Asianet Suvarna News Asianet Suvarna News

ದೀಪಕ್ ಹೂಡಾ ಶತಕದ ಅಬ್ಬರ, ಪುಟ್ಟ ಐರ್ಲೆಂಡ್‌ ಮೇಲೆ ಭಾರತದ ಬ್ಯಾಟಿಂಗ್ ಪಟಾಕಿ!

ಪುಟ್ಟ ಐರ್ಲೆಂಡ್‌ ತಂಡದ ಬೌಲಿಂಗ್ ವಿಭಾಗವನ್ನು ಚಿಂದಿ ಚಿತ್ರಾನ್ನ ಮಾಡಿದ್ದ ಟೀಮ್ ಇಂಡಿಯಾ 2ನೇ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸಿದೆ. ದೀಪಕ್‌ ಹೂಡಾ ಅಂತಾರಾಷ್ಟ್ರೀಯ ಟಿ20ಯಲ್ಲಿ ತಮ್ಮ ಮೊಟ್ಟಮೊದಲ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾದ ಬೃಹತ್ ಮೊತ್ತಕ್ಕೆ ಕಾರಣರಾದರು.

Ireland vs India 2nd T20I  Deepak Hooda scores century Sanju Samson shines Team India Post Big total san
Author
Bengaluru, First Published Jun 28, 2022, 10:39 PM IST

ಡುಬ್ಲಿನ್ (ಜೂನ್ 28): ಪುಟ್ಟ ಐರ್ಲೆಂಡ್‌ನ (Ireland) ಬೌಲಿಂಗ್ ವಿಭಾಗವನ್ನು ನಿರ್ದಯವಾಗಿ ದಂಡಿಸಿದ ದೀಪಕ್ ಹೂಡಾ (Deepak Hooda) ಅಂತಾರಾಷ್ಟ್ರೀಯ ಟಿ20ಯಲ್ಲಿ ತಮ್ಮ ಚೊಚ್ಚಲ ಶತಕವನ್ನು ಕೇವಲ 55 ಎಸೆತಗಳಲ್ಲಿ ಪೂರೈಸಿದರು. ಆ ಮೂಲಕ 2ನೇ ಟಿ20 ಪಂದ್ಯದಲ್ಲಿ ಭಾರತ (India) ತಂಡ ಐರ್ಲೆಂಡ್‌ ಗೆಲುವಿಗೆ ಬೃಹತ್ ಮೊತ್ತದ ಗುರಿ ನೀಡಿದೆ.

ದಿ ವಿಲೇಜ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ 7 ವಿಕೆಟ್‌ ಗೆ 227 ರನ್‌ ಪೇರಿಸಿದೆ. ಆರಂಭಿಕ ಅಟಗಾರ ಇಶಾನ್ ಕಿಶನ್ (Ishan Kishan) ವಿಕೆಟ್‌ ಅನ್ನು ಬೇಗನೆ ಕಳೆದುಕೊಂಡಿದ್ದ ಭಾರತ ತಂಡಕ್ಕೆ 2ನೇ ವಿಕೆಟ್‌ಗೆ ದೀಪಕ್‌ ಹೂಡಾ (104 ರನ್, 57 ಎಸೆತ, 9 ಬೌಂಡರಿ, 6 ಸಿಕ್ಸರ್‌)  ಹಾಗೂ ಸಂಜು ಸ್ಯಾಮ್ಸನ್‌ (77 ರನ್, 42 ಎಸೆತ, 9 ಬೌಂಡರಿ, 4 ಸಿಕ್ಸರ್‌) ದಾಖಲೆಯ 176 ರನ್‌ ಜೊತೆಯಾಟವಾಡುವ ಮೂಲಕ ದೊಡ್ಡ ಮೊತ್ತ ಪೇರಿಸಲು ನೆರವಾದರು.

