ಲಾಹೋರ್(ಮಾ.15): ಕೊರೋನಾ ವೈರಸ್ ಈಗಾಗಲೇ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ಒಟ್ಟಾರೆ ಐದುವರೆ ಸಾವಿರಕ್ಕೂ ಅಧಿಕ ಮಂದಿಯ ಬಲಿ ಪಡೆದಿದೆ. ಮಾನವ ಕುಲಕ್ಕೆ ಕಂಠಕವಾದ ಕೊರೋನಾ ವೈರಸ್‌ಗೆ ಕಾರಣವಾದ ಚೀನಾದ ಮೇಲೆ ಪಾಕಿಸ್ತಾನ ಮಾಜಿ ವೇಗಿ ಶೊಯೆಬ್ ಅಖ್ತರ್ ಕಿಡಿಕಾರಿದ್ದಾರೆ.

ಯಾಕೆ ಅವರು ಬಾವುಲಿಗಳನ್ನು, ನಾಯಿಗಳನ್ನು ತಿನ್ನುತ್ತಾರೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಬಾವುಲಿಗಳ ರಕ್ತ ಹಾಗೂ ಮೂತ್ರವನ್ನು ಸೇವಿಸುವ ಮೂಲಕ ನೀವ್ಯಾಕೆ ವೈರಸ್ ಹರಡುತಿದ್ದೀರಿ ಎಂದು ಚೀನಿಯರ ಮೇಲೆ ಅಖ್ತರ್ ಬೌನ್ಸರ್ ಎಸೆದಿದ್ದಾರೆ.

ಕಳಂಕಿತ ಆಟ​ಗಾ​ರರ ಜತೆ ಆಡಿದ್ದೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮತ್ತೊಬ್ಬ ಪಾಕ್ ಕ್ರಿಕೆಟಿಗ..!

ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಖ್ತರ್, ಇಡೀ ಜಗತ್ತೇ ಸಂಕಷ್ಟದಲ್ಲಿದೆ. ಪ್ರವಾಸೋದ್ಯಮ ಹಾಗೂ ಆರ್ಥಿಕತೆಯ ಮೇಲೆ ಕೊರೋನಾ ವೈರಸ್ ಬಲವಾದ ಪೆಟ್ಟು ನೀಡಿದೆ. ನಾನು ಚೀನಿಯರ ವಿರುದ್ಧವಿಲ್ಲ. ಆದರೆ ಅವರು ಪ್ರಾಣಿಗಳನ್ನು ಬಳಸಿಕೊಳ್ಳುವುದನ್ನು ನಾನು ವಿರೋಧಿಸುತ್ತೇನೆ ಎಂದಿದ್ದಾರೆ.

ಕೊರೋನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಇದೀಗ ಸುಮಾರು ಕೋವಿಡ್ 19 ವೈರಸ್ ನೂರಕ್ಕೂ ಹೆಚ್ಚು ದೇಶಗಳಲ್ಲಿ ಹಬ್ಬಿದೆ. ಇದುವರೆಗೂ 1,30,000 ಸಾವಿರಕ್ಕೂ ಅಧಿಕ ಮಂದಿಗೆ ತಗುಲಿದ್ದು, ಪಾಕಿಸ್ತಾನದಲ್ಲಿ 28 ಮಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ.

Breaking: ಕರ್ನಾಟಕದಲ್ಲಿ ಮತ್ತೊಂದು ಕೊರೋನಾ ಕೇಸ್ ಪತ್ತೆ

ಅಖ್ತರ್ ಇದೇ ವೇಳೆ ಪಿಎಸ್‌ಎಲ್ ಹಾಗೂ ಐಪಿಎಲ್‌ ಬಗ್ಗೆಯೂ ಮಾತನಾಡಿದ್ದಾರೆ. ಅಖ್ತರ್ ಏನಂದ್ರು ಅನ್ನೋದನ್ನು ನೀವೇ ನೋಡಿ..