Asianet Suvarna News Asianet Suvarna News

ಆಸೀಸ್ ಸುವರ್ಣ ದಿನಗಳ ಸೂತ್ರಧಾರ Shane Warne ನಿಧನಕ್ಕೆ, ವಿಶ್ವ ಕ್ರಿಕೆಟ್ ಅಚ್ಚರಿ!

ಸ್ಪಿನ್ ದಿಗ್ಗಜನ ನಿಧನಕ್ಕೆ ವಿಶ್ವ ಕ್ರಿಕೆಟ್ ಸಂತಾಪ

ಹೃದಯಾಘಾತದಿಂದ ಥಾಯ್ಲೆಂಡ್ ನಲ್ಲಿ ಸಾವು ಕಂಡ ಶೇನ್ ವಾರ್ನ್

ತಮ್ಮ ಸ್ಪಿನ್ ಎಸೆತಗಳ ಮೂಲಕ ಹಠಾತ್ ಅಚ್ಚರಿ ನೀಡುತ್ತಿದ್ದ ವಾರ್ನ್, ಸಾವಿನಲ್ಲೂ ಅಚ್ಚರಿ ನೀಡಿದ್ದು ವಿಪರ್ಯಾಸ

cricket world in shock after australia greatest cricketer spin legend shane warne death due to heart attack san
Author
Bengaluru, First Published Mar 4, 2022, 9:01 PM IST | Last Updated Mar 4, 2022, 9:04 PM IST

ನವದೆಹಲಿ (ಮಾ.4): ತಮ್ಮ ಸ್ಪಿನ್ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್ ಮನ್ ಗಳಿಗೆ ಹಠಾತ್ ಆಗಿ ಅಚ್ಚರಿ ನೀಡುವುದರಲ್ಲಿ ಹೆಸರುವಾಸಿಯಾಗಿದ್ದವರು ಶೇನ್ ವಾರ್ನ್ (Shane Warne). ಶತಮಾನದ ಎಸೆತದ (Ball Of Century) ಮೂಲಕ ಜಗತ್ಪ್ರಸಿದ್ಧರಾಗಿದ್ದ ಶೇನ್ ವಾರ್ನ್, ಬೌಲಿಂಗ್ ಎಂದರೆ ಅಲ್ಲೊಂದು ಅಚ್ಚರಿ ಖಂಡಿತಾ ಕಾಣಸಿಗುತ್ತಿತ್ತು. ಆದರೆ, ವಿಶ್ವ ಕ್ರಿಕೆಟ್ ನ ಸಾವು ಕೂಡ ಹಠಾತ್ ಆಗಿ ಬಂದಿದ್ದು ಕೇವಲ ವಿಪರ್ಯಾಸ.

ರೋಡ್ ಮಾರ್ಷ್ ನಿಧನಕ್ಕೆ ಬೆಳಗ್ಗೆ 7.30ರ ಸುಮಾರಿಗೆ ಥಾಯ್ಲೆಂಡ್ ನಿಂದಲೇ ಸಂತಾಪ ಸೂಚಿಸಿದ್ದ ಶೇನ್ ವಾರ್ನ್, ಸಂಜೆಯ ಹೊತ್ತಿಗೆ ಇಲ್ಲ ಎಂದಾಗ ವಿಶ್ವ ಕ್ರಿಕೆಟ್ ಗೆ (World Cricket) ಅಚ್ಚರಿ ಎನಿಸಿಬಿಟ್ಟಿದೆ. ಶೇನ್ ವಾರ್ನ್ ಹಠಾತ್ ನಿಧನಕ್ಕೆ ಪ್ರಖ್ಯಾತ ವ್ಯಕ್ತಿಗಳು, ಕ್ರಿಕೆಟ್ ನ ಹಾಲಿ ಹಾಗೂ ಮಾಜಿ ದಿಗ್ಗಜರು ಅಚ್ಚರಿಯಿಂದಲೇ ಸಂತಾಪ ವ್ಯಕ್ತಪಡಿಸಿದ್ದಾರೆ.

