* ಐರ್ಲೆಂಡ್ ಎದುರು ಸ್ಪೋಟಕ ಶತಕ ಚಚ್ಚಿ ಮಿಂಚಿದ ದೀಪಕ್ ಹೂಡಾ* ಕೃನಾಲ್ ಪಾಂಡ್ಯ ಜತೆ ಕಿರಿಕ್ ಮಾಡಿಕೊಂಡು ಬ್ಯಾನ್ ಆಗಿದ್ದ ಹೂಡಾ* ಶತಕ ಸಿಡಿಸಿ ಮನೆಮಾತಾದ ದೀಪಕ್ ಹೂಡಾ


ಬೆಂಗಳೂರು(ಜು.02): ಜನವರಿ 22, 2021. ಅಂದು ಆಲ್​ರೌಂಡರ್​ ದೀಪಕ್ ಹೂಡಾ ಅನ್ನೋ ಹೆಸರು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಟಿವಿ, ನ್ಯೂಸ್​​ ಪೇಪರ್​​​​​ಗಳಲ್ಲಿ ಈತನೆ ಹೆಡ್​​ಲೈನ್​​​. ಟೀಂ ಇಂಡಿಯಾ ಎಂಟ್ರಿ ಕನಸು ಕಾಣುತ್ತಿದ್ದವ, ಕ್ರಿಕೆಟ್​ ಜಗತ್ತಿನ ಮುಂದೆ ಬೆತ್ತಲಾಗಿದ್ದ. ಹೂಡಾ ಮೇಲೆ ಬ್ಯಾನ್ ಅನ್ನೋ ಕಠಿಣ ಅಸ್ತ್ರ ಪ್ರಯೋಗಿಸಲಾಗಿತ್ತು. ಬರೋಡಾ ತಂಡದ ಕ್ಯಾಪ್ಟನ್​​ ಕೃನಾಲ್​​ ಪಾಂಡ್ಯ ಜೊತೆಗಿನ ಕಿರಿಕ್​​ನಿಂದಾಗಿ ಹೂಡಾಗೆ ಒಂದು ವರ್ಷಗಳ ಕಾಲ ಡೊಮೆಸ್ಟಿಕ್ ಕ್ರಿಕೆಟ್​​ನಿಂದ ನಿಷೇಧ ಹೇರಲಾಗಿತ್ತು. 

ನಿಜಕ್ಕೂ ಬ್ಯಾನ್​ ಶಿಕ್ಷೆ ದೀಪಕ್ ಹೂಡಾರನ್ನ ಚಿಂತಾಕ್ರಾಂತರನ್ನಾಗಿಸಿತು. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಡೊಮೆಸ್ಟಿಕ್ನಲ್ಲಿ ಆರ್ಭಟಿಸಿ, ಟೀಂ ಇಂಡಿಯಾ ಎಂಟ್ರಿಕೊಟ್ಟಿದ್ದಾನೆ. ಆ ಮೂಲಕ ವರ್ಷದ ಹಿಂದೆ ಆದ ಅವಮಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾನೆ.

ಟೀಂ​ ಇಂಡಿಯಾದಲ್ಲಿ ಹೂಡಾ ರೋರಿಂಗ್ : 

ಬ್ಯಾನ್​​ ಅವಮಾನದ ಬಳಿಕ ಹೂಡಾ ಲೈಫೇ ಬದಲಾಯ್ತು. ಡೊಮೆಸ್ಟಿಕ್ ಕ್ರಿಕೆಟ್​​ನಲ್ಲಿ ತೋರಿದ ಗಮನರ್ಹ ಪ್ರದರ್ಶನದಿಂದ ಇದೇ ವರ್ಷರಾಂಭದಲ್ಲಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ. ಸಿಕ್ಕಿದ್ದು ಒಂದೇ ಚಾನ್ಸ್​. ಲಂಕಾ ವಿರುದ್ಧ ಮಂಕಾದ. ಆದ್ರೆ ನಂತರ ನಡೆದ ಐಪಿಎಲ್​​ನಲ್ಲಿ ಲಖನೌ ಸೂಪರ್ ಜೈಂಟ್ಸ್‌ ಪರ ರನ್​ ಹೊಳೆ ಹರಿಸಿದ.

