ಐಫೋನ್ ಗಿಫ್ಟ್ ಬಚ್ಚಿಟ್ಟ ಆರೋಪ, ಕ್ರಿಕೆಟಿಗನಿಗೆ 2 ವರ್ಷ ನಿಷೇಧ ಹೇರಿದ ಐಸಿಸಿ!
2020-21ರ ಅಬುಧಾವಿ ಟಿ10 ಲೀಗ್‌ನಲ್ಲಿ ಪುಣೆ ಡೆವಿಲ್ಸ್ ಫ್ರಾಂಚೈಸಿ ಪರವಾಗಿ ಆಡಿದ್ದ ಬಾಂಗ್ಲಾದೇಶದ ಕ್ರಿಕೆಟಿಗ ನಾಸಿರ್ ಹೊಸೈನ್ ಸೇರಿದಂತೆ 8 ಮಂದಿಯ ಮೇಲೆ ಐಸಿಸಿ ಭ್ರಷ್ಟಾಚಾರ ಆರೋಪ ಹೊರಿಸಿತ್ತು.
ನವದೆಹಲಿ (ಜ.17): ಬಾಂಗ್ಲಾದೇಶದ ಆಲ್ರೌಂಡರ್ ನಾಸಿರ್ ಹೊಸೈನ್‌ಗೆ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿಷೇಧ ಹೇರಿದೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಮೂರು ಆರೋಪಗಳನ್ನು ಅವರು ಒಪ್ಪಿಕೊಂಡಿರುವ ಏಕೈಕ ಕಾರಣಕ್ಕೆ ಆರು ತಿಂಗಳ ನಿಷೇಧ ಶಿಕ್ಷೆಯನ್ನು ಅಮಾನತು ಮಾಡಲಾಗಿದೆ. ಸೆಪ್ಟೆಂಬರ್ 2023 ರಲ್ಲಿ ಐಸಿಸಿಯಿಂದ ಆರೋಪ ಹೊರಿಸಲ್ಪಟ್ಟ ಹೊಸೈನ್, ತನ್ನ ಮೇಲಿನ ಮೂರೂ ಆರೋಪಗಳನ್ನು ಒಪ್ಪಿಕೊಂಡಿದ್ದರು. ಇದರ ಪ್ರಕಾರ, ಐಸಿಸಿಯ ಭಷ್ಟಾಚಾರ ವಿರೋಧಿ ಅಧಿಕಾರಿಗೆ ತಾವು ಪಡೆದುಕೊಂಡಿರುವ ಉಡುಗೊರೆಯ ಮೌಲ್ಯದ ರಶೀದಿಯನ್ನು ಬಹಿರಂಗಪಡಿಸಲು ವಿಫಲವಾಗಿದ್ದಾರೆ. 750 ಯುಎಸ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಐಫೋನ್ 12ಅನ್ನು ಅವರು ಗಿಫ್ಟ್ ಆಗಿ ಪಡೆದುಕೊಂಡಿದ್ದರು. ಇದರ ಮೂಲವನ್ನು ತಿಳಿಸಲು ಅವರು ವಿಫಲವಾಗಿದ್ದು ಮೊದಲ ಉಲ್ಲಂಘನೆ ಎಂದು ಐಸಿಸಿ ತಿಳಿಸಿದೆ.
ಹೊಸ ಐಫೋನ್ 12 ಮೂಲಕ ಭ್ರಷ್ಟಾಚಾರದ ನಡವಳಿಕೆಯಲ್ಲಿ ತೊಡಗಿಸಿಕೊಳ್ಳಲು ಅವರು ಸ್ವೀಕರಿಸಿದ ವಿಧಾನ ಅಥವಾ ಬುಕ್ಕಿ ಆಹ್ವಾನದ ಬಗ್ಗೆ ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳು ಸಂಪೂರ್ಣ ವಿವರ ಬಹಿರಂಗಪಡಿಸಲು ವಿಫಲರಾಗಿದ್ದಾರೆ ಇದು 2ನೇ ಉಲ್ಲಂಘನೆ ಎಂದು ಐಸಿಸಿ ತಿಳಿಸಿದೆ.
ತಾವು ಮಾಡಿರುವ ಭ್ರಷ್ಟಚಾರಕ್ಕೆ ಸಂಬಂಧಪಟ್ಟಂತೆ ಅವರು ತನಿಖೆಗೆ ಸಹಕರಿಸಲು ಅವರು ಒಪ್ಪಿಕೊಂಡಿಲ್ಲ ಇದು ಅವರ ಮೂರನೇ ಉಲ್ಲಂಘನೆ ಎಂದು ಐಸಿಸಿ ಹೇಳಿದ್ದು ಈ ಕಾರಣಕ್ಕಾಗಿ ಅವರಿಗೆ ನಿಷೇಧ ಹೇರಲಾಗುತ್ತಿದೆ ಎಂದು ತಿಳಿಸಿದೆ. 32 ವರ್ಷದ ಆಲ್ರೌಂಡರ್ ತಮ್ಮ ಮೇಲೆ ಹೊರಿಸಿದ ಎಲ್ಲಾ ಆರೋಪಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಆರು ತಿಂಗಳ ಶಿಕ್ಷೆ ಅಮಾನತಾಗಿರುವ ಕಾರಣ 2025ರ ಏಪ್ರಿಲ್ 7 ರಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಸಾಧ್ಯವಾಗಲಿದೆ ಎಂದು ಐಸಿಸಿ ತಿಳಿಸಿದೆ.
ಮದ್ವೆನೂ ಕಷ್ಟ ಡಿವೋರ್ಸ್ ಆದ್ರೂ ಕಷ್ಟ ಎಂದ ಸಾನಿಯಾ ಮಿರ್ಜಾ: ಟೆನ್ನಿಸ್ ತಾರೆಗೇನಾಯ್ತು?
ಅಬುಧಾಬಿ T10 ರ 2020-21 ಆವೃತ್ತಿಯಲ್ಲಿ ಭ್ರಷ್ಟಾಚಾರದ ಆರೋಪ ಹೊರಿಸಲಾದ ಪುಣೆ ಡೆವಿಲ್ಸ್ ಫ್ರಾಂಚೈಸಿಗೆ ಸಂಬಂಧಿಸಿದ ಎಂಟು ಜನರಲ್ಲಿ ಹೊಸೈನ್ ಸೇರಿದ್ದಾರೆ. ಹೊಸೈನ್ ಬಾಂಗ್ಲಾದೇಶವನ್ನು 19 ಟೆಸ್ಟ್, 65 ODI ಮತ್ತು 31 T20 ಗಳಲ್ಲಿ ಪ್ರತಿನಿಧಿಸಿದ್ದಾರೆ. ಅವರು ಕೊನೆಯ ಬಾರಿಗೆ 2018 ರಲ್ಲಿ ದೇಶಕ್ಕಾಗಿ ಆಡಿದ್ದರು.
ಕೊಹ್ಲಿ-ರೋಹಿತ್‌ಗಿಂದು ಮಹತ್ವದ ಪಂದ್ಯ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಹ್ಲಿಗೆ ಭಾರತ ಪರ ಲಾಸ್ಟ್ ಟಿ20 ಮ್ಯಾಚ್..!