ಆರಂಭಿಕ ಎರಡು ಓವರ್‌ಗಳಲ್ಲಿ ಭಾರತದ ಬ್ಯಾಟಿಂಗ್ ಕಟ್ಟಿಹಾಕುವ ಸೂಚನೆ ನೀಡಿದ್ದ ಐರ್ಲೆಂಡ್ ಬೌಲಿಂಗ್ ವಿಭಾಗ, ಆ ಬಳಿಕ ಸಂಜು ಸ್ಯಾಮ್ಸನ್‌ ಹಾಗೂ ದೀಪಕ್ ಹೂಡಾ ಬ್ಯಾಟಿಂಗ್‌ ಆರ್ಭಟದ ಮುಂದೆ ಸಂಪೂರ್ಣವಾಗಿ ಮಂಕಾಯಿತು. ಕೇವಲ 85 ಎಸೆತಗಳನ್ನು ಎದುರಿಸಿದ ಈ ಜೋಡಿ 175 ರನ್‌ಗಳ ಬೃಹತ್ ಮೊತ್ತದ ಜೊತೆಯಾಟವಾಡಿತು. 


ಒಂದು ಹಂತದಲ್ಲಿ ದೀಪಕ್ ಹೂಡಾ ಹಾಗೂ ಸ್ಯಾಮ್ಸನ್ ಇಬ್ಬರೂ ಶತಕ ಬಾರಿಸುವ ಹಾದಿಯಲ್ಲಿದ್ದರು. ಆದರೆ, 17ನೇ ಓವರ್‌ನ 2ನೇ ಎಸೆತದಲ್ಲಿ ಶತಕದಿಂದ 23 ರನ್‌ ದೂರದಲ್ಲಿದ್ದ ಸಂಜು ಸ್ಯಾಮ್ಸನ್ ಮಾರ್ಕ್ ಐಡೆರ್‌ಗೆ ವಿಕೆಟ್‌ ನೀಡಿದ್ದರು. ಈ ಹಂತದಲ್ಲಿ 98 ರನ್‌ಗಳಲ್ಲಿದ್ದ ದೀಪಕ್ ಹೂಡಾ ಮರು ಓವರ್‌ನಲ್ಲಿ ಶತಕ ಪೂರೈಸಿದ್ದರು. ಈ ಜೋಡಿ ತಮ್ಮ ಜೊತೆಯಾಟದಲ್ಲಿ ಆಕರ್ಷಕ 10 ಸಿಕ್ಸರ್‌ ಗಳನ್ನು ಸಿಡಿಸಿ ಗಮನಸೆಳೆದಿತ್ತು.

ಸಂಜು ಸ್ಯಾಮ್ಸನ್‌ ಹಾಗೂ ದೀಪಕ್‌ ಹೂಡಾ ಔಟಾದ ಬಳಿಕ ಭಾರತದ ರನ್‌ ವೇಗವೂ ಕುಂಠಿತವಾಯಿತು. ಒಂದು ಹಂತದಲ್ಲಿ 250ಕ್ಕಿಂತ ಅಧಿಕ ಮೊತ್ತ ಪೇರಿಸುವ ಹಾದಿಯಲ್ಲಿದ್ದ ಭಾರತ 227 ರನ್‌ಗೆ ಸಮಾಧಾನ ಪಟ್ಟಿತು. ಸೂರ್ಯಕುಮಾರ್‌ ಯಾದ್  5 ಎಸೆತಗಳಲ್ಲಿ 15 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 15 ರನ್ ಸಿಡಿಸಿದರು. ದಿನೇಶ್‌ ಕಾರ್ತಿಕ್‌, ಅಕ್ಸರ್ ಪಟೇಲ್‌ ಹಾಗೂ ಹರ್ಷಲ್‌ ಪಟೇಲ್‌ ಶೂನ್ಯಕ್ಕೆ ಔಟಾದರು. ಕೊನೇ ಎರಡು ಓವರ್‌ ಗಳಲ್ಲಿ ಐರ್ಲೆಂಡ್‌ ಭಾರತದ ಬ್ಯಾಟಿಂಗ್‌ಗೆ ಅಲ್ಪ ಪ್ರಮಾಣದ ಕಡಿವಾಣ ಹೇರಿತು.