ದೀಪಕ್ ಹೂಡಾ ಶತಕದ ಅಬ್ಬರ, ಪುಟ್ಟ ಐರ್ಲೆಂಡ್‌ ಮೇಲೆ ಭಾರತದ ಬ್ಯಾಟಿಂಗ್ ಪಟಾಕಿ!

ಆಡಿದ 15 ಪಂದ್ಯಗಳಿಂದ ಬರೋಬ್ಬರಿ 481 ರನ್​​ ಸಿಡಿಸಿದ. ಪರಿಣಾಮ ಮತ್ತೆ ಟಿ20 ಇಂಡಿಯಾ ಕದ ತಟ್ಟಿದ. ಐರ್ಲೆಂಡ್​​ ಟಿ20 ಸರಣಿಯಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಹೂಡಾ ರೋರಿಂಗ್ ನಡೆಸಿದ್ರು. ಒಂದು ಅಮೋಘ ಸೆಂಚುರಿ ಸಹಿತ ಎರಡು ಪಂದ್ಯಗಳಲ್ಲಿ 151 ರನ್​ ಬಾರಿಸಿ ಸರಣಿಯಲ್ಲಿ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ರು.

ಪಠಾಣ್ ಸಹೋದರರಿಗೆ ಧನ್ಯವಾದಗಳನ್ನು ಅರ್ಪಿಸಿದ ಹೂಡಾ

ನನ್ನ ಎಲ್ಲಾ ಯಶಸ್ಸಿನ ಹಿಂದೆ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಅವರ ಸಹಕಾರವೂ ಇದೆ. ಮೆಂಟರ್‌ ಆಗಿ ಅವರು ಸಾಕಷ್ಟು ಪಾಠ ಮಾಡಿದ್ದಾರೆ. ಅವೆಲ್ಲವೂ ನೆರವಿಗೆ ಬಂದಿತು. ಅವರ ಜತೆಗಿದ್ದಷ್ಟು ದಿನವೂ ನನ್ನನ್ನು ಪರಿಪಕ್ವ ಆಟಗಾರರನ್ನಾಗಿಸಿತು ಎಂದು ದೀಪಕ್ ಹೂಡಾ ಹೇಳಿದ್ದಾರೆ.

ಇಂಗ್ಲೆಂಡ್​​​​​ ಟಿ20 ಸರಣಿಯಲ್ಲಿ ಹೂಡಾಗೆ ಜಾಕ್​​ಪಾಕ್​​:

ಹೂಡಾ ಯಾವಾಗ ಐರ್ಲೆಂಡ್​ ವಿರುದ್ಧ ಸ್ಪೋಟಕ ಸೆಂಚುರಿ ಸಿಡಿಸಿದ್ರೋ ಆಗಲೇ ಸೆಲೆಕ್ಟರ್ಸ್​ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ರು. ಪರಿಣಾಮ ಇಂಗ್ಲೆಂಡ್​​​​​​ ವಿರುದ್ಧ ಟಿ20 ಸರಣಿಗೂ ಆಯ್ಕೆಯಾದ್ರು. ಜುಲೈ 7ರಿಂದ ಸರಣಿ ಆರಂಭಗೊಳ್ಳಿಲಿದೆ. ಒಂದು ವೇಳೆ ಆಂಗ್ಲರ ನಾಡಲ್ಲು ಹೂಡಾ ರನ್​ ಕೊಳ್ಳೆ ಹೊಡೆದಿದ್ದೇ ಆದಲ್ಲಿ ಟಿ20 ವಿಶ್ವಕಪ್​​​ ರೇಸ್​​ನಲ್ಲಿ ಉಳಿದುಕೊಳ್ಳಲಿದ್ದಾರೆ. ನಿಜಕ್ಕೂ ಆರಂಭದಲ್ಲೇ ಹೇಳಿದಂತೆ ವಾಟ್​​​​​​​​ ಎ ಗ್ರೇಟ್​ ಕಮ್​ಬ್ಯಾಕ್​​​ ಸ್ಟೋರಿ ಅಲ್ವ?