ಕ್ರಿಕೆಟರ್ ಶ್ರೇಯಾಂಕ ಪಾಟೀಲ್ ಭರ್ಜರಿ ಡ್ಯಾನ್ಸ್ ಗೆ ಫಿದಾ ಆಗೋದ್ರು ಫ್ಯಾನ್ಸ್

ಟೀಮ್ ಇಂಡಿಯಾದ ಬೆಸ್ಟ್ ಆಟಗಾರ್ತಿ ನಮ್ಮ ಹೆಮ್ಮೆಯ ಕನ್ನಡತಿ ಶ್ರೇಯಾಂಕ ಪಾಟೀಲ್ ಉಯ್ಯಮ್ಮಾ ಹಾಡಿಗೆ ಹೆಜ್ಜೆ ಹಾಕಿದ್ದು , ವಿಡೀಯೋ ಸೋಶಿಯಲ್ ಮೀಡೀಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 
 

Cricketer Shreyanka Patil Dance Video viral pav

ತಮ್ಮ ಅದ್ಭುತ ಆಟದ ಮೂಲಕ ಆರ್ ಸಿಬಿ ಮಹಿಳಾ ತಂಡದ ಗೆಲುವಿಗೆ ಕಾರಣಳಾದ ಹಾಗೂ ಟೀಮ್ ಇಂಡಿಯಾ ಕ್ರಿಕೆಟ್ (Team India Cricketer) ತಂಡದ ಭರವಸೆಯ ಆಟಗಾರ್ತಿ ಅಂದ್ರೆ ಅದು ನಮ್ಮ ಹೆಮ್ಮೆಯ ಕನ್ನಡತಿ ಶ್ರೇಯಾಂಕ ಪಾಟೀಲ್. ಇವರು ತಮ್ಮ ಆಟದ ಮೂಲಕ ಕನ್ನಡಿಗರ ಮಾತ್ರವಲ್ಲ, ಪೂರ್ತಿ ದೇಶದಾದ್ಯಂತ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.  ಆಸ್ಟ್ರೇಲಿಯಾ,ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಸರಣಿ, ಮಹಿಳಾ ಟಿ20 ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ನಲ್ಲೂ ಶ್ರೇಯಾಂಕ ಉತ್ತಮ ಪ್ರದರ್ಶನ ನೀಡಿದ್ದರು.  ಶ್ರೇಯಾಂಕ ತಮ್ಮ ಆಟದ ಜೊತೆ ತಮ್ಮ ಡ್ಯಾನ್ಸ್ ಮೂಲಕವೂ ಸದ್ದು ಮಾಡ್ತಿದ್ದಾರೆ. 

ಕ್ಲಾಸ್ ರೂಂನಲ್ಲಿ 'ಗೌರಿ’ ಮ್ಯೂಸಿಕಲ್ ಟೀಸರ್ ಬಿಡುಗಡೆ! ಕ್ರಿಕೆಟರ್ ಶ್ರೇಯಾಂಕರನ್ನ ನೋಡಿ ತ್ರಿಲ್ ಆದ ಸ್ಟುಡೆಂಟ್ಸ್!

ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಶ್ರೇಯಾಂಕ (Shreyanka Patil) ಹೆಚ್ಚಾಗಿ ತಮ್ಮ ಆಟದ ವಿಡೀಯೋ ಫೋಟೋಸ್, ಜಿಮ್, ವರ್ಕೌಟ್ ವಿಡಿಯೋ, ಜೊತೆಗೆ ಒಂದಿಷ್ಟು ಫ್ಯಾಮಿಲಿ ಫೋಟೊ, ತಮ್ಮ ಫೋಟೊಗಳನ್ನು ಸಹ ಅಪ್ ಲೋಡ್ ಮಾಡುತ್ತಿರುತ್ತಾರೆ. ಈ ಬಾರಿ ಇನ್ನೂ ವಿಶೇಷ ಎನ್ನುವಂತೆ ಶ್ರೇಯಾಂಕ ತಮ್ಮ ಡ್ಯಾನ್ಸ್ ವಿಡೀಯೋ ಶೇರ್ ಮಾಡಿದ್ದು, ಈಕೆಯ ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆಕೆಯ ಡ್ಯಾನ್ಸ್ ಮೂವ್ಸ್, ಎಕ್ಸ್ ಪ್ರೆಶನ್ ಎಲ್ಲವೂ ಪರ್ಫೆಕ್ಟ್ ಆಗಿದ್ದು, ಹಾಡಿಗೆ ತಕ್ಕಂತ ಹಾವ ಭಾವ ತೋರಿಸಿ, ಸೊಂಟ ಬಳುಕಿಸಿದ್ದು, ಸದ್ಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಶ್ರೇಯಾಂಕ ಕೇವಲ ಕ್ರಿಕೆಟರ್ ಮಾತ್ರ ಅಲ್ಲ, ಬೆಸ್ಟ್ ಡ್ಯಾನ್ಸರ್ ಕೂಡ ಹೌದು, ಈಕೆ ಉತ್ತಮ ನಟಿ, ಸೂಪರ್ ಮಸ್ತ್ ಡ್ಯಾನ್ಸ್ ಎಂದು ಕಾಮೆಂಟ್ ಮಾಡಿದ್ದಾರೆ. 

ಆರ್‌ಸಿಬಿ ಕ್ರಶ್ ಶ್ರೇಯಾಂಕ ಪಾಟೀಲ್‌ ವಿಚಿತ್ರ ಹವ್ಯಾಸ; ಸಂತಸವಾದ್ರೂ, ದುಃಖವಾದ್ರೂ ಪಕ್ಕದಲ್ಲಿರೋರನ್ನ ಕಚ್ಚಿಬಿಡ್ತಾಳೆ

ಇನ್ನು ಶ್ರೇಯಾಂಕ ಬಗ್ಗೆ ಹೇಳೊದಾದ್ರೆ ಐಸಿಸಿ (ICC) ಬಿಡುಗಡೆ ಮಾಡಿರುವ 2024ನೇ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಯ ಶಾರ್ಟ್​ ಲಿಸ್ಟ್​ನಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಹೆಸರು ಸೇರಿತ್ತು ನಮಗೆ ಹೆಮ್ಮೆಯ ವಿಚಾರವೇ ಸರಿ. ಟೀಂ ಇಂಡಿಯಾ ಪರ ಇದುವರೆಗೆ 13 ಟಿ20 ಪಂದ್ಯಗಳನ್ನಾಡಿರುವ ಶ್ರೇಯಾಂಕ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರ ಜೊತೆಗೆ 2 ಏಕದಿನ ಪಂದ್ಯಗಳನ್ನೂ ಆಡಿರುವ ಶ್ರೇಯಾಂಕ 4 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.  
 

Latest Videos
Follow Us:
Download App:
  • android
  • ios