Asianet Suvarna News Asianet Suvarna News

SA vs India ODI series : ದಕ್ಷಿಣ ಆಫ್ರಿಕಾ ಏಕದಿನ ತಂಡ ಪ್ರಕಟ, ಟೆಂಬಾ ಬವುಮಾ ಕ್ಯಾಪ್ಟನ್!

ಭಾರತ ವಿರುದ್ಧ ಸರಣಿಗೆ 17 ಸದಸ್ಯರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ
ಟೆಂಬಾ ಬವುಮಾ ತಂಡಕ್ಕೆ ನಾಯಕ, ಕೇಶವ್ ಮಹಾರಾಜ್ ಉಪನಾಯಕ
ಮಾರ್ಕೋ ಜಾನ್ಸೆನ್ ಏಕದಿನ ತಂಡದ ಹೊಸಮುಖ
 

Cricket South Africa Sunday announced the national 17 man squad for three match ODI series against India san
Author
Bengaluru, First Published Jan 2, 2022, 11:35 PM IST

ಜೊಹಾನ್ಸ್ ಬರ್ಗ್ (ಜ.2): ಪ್ರವಾಸಿ ಭಾರತ (Team India) ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ (ODI Series) ಸರಣಿಗಾಗಿ ಆತಿಥೇಯ ದಕ್ಷಿಣ ಅಫ್ರಿಕಾದ (South Africa) 17 ಸದಸ್ಯರ ತಂಡವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಭಾನುವಾರ ಪ್ರಕಟಿಸಿದೆ. ಜನವರಿ 19 ರಿಂದ 23ರವರೆಗೆ ಪಾರ್ಲ್ (Paarl) ಹಾಗೂ ಕೇಪ್ ಟೌನ್ ನಲ್ಲಿ (Cape Town) ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕ ರೋಹಿತ್ ಶರ್ಮ (Rohit Sharma) ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ (KL Rahul) ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ.

17 ಸದಸ್ಯರ ತಂಡದಲ್ಲಿ ಯುವ ವೇಗಿ ಮಾರ್ಕೋ ಜಾನ್ಸೆನ್ (Marco Jansen) ಕೂಡ ಸ್ಥಾನ ಪಡೆದಿದ್ದಾರೆ. ರಾಷ್ಟ್ರೀಯ ಏಕದಿನ ತಂಡಕ್ಕೆ ಇದು ಅವರ ಮೊದಲ ಕರೆಯಾಗಿದೆ. ಸೆಂಚುರಿಯನ್ ಟೆಸ್ಟ್ (Centurion Test) ಮೂಲಕ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಜಾನ್ಸೆನ್, ಆ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಉರುಳಿಸುವ ಮೂಲಕ ಗಮನಸೆಳೆದಿದ್ದರು. ದಕ್ಷಿಣ ಆಫ್ರಿಕಾ ತಂಡವನ್ನು ಟೆಂಬಾ ಬವುಮಾ (Temba Bavuma) ಮುನ್ನಡೆಸಲಿದ್ದು, ಕೇಶವ್ ಮಹಾರಾಜ್ (Keshav Maharaj)ತಂಡದ ಉಪನಾಯಕರಾಗಿರಲಿದ್ದಾರೆ. ಕೆಲ ದಿನಗಳ ಹಿಂದೆ ಹಠಾತ್ ಆಗಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದ ಅನುಭವಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ( Quinton de Kock) ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ.

ನೆದರ್ಲೆಂಡ್ಸ್ ವಿರುದ್ಧದ ಸರಣಿಯ ವೇಳೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದ ವೇಯ್ನ್ ಪರ್ನೆಲ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಅವರೊಂದಿಗೆ ನೆದರ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಜುಬೇರ್ ಹಮ್ಜಾ ಕೂಡ ತಂಡದಲ್ಲಿದ್ದಾರೆ. ಒಟ್ಟಾರೆ ತಂಡದಲ್ಲಿ ಮಿಸ್ ಆಗಿರುವ ದೊಡ್ಡ ಹೆಸರೆಂದರೆ ಆನ್ರಿಚ್ ನಾರ್ಜೆ (Anrich Nortje). ಸೊಂಟದ ಗಾಯದಿಂದಾಗಿ ಇನ್ನೂ ಚೇತರಿಕೆ ಕಾಣಬೇಕಿರುವ ಆನ್ರಿಚ್, ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಸಂಪೂರ್ಣವಾಗಿ ಹೊರಗುಳಿದಿದ್ದರು.
 