ಆಘಾತ, ದಿಗ್ಭ್ರಮೆ ಮತ್ತು ಅಚ್ಚರಿಯಾಗಿದೆ.. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ವಾರ್ನಿ. ಮೈದಾನದ ಒಳಗಾಗಲಿ ಅಥವಾ ಹೊರಗಾಗಲಿ ನಿಮ್ಮೊಂದಿಗೆ ಒಂದೇ ಒಂದು ನೀರಸ ಕ್ಷಣಗಳಿರಲಿಲ್ಲ. ಮೈದಾನದಲ್ಲಿ ನಿಮ್ಮ ಚೆಂಡನ್ನು ಎದುರಿಸಿದ ದಿನಗಳನ್ನು ಎಂಜಾಯ್ ಮಾಡಿದ್ದೆ. ಮೈದಾನದ ಹೊರಗೆ ಇರುತ್ತಿದ್ದ ತಮಾಷೆಯ ಕ್ಷಣಗಳನ್ನು ನನ್ನಲ್ಲಿ ಇರಿಸಿಕೊಳ್ಳುತ್ತೇನೆ. ಭಾರತಕ್ಕಾಗಿ ನಿಮ್ಮಲ್ಲಿ ಒಂದು ವಿಶೇಷ ಸ್ಥಾನವಿತ್ತು. ಭಾರತದ ಅಭಿಮಾನಿಗಳೂ ನಿಮಗೆ ವಿಶೇಷ ಸ್ಥಾನ ನೀಡಿದ್ದರು. ತುಂಬಾ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದೀರಿ" ಎಂದು ಮೈದಾನದಲ್ಲಿ ಶೇನ್ ವಾರ್ನ್ ಎಸೆತಗಳ ದಾಳಿ ಎದುರಿಸಿದ್ದ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್  (Sachin Tendulkar)ಬರೆದಿದ್ದಾರೆ.


"ಈ ಸುದ್ದಿಯನ್ನು ನಂಬಲಾಗುತ್ತಿಲ್ಲ. ವಿಶ್ವ ಕ್ರಿಕೆಟ್ ನ ದಿಗ್ಗಜ ಸ್ಪಿನ್ನರ್ ಗಳಲ್ಲಿ ಒಬ್ಬರು. ಸ್ಪಿನ್ ಎಸೆತವನ್ನು ಕೂಲ್ ಆಗಿ ಎಸೆಯುತ್ತಿದ್ದ ವ್ಯಕ್ತಿ. ಸೂಪರ್ ಸ್ಟಾರ್ ಶೇನ್ ವಾರ್ನ್ ಇನ್ನಿಲ್ಲ. ಜೀವನ ತುಂಬಾ ಸೂಕ್ಷ್ಮ. ಆದರೆ, ಅದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಅವರ ಕುಟುಂಬ, ಸ್ನೇಹಿತರು ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ನನ್ನ ಸಂತಾಪಗಳನ್ನು ತಿಳಿಸುತ್ತಿದ್ದೇನೆ" ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಶೇನ್ ವಾರ್ನ್ ಎಸೆತಗಳನ್ನು ಎದುರಿಸಿದ್ದ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ (virender sehwag) ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

RIP Shane warne ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿ ವಾರ್ನ್ ಕೊನೆಯ ಟ್ವೀಟ್, ದಿಗ್ಗಜನ ಅಗಲಿಕೆ ತಂದ ಆಘಾತ!
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಕೂಡ ಈ ಕುರಿತಾಗಿ ಟ್ವೀಟ್ ಮಾಡಿದ್ದು, ವಾರ್ನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. "ನಿಜವಾಗಿಯೂ ಏನು ಹೇಳಬೇಕು ಎನ್ನಲು ಪದಗಳಿಲ್ಲ. ಇದು ಅತ್ಯಂತ ದುಃಖದ ವಿಚಾರ. ನಮ್ಮ ಕ್ರೀಡೆಯ ಅಪ್ರತಿಮ ದಿಗ್ಗಜ ಮತ್ತು ಚಾಂಪಿಯನ್ ಇಂದು ನಮ್ಮನ್ನು ಅಗಲಿದ್ದಾರೆ. ಶೇನ್ ವಾರ್ನ್ ನಿಧನಕ್ಕೆ ಸಂತಾಪಗಳು.. ಇನ್ನೂ ಇದನ್ನು ನಂಬಲಾಗುತ್ತಿಲ್ಲ' ಎಂದು ಬರೆದಿದ್ದಾರೆ.

Shane Warne Dies ಸ್ಪಿನ್ ದಿಗ್ಗಜ ಶೇನ್ ವಾರ್ನ್ ನಿಧನ
"ಕ್ರಿಕೆಟ್ ನ ಸಾರ್ವಕಾಲಿಕ ಶ್ರೇಷ್ಠ ಪ್ಲೇಯರ್. ಒಬ್ಬ ದಿಗ್ಗಜ, ಒಬ್ಬ ಮಾಂತ್ರಿಕ. ಕ್ರಿಕೆಟ್ ಅನ್ನು ನೀವು ಬದಲಾಯಿಸಿದ್ದೀರಿ. RIP ಶೇನ್ ವಾರ್ನ್" ಎಂದು ಆಶಷ್ ಟೂರ್ನಿಗಳಲ್ಲಿ ಇಂಗ್ಲೆಂಡ್ ತಂಡದ ಬೆನ್ನುಮೂಳೆ ಮುರಿಯುವ ಮೂಲಕ ಮಿಂಚಿದ್ದ ವಾರ್ನ್ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (England Cricket Board) ಟ್ವೀಟ್ ಮಾಡಿದೆ.

