ಸಿಡ್ನಿ(ಜ.27): ಫೆಬ್ರವರಿ ತಿಂಗಳಿನಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ 19 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ಟೆಸ್ಟ್ ತಂಡ ಪ್ರಕಟವಾಗಿದ್ದು, ಟಿಮ್‌ ಪೈನ್‌ ನಾಯಕತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಗೆ ಇನ್ನೂ ವೇಳಾಪಟ್ಟಿಯೇ ನಿಗದಿಯಾಗಿಲ್ಲ. ಹೀಗಿರುವಾಗಲೇ ಈ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಈ ಪೈಕಿ 5 ಹೊಸ ಆಟಗಾರರಿಗೆ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಮಣೆಹಾಕಿದೆ. ಇನ್ನು ತವರಿನಲ್ಲೇ ಟೀಂ ಇಂಡಿಯಾ ಎದುರು ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್‌ ಪೈನ್ ತಲೆದಂಡವಾಗಲಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ಆಯ್ಕೆ ಸಮಿತಿ ಟಿಮ್‌ ಪೈನ್‌ಗೆ ಮತ್ತೊಂದು ಅವಕಾಶ ಕಲ್ಪಿಸಿದೆ.

ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 3 ಸ್ಪಿನ್ನರ್ಸ್ ಕಣಕ್ಕೆ?

ಇನ್ನುಳಿದಂತೆ ಭಾರತ ವಿರುದ್ದ ನೀರಸ ಬ್ಯಾಟಿಂಗ್‌ ಪ್ರದರ್ಶನ ತೋರಿದ ಮ್ಯಾಥ್ಯೂ ವೇಡ್‌ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಬದಲಿಗೆ ಟ್ರಾವಿಸ್‌ ಹೆಡ್‌ ತಂಡ ಕೂಡಿಕೊಂಡಿದ್ದಾರೆ. ಅಲೆಕ್ಸ್ ಕ್ಯಾರಿ, ಶಾನ್ ಅಬ್ಬೋಟ್‌, ಮಿಚೆಲ್‌ ನೇಸರ್, ಮಿಚೆಲ್ ಸ್ವಾಪ್ಸೆನ್‌, ಮಾರ್ಕ್‌ ಸ್ಟೆಕೇಟಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. 

ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:
ಟಿಮ್‌ ಪೈನ್‌(ನಾಯಕ), ಡೇವಿಡ್‌ ವಾರ್ನರ್‌, ಶಾನ್ ಅಬ್ಬೋಟ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಕ್ಯಾಮರೋನ್ ಗ್ರೀನ್‌, ಮಾರ್ಕಸ್‌ ಹ್ಯಾರಿಸ್‌, ಜೋಸ್ ಹೇಜಲ್‌ವುಡ್, ಟ್ರಾವಿಸ್ ಹೆಡ್‌, ಮೊಯೀಸ್‌ ಹೆನ್ರಕೇಸ್, ಮಾರ್ನಸ್ ಲಬುಶೇನ್, ನೇಥನ್ ಲಯನ್‌, ಮಿಚೆಲ್‌ ನೇಸರ್, ಜೇಮ್ಸ್ ಪ್ಯಾಟಿನ್‌ಸನ್‌, ವಿಲ್‌ ಫುಕೊವ್ಸ್ಕಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕ್‌ ಸ್ಟೆಕೇಟಿ, ಮಿಚೆಲ್‌ ಸ್ವ್ಯಾಪ್ಸನ್.