Asianet Suvarna News Asianet Suvarna News

Harbhajan House sale : ಮುಂಬೈ ಮನೆ ಮಾರಿದ ಭಜ್ಜಿಗೆ ಡಬಲ್ ಹ್ಯಾಟ್ರಿಕ್ !

* ಮನೆ ಮಾರಿದ ಕ್ರಿಕೆಟಿಗ ಹರ್ಭಜನ್ ಸಿಂಗ್ 
*  ಮುಂಬೈ ಅಂಧೇರಿ ಅಪಾರ್ಟ್‌ಮೆಂಟ್  ಮಾರಾಟ
* ಬರೋಬ್ಬರಿ 17.58 ಕೋಟಿ ರೂ.ಗೆ  ಸೇಲ್
* ವ್ಯವಹಾರ ಜಾಣ್ಮೆ ಮೆರೆದ ಸ್ಪಿನ್ ಮಾಂತ್ರಿಕ

cricketer Harbhajan Singh sells Mumbai apartment for Rs 17.58 crore mah
Author
Bengaluru, First Published Nov 24, 2021, 8:40 PM IST
  • Facebook
  • Twitter
  • Whatsapp

ಮುಂಬೈ(ನ. 24)  ಸ್ಪಿನ್ ಮಾಂತ್ರಿಕ, ದೇಶ ಕಂಡ ದಿಗ್ಗಜ ಕ್ರಿಕೆಟಿಗ  ಹರ್ಭಜನ್ ಸಿಂಗ್ (Harbhajan Singh) ಮನೆ (House Sale) ಮಾರಾಟ ಮಾಡಿದ್ದಾರೆ. ಅರೇ ಇದೇನಿದು ಅಂದ್ರಾ .... ಪೂರ್ಣ ಹೇಳುತ್ತೇವೆ ಕೇಳಿ. ಮನೆ ಮಾರಾಟ ಮಾಡಿದ್ದು ಅಲ್ಲದೇ ಕೈ ತುಂಬಾ ಸಂಪಾದನೆಯನ್ನು ಮಾಡಿಕೊಂಡಿದ್ದಾರೆ.

ಈ ಮಾರಾಟದಲ್ಲಿ ಭಾರೀ ವ್ಯವಹಾರಿಕ ಲಾಭವನ್ನು ಸಿಂಗ್ ಮಾಡಿಕೊಂಡಿದ್ದಾರೆ. ಮುಂಬೈ (Mumbai) ಅಂಧೇರಿ ಅಪಾರ್ಟ್‌ಮೆಂಟ್ ಅನ್ನು 17.58 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಮಾರಾಟವನ್ನು ನವೆಂಬರ್ 18, 2021 ರಂದು ನೋಂದಾಯಿಸಲಾಗಿದೆ.

ಫ್ಲಾಟ್ ಅನ್ನು ಡಿಸೆಂಬರ್ 2017 ರಲ್ಲಿ ರೂ 14.5 ಕೋಟಿಗೆ ಖರೀದಿಸಲಾಗಿತ್ತು.  2,830 ಚದರ ಅಡಿ ವಿಸ್ತೀರ್ಣದ ಅಪಾರ್ಟ್‌ಮೆಂಟ್‌ಗೆ 87.9 ಲಕ್ಷ ರೂಪಾಯಿ ಮುದ್ರಾಂಕ ಶುಲ್ಕ ಪಾವತಿಸಲಾಗಿದೆ.

ಭಜ್ಜಿ ಐಷಾರಾಮಿ ಬಂಗಲೆ ನೋಡಿಕೊಂಡು ಬನ್ನಿ

 ಅಪಾರ್ಟ್‌ಮೆಂಟ್ 'ರುಸ್ತಂಜೀ ಎಲಿಮೆಂಟ್ಸ್'ನ ಜಿ-ವಿಂಗ್‌ನ ಒಂಭತ್ತನೇ ಮಹಡಿಯಲ್ಲಿದೆ. ಕಟ್ಟಡದಲ್ಲಿ ನಾಲ್ಕು ಕಾರ್ ಪಾರ್ಕಿಂಗ್  ವ್ಯವಸ್ಥೆ ಇದೆ. ಈ ಕಟ್ಟಡವು ಸೆಪ್ಟೆಂಬರ್ 19, 2018 ರಂದು ಆಕ್ಯುಪೆನ್ಸಿ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. 

Zapkey.com ನ ಸಹ ಸಂಸ್ಥಾಪಕ ಸಂದೀಪ್ ರೆಡ್ಡಿ ಮಾತನಾಡಿ,  ಐಷಾರಾಮಿ ವಿಭಾಘದ ರಿಯಲ್ ಎಸ್ಟೇಟ್ ವ್ಯವಹಾರ ಉತ್ತಮವಾಗಿಯೇ ಇದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇದೆ ಎಂದು ತಿಳಿಸಿದ್ದಾರೆ.

