ಕ್ರಿಕೆಟ್ ದಿಗ್ಗಜ ಶೇನ್‌ ವಾರ್ನ್‌ ಜೀವ ತೆಗಿಯಿತಾ ಕೋವಿಡ್ ಲಸಿಕೆ..?

ಶೇನ್ ವಾರ್ನ್ ಸಾವಿನ ಜತೆ ಥಳುಕು ಹಾಕಿಕೊಂಡ ಕೋವಿಡ್ ಲಸಿಕೆ
ಹೊಸ ಸಂಶೋಧನೆಯೊಂದರಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ
ಶೇನ್ ವಾರ್ನ್‌, ಮಾರ್ಚ್‌ 04, 2022ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು

COVID Vaccine Link to Cricket Legend Shane Warne Sudden Death Says report kvn

ಲಂಡನ್(ಜೂ.22): ಒಂದು ವರ್ಷದ ಹಿಂದೆ ಕ್ರಿಕೆಟ್ ದಂತಕಥೆ ಶೇನ್‌ ವಾರ್ನ್‌, ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇದು ಇಡೀ ಕ್ರಿಕೆಟ್‌ ಜಗತ್ತೇ ಒಂದು ಕ್ಷಣ ಬೆಚ್ಚಿಬೀಳುವಂತೆ ಮಾಡಿತ್ತು. ಶೇನ್‌ ವಾರ್ನ್‌ ಅಕಾಲಿಕ ನಿಧನದ ಕುರಿತಂತೆ ಹಲವು ಊಹಾಪೋಹಗಳು ಹರಿದಾಡಿದ್ದವು. ಇದೀಗ ಭಾರತೀಯ ಮೂಲದ ಇಂಗ್ಲೆಂಡ್‌ ಪ್ರಖ್ಯಾತ ಹೃದ್ರೋಗ ತಜ್ಞರೊಬ್ಬರು ಶೇನ್ ವಾರ್ನ್‌ ದಿಢೀರ್ ನಿಧನದ ಹಿಂದೆ ಕೋವಿಡ್ ಲಸಿಕೆಯ ಪಾತ್ರವಿರುವ ಸಾಧ್ಯತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಲೆಗ್‌ ಸ್ಪಿನ್ ಮಾಂತ್ರಿಕ ಶೇನ್‌ ವಾರ್ನ್‌ ಕೊನೆಯುಸಿರೆಳೆಯುವ 9 ತಿಂಗಳ ಮುಂಚೆ COVID mRNA ಎನ್ನುವ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದರು. ಶೇನ್ ವಾರ್ನ್‌, Pfizer mRNA ಹೆಸರಿನ ಎರಡು ಡೋಸ್ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿದ್ದರು
 
ಈ ಕುರಿತಂತೆ ಮಾತನಾಡಿರುವ ಹೃದ್ರೋಗ ತಜ್ಞ ಡಾ. ಅಸೀಮ್ ಮಲ್ಹೋತ್ರಾ ಹಾಗೂ ಆಸ್ಟ್ರೇಲಿಯಾ ವೈದ್ಯಕೀಯ ವೃತ್ತಿಪರ ಸಂಘಟನೆ ಅಧ್ಯಕ್ಷ  ಡಾ. ಕ್ರಿಸ್ ನೇಲ್‌ ನೇತೃತ್ವದ ವರದಿಯ ಪ್ರಕಾರ, "52 ವರ್ಷದ ಶೇನ್‌ ವಾರ್ನ್‌, ಲಸಿಕೆಯು ಪರಿಧಮನಿಯ ಸಮಸ್ಯೆಯನ್ನು ಕ್ಷೀಪ್ರ ಗತಿಯಲ್ಲಿ ಹೆಚ್ಚಿಸುವ ಸಾಧ್ಯತೆಯಿಂದ ಅಥವಾ ಹೃದಯ ಸಮಸ್ಯೆಯಿಂದ ಕೊನೆಯುಸಿರೆಳೆದಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಏಷ್ಯಾಕಪ್ ಹಗ್ಗಾಜಗ್ಗಾಟ; ಟೂರ್ನಿ ಪಾಕ್‌ನಲ್ಲೇ ನಡೀಬೇಕೆಂದು ಹೊಸ ರಾಗ ತೆಗೆದ ಪಾಕಿಸ್ತಾನ..!