"ನನಗೆ ಸಂಪೂರ್ಣ ಆಘಾತವಾಗಿದೆ. ಕ್ರಿಕೆಟ್ ಗೆ ತುಂಬಲಾರದ ನಷ್ಟ. ನನ್ನ ಬಳಿ ವಿವರಿಸಲು ಪದಗಳಿಲ್ಲ. ಕ್ರೀಡೆಗಾಗಿ ನೀವು ಮಾಡಿದ ಎಲ್ಲಾ ಕೆಲಸಕ್ಕೂ ಧನ್ಯವಾದಗಳು. ನಿಮ್ಮ ಪ್ರೀತಿಪಾತ್ರರಿಗೆ ನಮ್ಮ ಸಂತಾಪಗಳನ್ನು ತಿಳಿಸುತ್ತದ್ದೇನೆ' ಎಂದು ಶಿಖರ್ ಧವನ್ (Shikhar Dhawan) ಟ್ವೀಟ್ ಮಾಡಿದ್ದಾರೆ. "ಇದೊಂದು ನಂಬಲು ಅಸಾಧ್ಯವಾದ ಸುದ್ದಿ. ನಿಜಕ್ಕೂ ಬಹಳ ಆಘಾತವಾಗಿದೆ. ಬಹುಶಃ ಈಗಲೂ ಇದು ನಿಜವಿರಲಾರದು ಎಂದುಕೊಳ್ಳುತ್ತೇನೆ. ಈ ಸುದ್ದಿಗಾಗಿ ನಾನು ಯಾವ ಸ್ಥಿತಿಯ ಅಚ್ಚರಿಯಲ್ಲಿದ್ದೇನೆ ಎಂದು ಹೇಳಲು ಸಾಧ್ಯವಾಗದು. ಕ್ರಿಕೆಟ್ ಗೆ ದೊಡ್ಡ ನಷ್ಟ" ಎಂದು ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ, ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ವಿವಿಯನ್ ರಿಚರ್ಡ್ಸ್ ಬರೆದಿದ್ದಾರೆ.

"ಶೇನ್ ವಾರ್ನ್ ಕ್ರೌಡ್ ಫುಲ್ಲರ್ ಆಗಿದ್ದರು. ಚೆಂಡಿನೊಂದಿಗೆ ಜಾದೂಗಾರ. ಆಸ್ಟ್ರೇಲಿಯನ್ ಕ್ರಿಕೆಟ್‌ನ ಸಂಪೂರ್ಣ ದಂತಕಥೆ. ಮೊದಲ ಐಪಿಎಲ್ ವಿಜೇತ ನಾಯಕ. ಅವರನ್ನು ನಾವು ಖಂಡತವಾಗಿ ಮಿಸ್ ಮಾಡಿಕೊಳ್ಳುತ್ತೇನೆ. ಅವರು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತಾರೆ" ಎಂದು ಇರ್ಫಾನ್ ಪಠಾಣ್ ಬರೆದಿದ್ದಾರೆ.


"ಲೆಗ್ ಸ್ಪಿನ್ ಎನ್ನುವುದು ಆರ್ಟ್. ಶೇನ್ ವಾರ್ನ್ ಇದರ ಆರ್ಟಿಸ್ಟ್- ನಿಮ್ಮ ನೆನಪುಗಳು ಎಂದಿಗೂ ಅಜರಾಮರ. ಟೆಸ್ಟ್ ನಲ್ಲಿ 708 ವಿಕೆಟ್, ಏಕದಿನದಲ್ಲಿ 293 ವಿಕೆಟ್, ವಿಶ್ವಕಪ್ ವಿಜೇತ, ಆಶಷ್ ವಿಜೇತ, ಐಪಿಎಲ್ ವಿಜೇತ, ಆಸೀಸ್ ಸುವರ್ಣ ದಿನಗಗಳ ಸೂತ್ರಧಾರ. ನಿಧನಕ್ಕೆ ಸಂತಾಪಗಳು ಶೇನ್ ವಾರ್ನ್" ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

 

Latest Videos
Follow Us:
Download App:
  • android
  • ios