ಗೋವಾದಲ್ಲಿ ಜತೆಯಾದ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಅನಿಲ್ ಕುಂಬ್ಳೆದಿಲ್‌ ಚಾಹ್ತಾ ಹೈ ಸಿನಿಮಾ ಕ್ಷಣವನ್ನು ಮರುಸೃಷ್ಟಿಸಿದ ಈ ಜೋಡಿಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್

ಪಣಜಿ(ಮಾ.05): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್‌, ಇತ್ತೀಚೆಗಷ್ಟೇ ಕ್ರಿಕೆಟ್‌ ದಿಗ್ಗಜರಾದ ಅನಿಲ್ ಕುಂಬ್ಳೆ, ಯುವರಾಜ್ ಸಿಂಗ್ ಜತೆಗೂಡಿ ಗೋವಾದಲ್ಲಿ 'ದಿಲ್ ಚಾಹ್ತಾ ಹೈ' ಕ್ಷಣವನ್ನು ಮರುಸೃಷ್ಟಿಸಿದ್ದಾರೆ. ಕ್ರಿಕೆಟ್ ದಂತಕಥೆ ಸಚಿನ್‌ ತೆಂಡುಲ್ಕರ್, ಅನಿಲ್‌ ಕುಂಬ್ಳೆ ಹಾಗೂ ಯುವರಾಜ್ ಸಿಂಗ್ ಅವರು ಒಟ್ಟಾಗಿ ನಿಂತ ಸೆಲ್ಫಿ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ತಮ್ಮ ಅಭಿಮಾನಿಗಳಿಗೆ ಇದರಲ್ಲಿ ಯಾರು 'ಆಕಾಶ್, ಸಮೀರ್ ಹಾಗೂ ಸಿದ್' ಎಂದು ಕೇಳಿದ್ದಾರೆ. 2001ರಲ್ಲಿ ತೆರೆಕಂಡ 'ದಿಲ್ ಚಾಹ್ತಾ ಹೈ' ಸಿನಿಮಾದಲ್ಲಿ ಆಮೀರ್ ಖಾನ್, ಅಕ್ಷಯ್ ಖನ್ನಾ ಹಾಗೂ ಸೈಫ್ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

"ಗೋವಾದಲ್ಲಿ ನಮ್ಮ ದಿಲ್ ಚಾಹ್ತಾ ಹೈ ಕ್ಷಣವಿದು. ಯಾರೆಲ್ಲಾ ಇದರಲ್ಲಿ ಆಕಾಶ್, ಅಮೀರ್ ಮತ್ತು ಸಿದ್‌ರನ್ನು ಹುಡುಕಿದಿರಿ? ಎಂದು ಸಚಿನ್ ತೆಂಡುಲ್ಕರ್ ಪ್ರಶ್ನಿಸಿದ್ದಾರೆ. ಈ ಫೋಟೋದಲ್ಲಿ ಮೂವರು ಸನ್‌ ಗ್ಲಾಸ್‌ ಹಾಕಿಕೊಂಡು ನಗುನಗುತ್ತಲೇ ಫೋಟೋಗೆ ಫೋಸ್ ಕೊಟ್ಟಿದ್ದಾರೆ.

View post on Instagram

ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್, ಈ ಫೋಟೋವನ್ನು ಪೋಸ್ಟ್‌ ಮಾಡಿ ಕೇವಲ ಒಂದು ದಿನದೊಳಗಾಗಿ 14 ಲಕ್ಷಕ್ಕೂ ಅಧಿಕ ಲೈಕ್ಸ್‌ ನೀಡಿದ್ದಾರೆ ಅಭಿಮಾನಿಗಳು. 

ಇನ್ನು ಕೆಲವು ನೆಟ್ಟಿಗರು ಈ ಫೋಟೋ ನೋಡಿ, ಒಂದೋ ಇವರ ಗೆಳೆತನ ತುಂಬಾ ಆಳವಾದದ್ದು ಆಗಿರಬೇಕು ಅಥವಾ ಇದು 3D ಫೋಟೋವಾಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

Ind vs Aus ಮೂರೇ ದಿನಕ್ಕೆ ಮುಗಿದ ಪಂದ್ಯದ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಚ್ಚರಿಯ ಹೇಳಿಕೆ..!

ಕ್ರಿಕೆಟ್‌ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್ ಹಾಗೂ ಅನಿಲ್ ಕುಂಬ್ಳೆ ತಮ್ಮ ನಿವೃತ್ತಿಯ ಜೀವನವನ್ನು ಭರ್ಜರಿಯಾಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಸಚಿನ್ ತೆಂಡುಲ್ಕರ್ ಸದ್ಯ ಮುಂಬರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಪಾಳಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.