ಹಲವು ಹೃದ್ರೋಗ ತಜ್ಞರನ್ನೊಳಗೊಂಡ ತಂಡವು ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ  ನಡೆಸಿದ ಸಂಶೋಧನೆಯ ಪ್ರಕಾರ, Pfizer mRNA ಹೆಸರಿನ ಕೋವಿಡ್‌ ಲಸಿಕೆಯು ಪರಿಧಮನಿಯ ಸಮಸ್ಯೆಯನ್ನು ಕ್ಷೀಪ್ರ ಗತಿಯಲ್ಲಿ ಹೆಚ್ಚಿಸುವ ಸಾಧ್ಯತೆಯಿದೆ. ಅದರಲ್ಲೂ ಈಗಾಗಲೇ ಹೃದಯ ಸಂಬಂಧಿ ಕಾಯಿಲೆಯಿರುವವರಲ್ಲಿ ಇದು ಇನ್ನಷ್ಟು ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.

 ಶೇನ್‌ ವಾರ್ನ್‌ ಅವರು ಓರ್ವ ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿದ್ದು, ಕೇವಲ 52 ವರ್ಷ ವಯಸ್ಸಿಗೆ ಹೃದಯಸ್ತಂಬನದಿಂದ ಕೊನೆಯುಸಿರೆಳೆದಿದ್ದು, ಅಸಾಧಾರಣವಾದ ಘಟನೆಯಾಗಿದೆ ಎಂದು ಡಾ. ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ.

Ashes 2023 ನಾವು ಮತ್ತಷ್ಟು ಆಕ್ರಮಣಕಾರಿ ಆಟ ಆಡ್ತೇವೆ; ಕಾಂಗರೂ ಪಡೆಗೆ ಮೆಕ್ಕಲಂ ಎಚ್ಚರಿಕೆ

ಇನ್ನು ಇದೇ ವೇಳೆ ಶೇನ್‌ ವಾರ್ನ್‌ ಇತ್ತೀಚೆಗಿನ ವರ್ಷಗಳಲ್ಲಿ ಒಳ್ಳೆಯ ಆರೋಗ್ಯಶೈಲಿಯನ್ನು ಅಳವಡಿಸಿಕೊಂಡಿರಲಿಲ್ಲ ಎನ್ನುವ ವಿಚಾರವನ್ನು ಸಂಶೋದಕರು ಒಪ್ಪಿಕೊಂಡಿದ್ದಾರೆ. ಹೆಚ್ಚು ತೂಕದ ದೇಹ ಹಾಗೂ ಧೂಮಪಾನ ಮಾಡುತ್ತಿದ್ದರು. ಇದು ಹೃದಯದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯಿದೆ. ನನ್ನ ತಂದೆ ಹೇಗೆ ಕೊನೆಯುಸಿರೆಳೆದರು ಎನ್ನುವುದನ್ನು ನಾನು ನೋಡಿದ್ದೇನೆ. ಅವರು ಎರಡು ಡೋಸ್ Pfizer mRNA ಕೋವಿಡ್ ಲಸಿಕೆ ಪಡೆದು ತಿಂಗಳಾಗುವಷ್ಟರಲ್ಲೇ ಕೊನೆಯುಸಿರೆಳೆದರು ಎಂದು ಡಾ. ಮಲ್ಹೋತ್ರಾ ಹೇಳಿದ್ದಾರೆ.

ಸ್ಪಿನ್ ಮಾಂತ್ರಿಕ ಶೇನ್ ವಾರ್ನ್‌ ಕಳೆದ ವರ್ಷದ ಮಾರ್ಚ್‌ 05ರಂದು ಥಾಯ್ಲೆಂಡ್‌ನಲ್ಲಿರುವ ಕೋಹ್‌ ಸಾಮಯಿ ದ್ವೀಪದಲ್ಲಿರುವ ವಿಲ್ಲಾದಲ್ಲಿ ದಿಢೀರ್ ಎನ್ನುವಂತೆ ಕೊನೆಯುಸಿರೆಳೆದಿದ್ದರು. ವಾರ್ನ್ ಅವರ ನಿಧನ ಕ್ರಿಕೆಟ್ ಜಗತ್ತಿಗೆ ದೊಡ್ಡ ಶಾಕ್ ನೀಡಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ(708) ಹಾಗೂ ಒಟ್ಟಾರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಶೇನ್‌ ವಾರ್ನ್ 2013ರಲ್ಲಿ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿ ವಾರ್ನ್‌ ಗುರುತಿಸಿಕೊಂಡಿದ್ದರು.

Latest Videos
Follow Us:
Download App:
  • android
  • ios