Asianet Suvarna News Asianet Suvarna News

ಕೊಹ್ಲಿ-ರೋಹಿತ್‌ಗಿಂದು ಮಹತ್ವದ ಪಂದ್ಯ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊಹ್ಲಿಗೆ ಭಾರತ ಪರ ಲಾಸ್ಟ್ ಟಿ20 ಮ್ಯಾಚ್​..!

ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಇಂದು ಕೊನೆ ಟಿ20 ಪಂದ್ಯವಾಡ್ತಿದೆ. ಈ ಮ್ಯಾಚ್​ ಯಾರಿಗೆ ಇಂಪಾರ್ಟೆಂಟೋ ಗೊತ್ತಿಲ್ಲ ಕಂಡ್ರಿ. ಆದ್ರೆ ರೋ-ಕೊ ಜೋಡಿಗೆ ಮಾತ್ರ ಮಹತ್ವದ ಪಂದ್ಯ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 14 ತಿಂಗಳ ನಂತರ ಭಾರತ ಪರ ಟಿ20 ಕ್ರಿಕೆಟ್ ಆಡ್ತಿದ್ದಾರೆ.

India vs Afghanistan 3rd T20I in Bengaluru all fan eyes on Virat Kohli and Rohit Sharma kvn
Author
First Published Jan 17, 2024, 6:14 PM IST

ಬೆಂಗಳೂರು(ಜ.17): ಇಂದು ಬೆಂಗಳೂರಿನಲ್ಲಿ ನಡೆಯೋ ಟಿ20 ಪಂದ್ಯ ಇಬ್ಬರು ಆಟಗಾರರಿಗೆ ಮಹತ್ವ ಪಡೆದಿದೆ. ಈ ಇಬ್ಬರು ಇಂದು ರನ್ ಗಳಿಸೋ ಒತ್ತಡದಲ್ಲಿ ಮಾತ್ರವಿಲ್ಲ. ತಮ್ಮ ಅಭಿಮಾನಿಗಳನ್ನ ರಂಜಿಸಬೇಕಿದೆ. ಭಾರತದಲ್ಲಿ  ಇಬ್ಬರಿಗೂ ಕೊನೆ ಟಿ20 ಮ್ಯಾಚ್​. ಅವರೇ ನಾಯಕ ಮತ್ತು ಮಾಜಿ ನಾಯಕ.

ರೋ-ಕೊ ಜೋಡಿಗೆ ಇಂದು ಮಹತ್ವದ ಪಂದ್ಯ..!

ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಇಂದು ಕೊನೆ ಟಿ20 ಪಂದ್ಯವಾಡ್ತಿದೆ. ಈ ಮ್ಯಾಚ್​ ಯಾರಿಗೆ ಇಂಪಾರ್ಟೆಂಟೋ ಗೊತ್ತಿಲ್ಲ ಕಂಡ್ರಿ. ಆದ್ರೆ ರೋ-ಕೊ ಜೋಡಿಗೆ ಮಾತ್ರ ಮಹತ್ವದ ಪಂದ್ಯ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 14 ತಿಂಗಳ ನಂತರ ಭಾರತ ಪರ ಟಿ20 ಕ್ರಿಕೆಟ್ ಆಡ್ತಿದ್ದಾರೆ. ಈ ಸೀನಿಯರ್ ಪ್ಲೇಯರ್​​​ಗಳಿಬ್ಬರು ಟಿ20 ವರ್ಲ್ಡ್‌ಕಪ್ ಆಡೋದು ಪಕ್ಕಾ. ಅದಕ್ಕೂ ಮುನ್ನ ಅವರಿಗೆ ಬೆಂಗಳೂರು ಪಂದ್ಯ ವೆರಿ ವೆರಿ ಇಂಪಾರ್ಟೆಂಟ್.

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಕೀಪರ್ ಫಿಕ್ಸ್ ಆಗಿಲ್ವಾ..?

