'ಏಕದಿನ ಕ್ರಿಕೆಟ್ ಬೋರ್ ಹೊಡಿಸುತ್ತಿದೆ': ಒನ್ಡೇ ಕ್ರಿಕೆಟ್ ಬದಲಾವಣೆಗೆ ಸಚಿನ್ ತೆಂಡುಲ್ಕರ್ ಮಹತ್ವದ ಸಲಹೆ
ಏಕದಿನ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆಗೆ ಸಚಿನ್ ತೆಂಡುಲ್ಕರ್ ಸಲಹೆ
ಏಕದಿನ ಕ್ರಿಕೆಟ್ ಬೋರಿಂಗ್ ಆಗುತ್ತಿದೆ ಎಂದ ಸಚಿನ್ ತೆಂಡುಲ್ಕರ್
ಟೆಸ್ಟ್ ರೀತಿ ತಲಾ 25 ಓವರ್ಗಳ 2 ಇನ್ನಿಂಗ್‌್ಸ ರೂಪದಲ್ಲಿ ಆಡಿಸಬೇಕು
ನವದೆಹಲಿ(ಮಾ.18): ಏಕದಿನ ಪಂದ್ಯವನ್ನು ತಲಾ 40 ಓವರ್ಗೆ ಇಳಿಸಬೇಕೆಂಬ ರವಿ ಶಾಸ್ತ್ರಿ ಹೇಳಿಕೆ ಬೆನ್ನಲ್ಲೇ ಸಚಿನ್ ತೆಂಡುಲ್ಕರ್ ಕೂಡಾ ಏಕದಿನ ಕ್ರಿಕೆಟ್ ನೋಡಲು ಬೋರ್ ಆಗುತ್ತಿದೆ ಎಂದಿದ್ದು, ಮನೋರಂಜನೆಗಾಗಿ ಏಕದಿನ ಮಾದರಿಯಲ್ಲಿ ಕೆಲ ಬದಲಾವಣೆ ಅಗತ್ಯವಿದೆ ಎಂದು ಅಭಿಪ್ರಾಯಿಸಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಈಗಿನ ಪಂದ್ಯಗಳ ಫಲಿತಾಂಶ ಮೊದಲೇ ಊಹಿಸಬಹುದು. ಅದರಲ್ಲೂ 15ರಿಂದ 40 ಓವರ್ವರೆಗಿನ ಅವಧಿ ಬೋರಿಂಗ್ ಆಗುತ್ತಿದೆ. ಇದಕ್ಕೆ ಪ್ರತಿ ಇನ್ನಿಂಗ್್ಸನಲ್ಲಿ 2 ಹೊಸ ಬಾಲ್ ಬಳಕೆ ಕೂಡಾ ಕಾರಣವಾಗುತ್ತಿದೆ’ ಎಂದಿದ್ದಾರೆ. ಅಲ್ಲದೇ, ಏಕದಿನ ಮಾದರಿಯನ್ನು ಟೆಸ್ಟ್ ರೀತಿ ತಲಾ 25 ಓವರ್ಗಳ 2 ಇನ್ನಿಂಗ್‌್ಸ ರೂಪದಲ್ಲಿ ಆಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಭಾರತ ಕ್ರಿಕೆಟ್ ತಂಡವು ಸದ್ಯ ತವರಿನಲ್ಲಿ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದು, ಮೊದಲ ಪಂದ್ಯದಲ್ಲಿ 5 ವಿಕೆಟ್ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿಯೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಆ ಮಹತ್ವದ ಸರಣಿಗೆ ಪೂರ್ವಭಾವಿ ಸಿದ್ದತೆಯ ರೂಪದಲ್ಲಿ ಈ ಸರಣಿಯನ್ನು ಟೀಂ ಇಂಡಿಯಾ ಬಳಸಿಕೊಳ್ಳುತ್ತಿದೆ. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಆಡಲಿರುವ ಕೊನೆಯ ಅಂತಾರಾಷ್ಟ್ರೀಯ ಸರಣಿ ಇದಾಗಿದೆ. 16ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 31ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಇಂಗ್ಲೆಂಡ್‌ನ ಕೌಂಟಿ ಕೆಂಟ್ ತಂಡಕ್ಕೆ ಆರ್ಶದೀಪ್ ಸಿಂಗ್
ಕೆಂಟ್: ಭಾರತದ ಯುವ ವೇಗಿ ಆರ್ಶದೀಪ್ ಸಿಂಗ್ ಇಂಗ್ಲೆಂಡ್ ಕೌಂಟಿ ಚಾಂಪಿಯನ್ಶಿಪ್ನ ಕೆಂಟ್ ತಂಡ ಸೇರ್ಪಡೆಗೊಂಡಿದ್ದು, ಅವರು ಜೂನ್-ಜುಲೈನಲ್ಲಿ 5 ಪ್ರಥಮ ದರ್ಜೆ ಪಂದ್ಯಗಳನ್ನಾಡಲಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಲು ಕೌಂಟಿ ಕ್ರಿಕೆಟ್ ಆಡುವಂತೆ ಭಾರತ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ನೀಡಿದ ಸಲಹೆ ಮೇರೆಗೆ ಆರ್ಶದೀಪ್ ಸಿಂಗ್ ಕೆಂಟ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕೂಡ ಕೌಂಟಿ ಕ್ರಿಕೆಟ್‌ನಲ್ಲಿ ಕೆಂಟ್ ತಂಡದ ಪರ ಆಡಿದ್ದರು.
