ಕಾ ಮನೆಯನ್ನು ತಮ್ಮ ಮನೆಯ ಅಡುಗೆ ಮನೆಗೆ ಹೋಲಿಸಿಕೊಂಡಿದ್ದು, ಇವರ ಮನೆಗಿಂತ ನಮ್ಮ ಮನೆಯ ಅಡುಗೆ ಮನೆ ತುಂಬಾ ನೀಟ್ ಆಗಿದೆ, ಸ್ವಚ್ಛವಾಗಿದೆ. ವಿಶಾಲವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಕೆಲವರು ಫೋಟೋದಲ್ಲಿರುವ ನಲ್ಲಿಯನ್ನು ಗಮನಿಸಿದ್ದು, ಈ ಜೋಡಿ ನಲ್ಲಿ ನೀರನ್ನು ಪೋಲು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಮತ್ತೆ ಅನೇಕರು ಈ ಅಡುಗೆ ಮನೆಯ ಅವ್ಯವಸ್ಥೆಯನ್ನು ಬಿಟ್ಟು ಕೇವಲ ಜೋಡಿಯ ಫೋಟೋ ಮಾತ್ರ ಗಮನಿಸಿ ಪ್ರತಿಕ್ರಿಯಿಸಿದ್ದಾರೆ. ಹಾಗಂತ ಈಗ ವೈರಲ್ ಆಗಿರುವ ಪೋಸ್ಟ್ ಇತ್ತೀಚಿನದ್ದಲ್ಲ. ಹಳೆಯ ಫೋಟೋವೊಂದು ನೆಟ್ಟಿಗರ ಕಾಮೆಂಟ್‌ನಿಂದಾಗಿ ಈಗ ವೈರಲ್ ಆಗಿದೆ.

ವಿರುಷ್ಕಾ ಜೋಡಿಯನ್ನು ಭೇಟಿಯಾದ ಅನುಪಮ್ ಖೇರ್..! ಫೋಟೋ ವೈರಲ್

ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾ ಇಂದು ಸಾಕಷ್ಟು ಪ್ರಭಾವಶಾಲಿಯಾಗಿದ್ದು, ಸೆಲೆಬ್ರಿಟಿಗಳ ಬದುಕು ಸುಲಭದ ಮಾತಲ್ಲ. ಅವರ ಒಂದೊಂದು ಚಲನವಲನಗಳನ್ನು ಜನ ಗಮನಿಸುತ್ತಿರುತ್ತಾರೆ. ಜನಸಾಮಾನ್ಯರಂತೆ ಬದುಕುವುದು ಬಹಳ ಕಷ್ಟದ ಕೆಲಸ. ಎಲ್ಲಿ ಹೋದರೂ ಅಭಿಮಾನಿಗಳು ಮುತ್ತಿಕ್ಕಿಕೊಂಡು ಖಾಸಗಿ ಬದುಕು ಇಲ್ಲದಂತೆ ಮಾಡಿ ಬಿಡುತ್ತಾರೆ. ಒಂದು ಫೋಟೋದಲ್ಲಿ ಇಷ್ಟೊಂದು ಹುಳುಕು ಹುಡುಕುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಹಾಕಲು ಕೂಡ ಸೆಲೆಬ್ರಿಟಿಗಳು ಯೋಚಿಸುವಂತಾಗಿರುವುದು ಮಾತ್ರ ಸುಳ್ಳಲ್ಲ..
 

Follow Us:
Download App:
  • android
  • ios