ಬೆಂಗಳೂರಿನಲ್ಲಿ ವಿರಾಟ್‌ಗೆ ಕೊನೆ ಅಂತಾರಾಷ್ಟ್ರೀಯ ಟಿ20 ಪಂದ್ಯ 

ಹೌದು, ವಿರಾಟ್ ಕೊಹ್ಲಿಗೆ ಇಂದು ಬೆಂಗಳೂರಿನಲ್ಲಿ ಕೊನೆ ಟಿ20 ಪಂದ್ಯ. ಹಾಗಂತ IPL ಆಡಲ್ಲ ಅಂತಲ್ಲ. ಭಾರತ ಪರ ಆಡೋ ಕೊನೆ ಟಿ20 ಮ್ಯಾಚ್. ಜೂನ್‌ನಲ್ಲಿ ವೆಸ್ಟ್​ ಇಂಡೀಸ್​-ಅಮೇರಿಕಾದಲ್ಲಿ ನಡೆಯೋ ಟಿ20 ವರ್ಲ್ಡ್‌ಕಪ್ ಬಳಿಕ ಕಿಂಗ್ ಕೊಹ್ಲಿ, ಟಿ20 ಫಾರ್ಮ್ಯಾಟ್‌ಗೆ ಗುಡ್ ಬೈ ಹೇಳಲಿದ್ದಾರೆ. ಹಾಗಾಗಿ ಇಂದು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ. ಭಾರತದಲ್ಲೇ ವಿರಾಟ್‌ಗೆ ಕೊನೆ ಅಂತಾರಾಷ್ಟ್ರೀಯ ಟಿ20 ಮ್ಯಾಚ್ ಆಗಲಿದೆ.

IPL ಆರಂಭವಾದಾಗಿನಿಂದ RCB ಪರ ಆಡುತ್ತಿರುವ ವಿರಾಟ್ ಕೊಹ್ಲಿಗೆ, ಬೆಂಗಳೂರು 2ನೇ ತವರು. ಹಾಗಾಗಿ ತವರು ಡೆಲ್ಲಿಗಿಂತ ಬೆಂಗಳೂರಿನಲ್ಲೇ ಅವರಿಗೆ ಹೆಚ್ಚು ಫ್ಯಾನ್ಸ್​ ಇದ್ದಾರೆ. ಇದು ಸಾಕಷ್ಟು ಭಾರಿ ಸಾಬೀತಾಗಿದೆ. ಇಂದು ಬೆಂಗಳೂರಿನಲ್ಲಿ ಅವರು ಆಡ್ತಿರೋದು ಕೊನೆ ಟಿ20 ಮ್ಯಾಚ್ ಅಂದ್ರೆ ಕೇಳ್ಬೇಕಾ..? ಫ್ಯಾನ್ಸ್ ಹುಚ್ಚೆದ್ದು ಪಂದ್ಯ ವೀಕ್ಷಿಸುತ್ತಾರೆ. ಬೆಂಗಳೂರಿನಲ್ಲಿ 5 ಟಿ20 ಮ್ಯಾಚ್ ಆಡಿರೋ ಕಿಂಗ್ ಕೊಹ್ಲಿ, ಒಂದು ಅರ್ಧಶತಕ ಸಹಿತ 116 ರನ್ ಬಾರಿಸಿದ್ದಾರೆ. 2ನೇ ಪಂದ್ಯದಲ್ಲಿ ಜಸ್ಟ್ 16 ಬಾಲ್‌ನಲ್ಲಿ 29 ರನ್ ಸಿಡಿಸಿ, ಅಟ್ಯಾಕಿಂಗ್ ಬ್ಯಾಟಿಂಗ್ ಮಾಡಿದ್ದರು. ಇಂದು ಅದು ರಿಪೀಟ್ ಆದ್ರೂ ಆಶ್ಚರ್ಯವಿಲ್ಲ.

