ENGvsIND : ಟೀಕೆಗಳಿಗೆ ಸೆಂಚುರಿ ಮೂಲಕ ಉತ್ತರ ಕೊಟ್ಟ ರಿಷಭ್, ಸಾಥ್‌ ನೀಡಿದ ಜಡೇಜಾ!

ಏಕದಿನ ಶೈಲಿಯಲ್ಲಿ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿದ ರಿಷಭ್‌ ಪಂತ್‌, ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಬರ್ಮಿಂಗ್‌ ಹ್ಯಾಮ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ಚೇತರಿಕೆಗೆ ಮಹತ್ತರ ಕಾಣಿಕೆ ನೀಡಿದ್ದಾರೆ. ಇವರಿಗೆ ಉತ್ತಮ ಸಾಥ್‌ ನೀಡಿದ ರವೀಂದ್ರ ಜಡೇಜಾ ಅರ್ಧಶತಕ ಬಾರಿಸಿ ಗಮನಸೆಳೆದರು. ಕಳೆದ ಕೆಲವು ತಿಂಗಳುಗಳಿಂದ ತಮ್ಮ ಮೇಲೆ ಬರುತ್ತಿದ್ದ ಟೀಕೆಗಳಿಗೆ ಅದ್ಭುತ ಶತಕ ಬಾರಿಸುವ ಮೂಲಕ ರಿಷಭ್‌ ಪಂತ್‌ ಉತ್ತರ ನೀಡಿದ್ದಾರೆ.

Cricket England vs India Birmingham Rishabh Pant scored a Test century in the style of ODI Ravindra Jadeja Hits Fifty san

ಬರ್ಮಿಂಗ್‌ ಹ್ಯಾಮ್‌ (ಜುಲೈ 1): ಕಳೆದ ಕೆಲವು ತಿಂಗಳುಗಳಿಂದ ತಮ್ಮ ಮೇಲೆ ಬರುತ್ತಿದ್ದ ಸಾಲು ಸಾಲು ಟೀಕೆಗಳಿಗೆ ದಿಟ್ಟ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ ರಿಷಭ್‌ ಪಂತ್ (146 ರನ್‌, 111 ಎಸೆತ, 20 ಬೌಂಡರಿ, 6 ಸಿಕ್ಸರ್), ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಮರುನಿಗದಿಯಾದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ. ಇವರಿಗೆ ಉತ್ತಮ ಸಾಥ್‌ ನೀಡಿದ ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕ ಸಿಡಿಸಿದರು.

ಎಜ್‌ ಬಾಸ್ಟನ್‌ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ನಾಯಕ ಜಸ್‌ಪ್ರೀತ್‌ ಬುಮ್ರಾ ತಮ್ಮ ಮೊದಲ ಟೆಸ್ಟ್‌ನಲ್ಲಿಯೇ ಟಾಸ್‌ ಸೋಲು ಕಂಡರು. ಮೊದಲು ಬ್ಯಾಟಿಂಗ್ ಆರಂಭಿಸಿದ ತಂಡ ಒಂದು ಹಂತದಲ್ಲಿ 98 ರನ್‌ಗೆ ಪ್ರಮುಖ 5 ವಿಕೆಟ್‌ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಈ ಹಂತದಲ್ಲಿ ಜೊತೆಯಾದ ರಿಷಭ್‌ ಪಂತ್‌ ಹಾಗೂ ರವೀಂದ್ರ ಜಡೇಜಾ ದಾಖಲೆಯ ಜೊತೆಯಾಟವಾಡುವ ಮೂಲಕ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 73 ಓವರ್‌ ಗಳಲ್ಲಿ 7 ವಿಕೆಟ್‌ಗೆ 338 ರನ್‌ ಪೇರಿಸಿತು. 83 ರನ್‌ ಬಾರಿಸಿರುವ ರವೀಂದ್ರ ಜಡೇಜಾ ಹಾಗೂ 11 ಎಸೆತ ಎದುರಿಸಿರುವ ಮೊಹಮದ್‌ ಶಮಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