2ನೇ ಟೆಸ್ಟ್: ಕಿವೀಸ್ ಮೊದಲ ದಿನ 155/2
ವೆಲ್ಲಿಂಗ್ಟನ್: ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಮೊದಲ ದಿನ 2 ವಿಕೆಟ್ಗೆ 155 ರನ್ ಕಲೆಹಾಕಿದೆ. ಮೊದಲ ಪಂದ್ಯದಂತೆಯೇ ಈ ಪಂದ್ಯಕ್ಕೂ ಮಂದ ಬೆಳಕು ಅಡ್ಡಿಯಾಗಿದ್ದು, ಮೊದಲ ದಿನ ಕೇವಲ 48 ಓವರ್ ಆಟ ನಡೆಯಿತು. ಟಾಮ್ ಲೇಥಮ್ 21ಕ್ಕೆ ವಿಕೆಟ್ ಒಪ್ಪಿಸಿದರೂ, ಡೆವೊನ್ ಕಾನ್‌ವೇ 78 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಕೇನ್ ವಿಲಿಯಮ್ಸನ್(26), ಹೆನ್ರಿ ನಿಕೋಲ್ಸ್(18) 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ರಾಹುಲ್ -ಜಡೇಜಾ ಹೋರಾಟ, ಏಕದಿನದಲ್ಲಿ ಶುಭಾರಂಭ ಮಾಡಿದ ಭಾರತ!
ಆಗಸ್ಟಲ್ಲಿ ಐರ್ಲೆಂಡ್ನಲ್ಲಿ ಭಾರತಕ್ಕೆ 3 ಟಿ20 ಪಂದ್ಯ
ಡಬ್ಲಿನ್: ಭಾರತ ತಂಡ ಮುಂಬರುವ ಆಗಸ್ಟ್ನಲ್ಲಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, 3 ಟಿ20 ಪಂದ್ಯಗಳನ್ನಾಲಿದೆ ಎಂದು ಕ್ರಿಕೆಟ್ ಐರ್ಲೆಂಡ್ ಶುಕ್ರವಾರ ಪ್ರಕಟಿಸಿದೆ. ಕಳೆದ ವರ್ಷ ಕೂಡಾ ಐರ್ಲೆಂಡ್ನಲ್ಲಿ ಭಾರತ 2 ಟಿ20 ಪಂದ್ಯಗಳನ್ನಾಡಿತ್ತು. ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದ್ದರು.
ಆದರೆ ಈ ಬಾರಿ ಅಕ್ಟೋಬರ್-ನವೆಂಬರ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್ ನಡೆಯಲಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಹಾರ್ದಿಕ್ ಸೇರಿದಂತೆ ಪ್ರಮುಖ ಆಟಗಾರರನ್ನು ಐರ್ಲೆಂಡ್ ಸರಣಿಯಲ್ಲಿ ಆಡಿಸುವ ಸಾಧ್ಯತೆ ಕಡಿಮೆ. ವಿಶ್ವಕಪ್ನಲ್ಲಿ ಆಡದ ಆಟಗಾರರನ್ನು ಐರ್ಲೆಂಡ್‌ಗೆ ಕಳುಹಿಸಬಹುದು ಎನ್ನಲಾಗುತ್ತಿದೆ.