Asianet Suvarna News Asianet Suvarna News

ಕೊಹ್ಲಿ, ಅಖ್ತರ್ ಬಳಿಕ ಸಚಿನ್‌ರಿಂದಲೂ 4 ದಿನಗಳ ಟೆಸ್ಟ್ ಪಂದ್ಯಕ್ಕೆ ವಿರೋಧ

4 ದಿನಗಳ ಟೆಸ್ಟ್ ಪಂದ್ಯ ಆಯೋಜನೆ ಪ್ರಸ್ತಾಪವನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ವಿರೋಧಿಸಿದ್ದಾರೆ. ಕೊಹ್ಲಿ, ಗಂಭೀರ್, ಅಖ್ತರ್ ಬಳಿಕ ಕ್ರಿಕೆಟ್ ದೇವರು ಸಾಂಪ್ರದಾಯಿಕ ಕ್ರಿಕೆಟ್ ಉಳಿಸಲು ಮುಂದಾಗಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

Cricket Legend Sachin Tendulkar opposes idea of four day Tests
Author
New Delhi, First Published Jan 8, 2020, 7:39 PM IST
  • Facebook
  • Twitter
  • Whatsapp

ನವದೆಹಲಿ[ಜ.08]: ಐಸಿಸಿ ಪ್ರಸ್ತಾಪಿಸಿರುವ 4 ದಿನಗಳ ಟೆಸ್ಟ್ ಆಯೋಜನೆಗೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಈ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ 4 ದಿನಗಳ ಟೆಸ್ಟ್ ಪಂದ್ಯಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಹಾ ಅಸಮಾಧಾನ ಹೊರ ಹಾಕಿದ್ದಾರೆ.

4 ದಿನಗಳ ಟೆಸ್ಟ್‌ ನಡೆಸಲು ಗಂಗೂಲಿ ಬಿಡಲ್ಲ: ಅಖ್ತರ್‌!

ಕ್ರಿಕೆಟ್‌ ದೇವರು ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌, ಟೆಸ್ಟ್‌ ಕ್ರಿಕೆಟ್‌ ಅನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಪ್ರಸ್ತಾಪವನ್ನು ವಿರೋಧಿಸಿದ್ದಾರೆ. ಮಾತ್ರವಲ್ಲ  ಟೆಸ್ಟ್‌ ಕ್ರಿಕೆಟನ್ನು 4 ದಿನಗಳಿಗೆ ಇಳಿಸುವುದರಿಂದ ಆಟ ತನ್ನ ಸೊಬಗು ಕಳೆದುಕೊಳ್ಳಲಿದೆ ಎಂದು ಸಚಿನ್‌ ಆತಂಕ ವ್ಯಕ್ತಪಡಿದ್ದಾರೆ. 

2023ರಿಂದ 4 ದಿನಗಳ ಟೆಸ್ಟ್‌ ಕ್ರಿಕೆಟ್?

‘ಟೆಸ್ಟ್‌ ಕ್ರಿಕೆಟ್‌ನ ಪ್ರೀತಿಸುವ ಅಭಿಮಾನಿಯಾಗಿ ಹೇಳುತ್ತಿದ್ದೇನೆ ಆಟದ ಮಾದರಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಪಂದ್ಯವನ್ನು 4 ದಿನಗಳಿಗೆ ಇಳಿಸಿದರೆ, ಆಟಗಾರರು ಟೆಸ್ಟ್‌ ಕ್ರಿಕೆಟನ್ನು ನೋಡುವ ದೃಷ್ಟಿಯೇ ಬದಲಾಗಲಿದೆ’ ಎಂದು 200 ಟೆಸ್ಟ್‌ಗಳನ್ನು ಆಡಿರುವ ಸಚಿನ್‌ ಹೇಳಿದ್ದಾರೆ.

ಈ ಮೊದಲು ಡೆಲ್ಲಿ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್ ಗಂಭೀರ್ ಸಹಾ 4 ದಿನಗಳ ಟೆಸ್ಟ್ ಕ್ರಿಕೆಟ್‌ಗೆ ಅಸಮ್ಮತಿ ಸೂಚಿಸಿದ್ದರು. ಮುಂದುವರೆದು ಐಸಿಸಿಯ ಈ ನಿರ್ಧಾರ ಅರ್ಥಹೀನವಾದ್ದದ್ದು ಎಂದಿದ್ದರು. ಇನ್ನು ಪಾಕ್ ಮಾಜಿ ವೇಗಿ ಅಖ್ತರ್, ದ್ವಿಪಕ್ಷೀಯ ಸರಣಿಗಳ ಪ್ರಸಾರದ ಹಕ್ಕನ್ನು ಕಿತ್ತುಕೊಳ್ಳಲು ಐಸಿಸಿ ನಡೆಸುತ್ತಿರುವ ಹುನ್ನಾರ ನಡೆಸುತ್ತಿದೆ ಎಂದು ಗಂಭೀರ್ ಆರೋಪ ಮಾಡಿದ್ದರು. 

Follow Us:
Download App:
  • android
  • ios