6ನೇ ವಿಕೆಟ್‌ಗೆ ದಾಖಲೆಯ 222 ರನ್‌ಗಳ ದಾಖಲೆಯ ಜೊತೆಯಾಟವನ್ನು ರಿಷಭ್ ಪಂತ್‌ ಹಾಗೂ ರವೀಂದ್ರ ಜಡೇಜಾ ಆಡಿದರು. ಇದು ವಿದೇಶದ ನೆಲದಲ್ಲಿ 6ನೇ ವಿಕೆಟ್‌ಗೆ ಭಾರತದ ಜಂಟಿ ಗರಿಷ್ಠ ರನ್‌ ಜೊತೆಯಾಟವಾಗಿದೆ. ಇದಕ್ಕೂ ಮುನ್ನ 1997 ರಲ್ಲಿ ಸಚಿನ್‌ ತೆಂಡುಲ್ಕರ್‌ ಹಾಗೂ ಮೊಹಮದ್‌ ಅಜರುದ್ದೀನ್‌ 6ನೇ ವಿಕೆಟ್‌ಗೆ ಇಷ್ಟೇ ರನ್‌ಗಳ ಮೊತ್ತದ ಜೊತೆಯಾಟವಾಡಿದ್ದರು. ಅದಲ್ಲದೆ, ಇಂಗ್ಲೆಂಡ್‌ ನೆಲದಲ್ಲಿ 6ನೇ ವಿಕೆಟ್‌ಗೆ ಭಾರತದ ಗರಿಷ್ಠ ರನ್‌ ಜೊತೆಯಾಟ ಎನಿಸಿದೆ. ಇದಕ್ಕೂ ಮುನ್ನ 2018ರಲ್ಲಿ ಕೆಎಲ್‌ ರಾಹುಲ್‌ ಹಾಗೂ ರಿಷಭ್‌ ಪಂತ್‌ ಓವಲ್‌ ಟೆಸ್ಟ್‌ ಪಂದ್ಯದಲ್ಲಿ 204 ರನ್‌ಗಳ ಜೊತೆಯಾಟವಾಡಿದ್ದರು. ಎದುರಿಸಿದ ಮೊದಲ ಎಸೆತಗಳಿಂದಲೂ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದ ರಿಷಭ್ ಪಂತ್‌, ಇಂಗ್ಲೆಂಡ್‌ನ ಅಗ್ರ ಬೌಲರ್‌ಗಳೆಲ್ಲರನ್ನೂ ದಯನೀಯವಾಗಿ ದಂಡಿಸಿದರು. ಅದರಲ್ಲೂ ಅನುಭವಿ ಅಂಡರ್‌ಸನ್‌ ಎಸೆತಗಳಲ್ಲಿ ಸಲೀಸಾಗಿ ಬೌಂಡರಿ ಬಾರಿಸುತ್ತಿದ್ದದ್ದು ಸ್ವತಃ ಇಂಗ್ಲೆಂಡ್‌ ವೇಗಿಗೆ ಅಚ್ಚರಿ ಉಂಟು ಮಾಡಿತ್ತು.

ಇದಕ್ಕೂ ಮುನ್ನ ಶುಭ್‌ಮಾನ್‌ ಗಿಲ್‌ ಜೊತೆ ಆರಂಭಿಕರಾಗಿ ಚೇತೇಶ್ವರ ಪೂಜಾರ ಕಣಕ್ಕಿಳಿದರು. ಆದರೆ, ಈ ಜೊತೆಯಾಟ ಹೆಚ್ಚು ಹೊತ್ತು ನಿಲ್ಲಲಿಲ್ಲ. 24 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 17 ರನ್ ಬಾರಿಸಿದ್ದ ಗಿಲ್, ಆಂಡರ್‌ಸನ್‌ಗೆ ವಿಕೆಟ್ ನೀಡಿದರು. ಬಳಿಕ ಚೇತೇಶ್ವರ ಪೂಜಾರ ಕೆಲ ಹೊತ್ತು ಆಟವಾಡಿದರು ತಂಡದ ಮೊತ್ತ 50ರ ಗಡಿ ದಾಟುವ ಮುನ್ನವೇ ನಿರ್ಗಮಿಸಿದರು. ಆ ನಂತರ ಜೊತೆಯಾದ ಹನುಮ ವಿಹಾರಿ ಹಾಗೂ ವಿರಾಟ್‌ ಕೊಹ್ಲಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರೂ ಈ ಹಂತದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು.