Ind vs IRE: ಆಡಲು ಅವಕಾಶ ಸಿಗದಿದ್ದರೇನಂತೆ, ಅಭಿಮಾನಿಗಳ ಮನಗೆದ್ದ ಸಂಜು ಸ್ಯಾಮ್ಸನ್ ನಡೆ..!

ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್: ಅಂತಾರಾಷ್ಟ್ರೀಯ ಟಿ20ಯಲ್ಲಿ ಶತಕ ಬಾರಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ ಮನ್ ಎನ್ನುವ ದಾಖಲೆಯನ್ನು ದೀಪಕ್ ಹೂಡಾ ಮಾಡಿದರು. ರೋಹಿತ್ ಶರ್ಮ ನಾಲ್ಕು ಶತಕ ಬಾರಿಸಿದ್ದರೆ, ಕೆಎಲ್ ರಾಹುಲ್‌  2 ಶತಕ ಸಿಡಿಸಿದ್ದಾರೆ. ಸುರೇಶ್‌ ರೈನಾ ಒಂದು ಶತಕ ಸಿಡಿಸಿರುವ ಬ್ಯಾಟ್ಸ್ ಮನ್ ಆಗಿದ್ದಾರೆ. ಸಂಜು ಸ್ಯಾಮ್ಸನ್‌ ಹಾಗೂ ದೀಪಕ್‌ ಹೂಡಾ ಆಡಿದ 176 ರನ್‌ಗಳ ಜೊತೆಯಾಟ ಅಂತಾರಾಷ್ಟ್ರೀಯ ಟಿ20ಯಲ್ಲಿ ಯಾವುದೇ ವಿಕೆಟ್‌ಗೆ  ಭಾರತ ತಂಡದ ಅತೀ ಗರಿಷ್ಠ ಮೊತ್ತದ ಜೊತೆಯಾಟ ಎನಿಸಿದೆ. 

ಕಳೆದ ವರ್ಷ ನನಸಾಗದ ಮಯಾಂಕ್ ಅಗರ್‌ವಾಲ್ ಕನಸು ಈ ವರ್ಷ ಆಗುತ್ತಾ..?

ಐರ್ಲೆಂಡ್‌ ನಲ್ಲಿ 2ನೇ ಗರಿಷ್ಠ ಮೊತ್ತ: ಭಾರತ ಪೇರಿಸಿದ 7 ವಿಕೆಟ್‌ ಗೆ 227 ರನ್‌, ಐರ್ಲೆಂಡ್‌ ನೆಲದಲ್ಲಿ 2ನೇ ಗರಿಷ್ಠ ಮೊತ್ತ ಎನಿಸಿದೆ. ಇದಕ್ಕೂ ಮುನ್ನ 2019ರಲ್ಲಿ ಇದೇ ಮೈದಾನದಲ್ಲಿ ನೆದರ್ಲೆಂಡ್‌ ವಿರುದ್ಧ ಸ್ಕಾಟ್ಲೆಂಡ್‌ ತಂಡ ಬಾರಿಸಿದ 3 ವಿಕೆಟ್‌ಗೆ  252 ರನ್ ಗರಿಷ್ಠ ಮೊತ್ತ ಎನಿಸಿತ್ತು. ಇದಕ್ಕೂ ಮುನ್ನ 2018ರಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧವೇ 4 ವಿಕೆಟ್‌ ಗೆ 213 ರನ್ ಬಾರಿಸಿದ್ದು ಗರಿಷ್ಠ ಮೊತ್ತ ಎನಿ

Follow Us:
Download App:
  • android
  • ios