ಸತತ ಎರಡು ಡಕೌಟ್​..! 3ನೇ ಪಂದ್ಯದಲ್ಲಿ ಸಿಡಿದೇಳುತ್ತಾರಾ..?

ರೋಹಿತ್ ಶರ್ಮಾ ಅವರು ಟಿ20 ಕಮ್​ಬ್ಯಾಕ್ ಯಾಕೋ ಸರಿಯಾಗಿಲ್ಲ ಅಂತ ಕಾಣ್ತಿದೆ. ಅಫ್ಘಾನಿಸ್ತಾನ ವಿರುದ್ಧ ಮೊದಲೆರಡು ಪಂದ್ಯದಲ್ಲೂ ಡಕೌಟ್ ಆಗಿದ್ದಾರೆ. ಫಸ್ಟ್ ಮ್ಯಾಚ್​​ನಲ್ಲಿ ರನೌಟ್ ಆದ್ರೆ, ಎರಡನೇ ಮ್ಯಾಚ್​ನಲ್ಲಿ ಕ್ಲೀನ್ ಬೌಲ್ಡ್ ಆದ್ರು. ಎರಡು ಮ್ಯಾಚ್​ನಿಂದ ಅವರು ಎದುರಿಸಿದ್ದು ಜಸ್ಟ್​ ಮೂರೇ ಬಾಲ್. ಈಗ ಇಂದು 3ನೇ ಪಂದ್ಯದಲ್ಲಾದ್ರೂ ರನ್ ಹೊಳೆ ಹರಿಸ್ತಾರಾ ಅಂತ ಫ್ಯಾನ್ಸ್ ಕಾಯ್ತಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯನಲ್ಲೇ ಒನ್​ಡೇ ಕ್ರಿಕೆಟ್​ನಲ್ಲಿ ಡಬಲ್ ಸೆಂಚುರಿ ಹೊಡೆದಿದ್ದ ರೋಹಿತ್, ಇಂದು ಟಿ20ಯಲ್ಲೂ ಅದೇ ರೀತಿಯ ಪ್ರದರ್ಶನ ನೀಡ್ತಾರಾ ನೋಡ್ಬೇಕು.

ಇಂಟ್ರೆಸ್ಟಿಂಗ್ ಆಗಿದೆ ಶಿವಂ ದುಬೆ ಲವ್ ಸ್ಟೋರಿ..! ಅಂಜುಂ ಖಾನ್ ಕೈ ಹಿಡಿದ ಭಾರತೀಯ ಕ್ರಿಕೆಟಿಗನ ಪ್ರೇಮ್ ಕಹಾನಿ ಇದು

36 ವರ್ಷದ ರೋಹಿತ್​ಗೂ ಭಾರತದಲ್ಲಿ ಇದು ಕೊನೆ ಟಿ20 ಮ್ಯಾಚ್​. ಅವರು ಸಹ ಟಿ20 ವರ್ಲ್ಡ್​ಕಪ್ ಬಳಿಕ ಟಿ20 ಫಾಮ್ಯಾಟ್​ಗೆ ಗುಡ್ ಬೈ ಹೇಳಲಿದ್ದಾರೆ. ಜೊತೆಗೆ ವಿಶ್ವಕಪ್​ಗೂ ಮುನ್ನ ಒಂದೊಳ್ಳೆ ಇನ್ನಿಂಗ್ಸ್ ಆಡಲು ಎದುರು ನೋಡ್ತಿದ್ದಾರೆ. ಹಾಗಾಗಿಯೇ ಇಂದಿನ ಪಂದ್ಯ ಕೊಹ್ಲಿ ಜೊತೆ ರೋಹಿತ್​ಗೂ ಮಹತ್ವ ಪಡೆದಿದೆ. ಒಟ್ನಲ್ಲಿ ಇಂದಿನ ಪಂದ್ಯದ ಮೇನ್ ಅಟ್ರ್ಯಾಕ್ಷನ್ ರೋಕೊ ಜೋಡಿ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios