ಸಿಡ್ನಿ(ಜ.07): ಆಸ್ಪ್ರೇಲಿಯಾದ ಕ್ಲೇರ್‌ ಪೊಲೊಸಾಕ್‌ ಪುರುಷರ ಟೆಸ್ಟ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊದಲ ಮಹಿಳಾ ಅಂಪೈರ್‌ ಎನ್ನುವ ದಾಖಲೆ ಬರೆದಿದ್ದಾರೆ. 

ಗುರುವಾರದಿಂದ ಇಲ್ಲಿ ನಡೆಯುತ್ತಿರುವ ಭಾರತ-ಆಸ್ಪ್ರೇಲಿಯಾ ನಡುವಿನ 4ನೇ ಟೆಸ್ಟ್‌ ಪಂದ್ಯದಲ್ಲಿ ಕ್ಲೇರ್‌ 4ನೇ ಅಂಪೈರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. 32 ವರ್ಷದ ಕ್ಲೇರ್‌ 2019ರಲ್ಲಿ ಪುರುಷರ ಏಕದಿನ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ಅಂಪೈರ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. 

ಸಿಡ್ನಿ ಟೆಸ್ಟ್‌; ವಾರ್ನರ್ ಔಟ್‌, ಪಂದ್ಯಕ್ಕೆ ವರುಣನ ಅಡ್ಡಿ

ನಮೀಬಿಯಾ ಹಾಗೂ ಒಮಾನ್‌ ನಡುವಿನ ಐಸಿಸಿ 2ನೇ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಅವರು ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲಿ 4ನೇ ಅಂಪೈರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.