4 ದಿನಗಳ ಟೆಸ್ಟ್ ನಡೆಸಲು ಗಂಗೂಲಿ ಬಿಡಲ್ಲ: ಅಖ್ತರ್!
4 ದಿನಗಳ ಟೆಸ್ಟ್ ಆಯೋಜನೆಯ ಬಗ್ಗೆ ಒಲವು ಹೊಂದಿರುವ ಐಸಿಸಿ ವಿರುದ್ಧ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಕಿಡಿಕಾರಿದ್ದಾರೆ. ಅಲ್ಲದೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎದುರು ಹಾಕಿಕೊಂಡು 4 ದಿನಗಳ ಟೆಸ್ಟ್ ಆಯೋಜನೆ ಸುಲಭವಲ್ಲ ಎಂದಿದ್ದಾರೆ. ಈ ಮೂಲಕ ಬಿಸಿಸಿಐ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಕರಾಚಿ(ಜ.07): ಟೆಸ್ಟ್ ಕ್ರಿಕೆಟನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸಲು ಹೊರಟಿರುವ ಐಸಿಸಿ, ಏಷ್ಯಾದ ಕ್ರಿಕೆಟಿಂಗ್ ರಾಷ್ಟ್ರಗಳ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಆರೋಪಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹೆಚ್ಚು ಟೂರ್ನಿಗಳನ್ನು ಆಯೋಜಿಸಿ, ದ್ವಿಪಕ್ಷೀಯ ಸರಣಿಗಳ ಪ್ರಸಾರ ಹಕ್ಕು ಕಿತ್ತುಕೊಳ್ಳಲು ಐಸಿಸಿ ಈ ರೀತಿ ಮಾಡುತ್ತಿದೆ ಎಂದಿರುವ ಅಖ್ತರ್, ‘ಬಿಸಿಸಿಐ ವಿರೋಧ ಕಟ್ಟಿಕೊಂಡು ಐಸಿಸಿ ಮುನ್ನಡೆಯಲು ಸಾಧ್ಯವಿಲ್ಲ. ಅಧ್ಯಕ್ಷ ಗಂಗೂಲಿ ಚಾಣಾಕ್ಷ, 4 ದಿನಗಳ ಟೆಸ್ಟ್ ನಡೆಸಲು ಅವರು ಬಿಡುವುದಿಲ್ಲ’ ಎಂದು ಬಿಸಿಸಿಐಗೆ ಬೆಂಬಲ ನೀಡಿದ್ದಾರೆ.
2023ರಿಂದ 4 ದಿನಗಳ ಟೆಸ್ಟ್ ಕ್ರಿಕೆಟ್?
ಈ ವಿರಾಟ್ ಕೊಹ್ಲಿ ಸಹಾ 4 ದಿನಗಳ ಟೆಸ್ಟ್ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸಾಂಪ್ರದಾಯಿಕ ಕ್ರಿಕೆಟ್ 5 ದಿನಗಳು ನಡೆದರೆ ಉತ್ತಮ. ನಾಲ್ಕು ದಿನಗಳ ಟೆಸ್ಟ್ ಪಂದ್ಯಕ್ಕೆ ತಮ್ಮ ಸಹಮತವಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದರು.
2023ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್’ಶಿಪ್ ವ್ಯಾಪ್ತಿಗೆ ಬರುವ ಟೆಸ್ಟ್ ಪಂದ್ಯಗಳನ್ನು 5 ದಿನಗಳ ಬದಲಿಗೆ ಕಡ್ಡಾಯವಾಗಿ 4 ದಿನಕ್ಕೆ ಇಳಿಸಲು ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿಂದೆಯೇ 2017ರ ಅಕ್ಟೋಬರ್’ನಲ್ಲಿ 4 ದಿನಗಳ ಟೆಸ್ಟ್ ಪಂದ್ಯ ಆಯೋಜನೆಗೆ ಐಸಿಸಿ ತನ್ನ ಒಪ್ಪಿಗೆ ಮುದ್ರೆ ಹಾಕಿದೆ.
4 ದಿನಗಳ ಟೆಸ್ಟ್‌ಗೆ ವಿರಾಟ್ ಕೊಹ್ಲಿ ವಿರೋಧ!
ಅಂದಹಾಗೆ 4 ದಿನಗಳ ಟೆಸ್ಟ್ ಪಂದ್ಯ ಏನು ಹೊಸ ಯೋಜನೆಯಲ್ಲ. 2019ರಲ್ಲಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳು 4 ದಿನಗಳ ಟೆಸ್ಟ್ ಪಂದ್ಯವನ್ನಾಡಿದ್ದವು. ಇನ್ನು 2017ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳು ಸಹಾ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.