ಸಿಂಗ್ 10.64 ಕೋಟಿ ರೂಪಾಯಿಗಳನ್ನು ಪಡೆದುಕೊಂಡು ಉಳಿದ ಮೊತ್ತವನ್ನು ಡೆವಲಪರ್‌ಗೆ ಪಾವತಿಸಲಾಗಿದೆ.  ಬಾಕಿ ಉಳಿಸಿಕೊಂಡಿದ್ದ ಮೊತ್ತವನ್ನು ಸ್ಪಿನ್ ಮಾಂತ್ರಿಕ ತೀರಿಸಿದ್ದು ಸಿಂಗ್ ಗೆ ಇದರಿಂದ ಲಾಭವೇ ಆಗಿದೆ.

ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಾಸ್ರಾ 2021 ರ ಜುಲೈ 10 ರಂದು ತಮ್ಮ ಎರಡನೇ ಮಗುವಿನ ತಾಯಿಯಾಗಿದ್ದರು. ವೇಳೆ ಹರ್ಭಜನ್‌ ಸಿಂಗ್ ಮತ್ತು ಗೀತಾ ಬಸ್ರಾ ಅವರ ಮುಂಬೈನ ಲಕ್ಷುರಿಯಸ್‌ ಫೋಟೋಗಳು ವೈರಲ್‌ ಆಗಿತ್ತು. ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಜಲಂಧರ್‌ನಲ್ಲಿ ದೊಡ್ಡ ಮನೆ  ಇದೆ.  ಚಂಡೀಘಡದಲ್ಲಿಯೂ ಇನ್ನೊಂದು ಮನೆ ಇದೆ.

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುತ್ತಿದ್ದ ಸಿಂಗ್ ಈ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದರು. ಈ ಹಿಂದೆ ವೇಗದ ಬೌಲರ್ ಶ್ರೀಶಾಂತ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

1998 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್(Test Cricket) ಆಡಿದ ಹರ್ಭಜನ್ ನಂತರ ತಿರುಗಿ ನೋಡಿದ್ದೇ ಇಲ್ಲ. ಗಂಗೂಲಿ ನಾಯಕತ್ವದಲ್ಲಿ ಅತ್ಯುತ್ತಮ ಸ್ಪಿನರ್ ಆಗಿ  ಹೊರಹೊಮ್ಮಿದರು.   103 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 417 ವಿಕೆಟ್‌ಗಳನ್ನು ಪಡೆದಿದು ದಾಖಲೆ ನಿರ್ಮಿಸಿದ್ದಾರೆ.  ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಆಫ್ ಸ್ಪಿನ್ನರ್ ಎನಿಸಿಕೊಂಡರು.  236 ಏಕದಿನ ಪಂದ್ಯ(ODI) ಆಡಿದ್ದು ಒಟ್ಟು 269 ವಿಕೆಟ್‌ ಪಡೆದುಕೊಂಡಿದ್ದಾರೆ. ಮುಂಬೈ ಅಂಧೇರಿ ಸಹಜವಾಗಿಯೇ ಸೆಲೆಬ್ರಿಟಿಗಳು ಇರುವ  ಜಾಗ. ಕ್ರಿಕೆಟ್ ಆಟಗಾರರು, ಸಿನಿಮಾ ಮಂದಿ ಇಲ್ಲಿ ಫ್ಲಾಟ್ ಹೊಂದಿದ್ದು ಇದೀಗ ಸಿಂಗ್ ವ್ಯವಹಾರ ಜಾಣ್ಮೆಯನ್ನು ಮರೆದಿದ್ದಾರೆ. 

ಸಿನಿಮಾಕ್ಕೂ ಬಂದ ಸಿಂಗ್:  ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಕ್ರಿಕೆಟ್ ಸ್ಟೇಡಿಯಂನಲ್ಲಿ ಸೌಂಡ್ ಮಾಡ್ತಿದ್ದ ಹರ್ಭಜನ್ ಸಿಂಗ್ ಈಗ ಥಿಯೇಟರ್‌ನಲ್ಲಿ ಸೌಂಡ್ ಮಾಡೋಕೆ ರೆಡಿಯಾಗಿದ್ದಾರೆ. ಈ ಹಿಂದೆ ಹರ್ಭಜನ್ ಅವರು ತಮ್ಮ ಸಿನಿಮಾ ಫ್ರೆಂಡ್‌ಶಿಪ್ ಟೀಸರ್ ಶೇರ್ ಮಾಡಿಕೊಂಡಿದ್ದರು. ಭಾರತದ ಹಿರಿಯ ಕ್ರಿಕೆಟರ್‌ನ ಮೊದಲ ಸಿನಿಮಾ ಇದು. ಮೂರು ಭಾಷೆಯಲ್ಲಿ ಸಿದ್ಧವಾದ ಸಿನಿಮಾದಲ್ಲಿ ಹರ್ಭಜನ್ ಸಿಂಗ್ ರಂಜಿಸಲಿದ್ದಾರೆ. 

Follow Us:
Download App:
  • android
  • ios