ಮುಂಬೈ(ಏ.21): ಲಾಕ್‌ಡೌನ್‌ನಿಂದಾಗಿ ಸ್ವಯಂ ದಿಗ್ಬಂಧನದಲ್ಲಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌, ತಮ್ಮ ಹೇರ್‌ಕಟ್‌ ತಾವೇ ಮಾಡಿಕೊಂಡಿದ್ದು, ಅದರ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಫೋಟೋಗಳು ವೈರಲ್‌ ಆಗಿವೆ.

ಸ್ಕ್ವೇರ್  ಕಟ್ ಬಾರಿಸುವುದರಿಂದ ಹಿಡಿದು ತನ್ನದೇ ತಲೆಕೂದಲು ಕಟಿಂಗ್ ಮಾಡುವವರೆಗೆ. ಬೇರೆ ಬೇರೆ ಕೆಲಸಗಳನ್ನು ಮಾಡುವಾಗ ನಾನು ಯವಾಗಲೂ ಎಂಜಾಯ್ ಮಾಡುತ್ತೇನೆ. ಹೇಗಿದೆ ನೋಡಿ ನನ್ನ ಹೊಸ ಹೇರ್ ಸ್ಟೈಲ್ ಎಂದು ಖ್ಯಾತ ಕೇಶ ವಿನ್ಯಾಸಕಾರರಾದ ಆಲೀಮ್ ಹಕೀ ಹಾಗೂ ನಂದನ್ .ವಿ. ನಾಯ್ಕ್ ಅವರನ್ನು ಸಚಿನ್ ತೆಂಡುಲ್ಕರ್ ಪ್ರಶ್ನಿಸಿದ್ದಾರೆ.

50 ಲಕ್ಷ ರೂ ದೇಣಿಗೆ ಬಳಿಕ 5 ಸಾವಿರ ಕುಟುಂಬಕ್ಕೆ ತಿಂಗಳ ರೇಶನ್ ನೀಡಿದ ತೆಂಡುಲ್ಕರ್!

ಇಡೀ ಜಗತ್ತನ್ನೇ ತಬ್ಬಿಬ್ಬುಗೊಳಿಸಿರುವ ಕೊರೋನಾ ವೈರಸ್, ಭಾರತದ ಮೇಲೂ ತನ್ನ ವಕ್ರದೃಷ್ಠಿ ಬೀರಿದೆ. ಪರಿಣಾಮದಲ್ಲಿ ಭಾರತದಲ್ಲಿ 17 ಸಾವಿರಕ್ಕೂ ಅಧಿಕ ಮಂದಿ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದು, 540ಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದಾರೆ. ತೆಂಡುಲ್ಕರ್ ಪ್ರಧಾನ ಮಂತ್ರಿ ಫಂಡ್(PM CARES Fund) ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 25 ಲಕ್ಷ ರುಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಇದಷ್ಟೇ ಅಲ್ಲದೇ 46 ವರ್ಷದ ಮುಂಬೈಕರ್ ಸರ್ಕಾರೇತರ ಸಂಘಸಂಸ್ಥೆ(NGO)ಮೂಲಕ ಮುಂಬೈನಲ್ಲಿರುವ 5 ಸಾವಿರ ಬಡ ಕುಟುಂಬಗಳಿಗೆ ಆಹಾರ ಹಾಗೂ ಪಡಿತರವನ್ನು ವಿತರಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.