ಮರದ ಕೆಳಗೆ ಕೂರುವ 'ವೈದ್ಯ'ನ ಬಳಿ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಎಂಎಸ್ ಧೋನಿ!

ಸುಮಾರು ಒಂದೂವರೆ ಗಂಟೆಗಳ ಕಾಲ ಮಳೆಯ ವಿಳಂಬದ ನಂತರ ಪಂದ್ಯ ಆರಂಭವಾದಾಗ ಮ್ಯಾಟಿ ಪಾಟ್ಸ್, ಹನುಮ ವಿಹಾರಿ ಅವರನ್ನು ಬಲೆಗೆ ಬೀಳಿಸುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ಈ ಮೊತ್ತಕ್ಕೆ 7 ರನ್‌ ಸೇರಿಸುವ ವೇಳೆಗೆ ನಾಯಕ ವಿರಾಟ್‌ ಕೊಹ್ಲಿ ಕೂಡ ಮ್ಯಾಟಿ ಪಾಟ್ಸ್‌ಗೆ ಎಲ್‌ಬಿ ಆದರು. 19 ಎಸೆತ ಎದುರಿಸಿದ ವಿರಾಟ್‌ ಕೊಹ್ಲಿ 2 ಬೌಂಡರಿಗಳೊಂದಿಗೆ 11 ರನ್ ಬಾರಿಸಿದರು. ಆ ಬಳಿಕ ಕ್ರಿಸ್‌ಗೆ ಇಳಿದ ಶ್ರೇಯಸ್ ಅಯ್ಯರ್ ಅವರು ತಮ್ಮ ಪ್ರಾರಂಭದಲ್ಲಿ ಆಕ್ರಮಣಕಾರಿಯಾಗಿದ್ದರು, ಮ್ಯಾಟಿ ಪಾಟ್ಸ್‌ ಎಸೆತದಲ್ಲಿ ಎರಡು ಬೌಂಡರಿಗಳನ್ನು ಸ್ಲ್ಯಾಶ್‌ ಮಾಡುವ ಮೂಲಕ ಸಿಡಿಸಿದರು. ಆದರೆ, ಆಂಡರ್‌ಸನ್‌ ಅವರ ಶಾರ್ಟ್‌ ಬಾಲ್‌ ಎಸೆತಗಳು ಅವರನ್ನು ಕಾಡಿದರು. 11 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 15 ರನ್‌ ಬಾರಿಸಿದ ಶ್ರೇಯಸ್‌ ಅಯ್ಯರ್‌, ಜೇಮ್ಸ್ ಆಂಡರ್‌ ಸನ್‌ ಎಸೆತದಲ್ಲಿ ಔಟಾದಾಗ ಭಾರತ 98 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು.

Diamond League; ಈಟಿ ಎಸೆತದಲ್ಲಿ ಬೆಳ್ಳಿ ಗೆದ್ದು, ತನ್ನದೇ ದಾಖಲೆ ಮುರಿದ ನೀರಜ್ ಚೋಪ್ರಾ

2 ಶತಕ ಬಾರಿಸಿದ ನಾಲ್ಕನೇ ಆಟಗಾರ: ಕ್ಯಾಲೆಂಡರ್‌ ವರ್ಷವೊಂದರಲ್ಲಿ ಎರಡು ಶತಕ ಬಾರಿಸಿದ ಕೇವಲ 4ನೇ ಭಾರತೀಯ ವಿಕೆಟ್‌ ಕೀಪರ್‌ ರಿಷಭ್‌ ಪಂತ್. ಇದಕ್ಕೂ ಮುನ್ನ 1964ರಲ್ಲಿ ಬುಧಿ ಕುಂದರನ್, 2009ರಲ್ಲಿ ಎಂಎಸ್ ಧೋನಿ ಹಾಗೂ 2017ರಲ್ಲಿ ವೃದ್ಧಿಮಾನ್‌ ಸಾಹ ಈ ಸಾಧನೆ ಮಾಡಿದ್ದರು.

Latest Videos
Follow Us:
Download App:
  • android
  • ios