"ಇದು ತುಂಬಾ ಅದ್ಭುತವಾದ ತಂಡ ಮತ್ತು ಆಯ್ಕೆ ಸಮಿತಿ ಹಾಗೂ ನಾನು ಈ ತಂಡದ ಪ್ರದರ್ಶನ ಹೇಗಿರಲಿದೆ ಎನ್ನುವುದನ್ನು ನೋಡಲು ಉತ್ಸುಕರಾಗಿದ್ದೇವೆ.  ನಮ್ಮ ಅನೇಕ ಆಟಗಾರರಿಗೆ, ಇದು ಈ ಶಕ್ತಿಶಾಲಿ ಭಾರತೀಯ ತಂಡದ ವಿರುದ್ಧ ಆಡುವುದಕ್ಕೆ ಬಹಳ ಖುಷಿ ಎನಿಸಿದೆ. ಇದು ಯುವ ಕ್ರಿಕೆಟಿಗರ ಪಾಲಿಗೆ, ಅವರ ಬದುಕಿನ ಅತಿದೊಡ್ಡ ಸರಣಿ. ಫಲಿತಾಂಶ ಏನನ್ನು ತರುತ್ತಾರೆ ಎನ್ನುವುದನ್ನು ನಾವು ಎದುರು ನೋಡುತ್ತಿದ್ದೇವೆ. ಟೆಂಬಾ ಬವುಮಾ ಹಾಗೂ ಮಾರ್ಕ್ ಬೌಷರ್ ಗೆ ಈ ಮೂಲಕ ಶುಭ ಹಾರೈಸುತ್ತೇವೆ" ಎಂದು ಆಯ್ಕೆ ಸಮಿತಿಯ ಸಂಯೋಜಕ ವಿಕ್ಟರ್ ಎಂಪಿಟ್ಸಾಂಗ್ ಹೇಳಿದ್ದಾರೆ. ಜನವರಿ 19 ರಂದು ಮೊದಲ ಹಾಗೂ 21 ರಂದು 2ನೇ ಏಕದಿನ ಪಂದ್ಯ ಪಾರ್ಲ್ ನ ಬೋಲಾಂಡ್ ಪಾರ್ಕ್ ನಲ್ಲಿ ನಡೆಯಲಿದೆ. ಸರಣಿಯ ಅಂತಿಮ ಹಾಗೂ ಕೊನೆಯ ಪಂದ್ಯ ಜನವರಿ 23 ರಂದು ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯಲಿದೆ.

SA vs India ODI series : ಭಾರತ ತಂಡಕ್ಕೆ ಕೆಎಲ್ ರಾಹುಲ್ ನಾಯಕ, ರೋಹಿತ್ ಶರ್ಮ ಔಟ್!
ಇನ್ನು ಭಾರತ ತಂಡದಲ್ಲಿಯೂ ಕೆಲವು ಹೊಸ ಮುಖಗಳನ್ನು ಆಯ್ಕೆ ಮಾಡಲಾಗಿದೆ. ಮಧ್ಯಮ ಕ್ರಮಾಂಕದಲ್ಲಿ ವೆಂಕಟೇಶ್ ಅಯ್ಯರ್ ಹಾಗೂ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ರನ್ನು ತಂಡಕ್ಕೆ ಆಯ್ಕೆ ಮಾಡಿದ್ದರೆ, ರೋಹಿತ್ ಶರ್ಮ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಜಸ್ ಪ್ರೀತ್ ಬುಮ್ರಾ ಉಪನಾಯಕರಾಗಿ ಇರಲಿದ್ದಾರೆ. ಏಕದಿನ ತಂಡದ ಖಾಯಂ ಸದಸ್ಯರಾಗಿದ್ದ ಹಾರ್ದಿಕ್ ಪಾಂಡ್ಯ, ಮೊಹಮದ್ ಶಮಿ, ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಿಳಿಯಲಿದೆ.

Follow Us:
Download App:
  • android
  • ios