Asianet Suvarna News Asianet Suvarna News

ನಾಳೆ ಬೆಂಗಳೂರಿನಲ್ಲಿ ಪಾಕಿಸ್ತಾನ-ನ್ಯೂಜಿಲೆಂಡ್ ಹೈವೋಲ್ಟೇಜ್ ಪಂದ್ಯ; ಸಂಚಾರಿ ಪೊಲೀಸರಿಂದ ಹೊಸ ಗೈಡ್‌ಲೈನ್!

ನಾಳೆ (ನ.4) ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿದ್ದು, ಹೈವೋಲ್ಟೇಜ್ ಪಂದ್ಯವಾಗಿರಲಿದೆ. ಸಾಕಷ್ಟು ಪ್ರೇಕ್ಷಕರು ಹರಿದುಬರುವ ಹಿನ್ನೆಲೆ ಬೆಂಗಳೂರು ಸಂಚಾರಿ ಪೊಲೀಸರಿಂದ ಭದ್ರತೆ ಜೊತೆಗೆ ಹೊಸದಾಗಿ ಟ್ರಾಫಿಕ್ ಮಾರ್ಗಸೂಚಿ ಪ್ರಕಟಿಸಲಾಗಿದೆ. 

Cricket world cup 2023 Pakistan vs New Zealand match at Chinnaswamy Stadium tomorrow at bengaluru rav
Author
First Published Nov 3, 2023, 6:20 PM IST

ಬೆಂಗಳೂರು(ನ.3): ನಾಳೆ (ನ.4) ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿದ್ದು, ಹೈವೋಲ್ಟೇಜ್ ಪಂದ್ಯವಾಗಿರಲಿದೆ. ಸಾಕಷ್ಟು ಪ್ರೇಕ್ಷಕರು ಹರಿದುಬರುವ ಹಿನ್ನೆಲೆ ಬೆಂಗಳೂರು ಸಂಚಾರಿ ಪೊಲೀಸರಿಂದ ಭದ್ರತೆ ಜೊತೆಗೆ ಹೊಸದಾಗಿ ಟ್ರಾಫಿಕ್ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ನಾಳೆ ವಾಹನ ದಟ್ಟಣೆ ಹೆಚ್ಚಾಗುವ ಹಿನ್ನೆಲೆ ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡಿರುವ ಸಂಚಾರಿ ಪೊಲೀಸರು. ಬೆಳಗ್ಗೆ 7 ಗಂಟೆಯಿಂದ ರಾತ್ರಿ 11ರವರೆಗೆ ಕೆಳಗಿನ ಸೂಚಿಸಲಾಗಿರುವ ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧವಾಗಿದೆ.

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ Net Worth ಎಷ್ಟು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ವಾಹನ ನಿಲುಗಡೆಗೆ ನಿಷೇಧವಿರುವ ರಸ್ತೆಗಳು:

ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ರಾಜ ಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್‌ ಪಾರ್ಕ್ ರಸ್ತೆ, ಸೆಂಟ್‌ ಮಾರ್ಕ್‌ರಸ್ತೆ, ಮ್ಯೂಸಿಯಂ ರಸ್ತೆ. ಕಸ್ತೂರ ಬಾ ರಸ್ತೆ, CRI ಬಿ.ಆರ್. ಅಂಬೇಡ್ಕರ್‌ರಸ್ತೆ, ಲ್ಯಾವೆಲ್ಲಿ ರಸ್ತೆ, ವಿಠಲ್ ಮಲ್ಯ ರಸ್ತೆ,  ನೃಪತುಂಗರಸ್ತೆ.

3 ಸಾವಿರ ಕೋಟಿ ರೂಪಾಯಿ ಮೌಲ್ಯದ ಐಪಿಎಲ್‌ನಲ್ಲಿ ಪಾಲು ಖರೀದಿಸಲು ಮುಂದಾದ ಸೌದಿ ಅರೇಬಿಯಾ!

ಸಾರ್ವಜನಿಕ ವಾಹನ ನಿಲುಗಡೆ ಸ್ಥಳಗಳು(ಸ್ಥಳ ಲಭ್ಯತೆ/ಪಾವತಿ ನಿಲುಗಡೆ):

ಕಿಂಗ್‌ ರಸ್ತೆ, ಯುಬಿ ಸಿಟಿ ಪಾರ್ಕಿಂಗ್ ಸ್ಥಳ, ಶಿವಾಜಿನಗರ ಬಿಎಂಟಿಸಿ ಬಸ್‌ ನಿಲ್ದಾಣದ ಮೊದಲನೇ ಮಹಡಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

Follow Us:
Download App:
  • android
  • ios