ಸಿಡ್ನಿ(ಜ.07): ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಮೂರನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದೆ. ಮೊದಲ ಸೆಷನ್‌ನಲ್ಲಿ ಕೇವಲ 7.1 ಓವರ್‌ ಮಾತ್ರ ಬೌಲಿಂಗ್‌ ಮಾಡಲು ಸಾಧ್ಯವಾಗಿದ್ದು, ಅಪಾಯಕಾರಿ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್‌ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಯಶಸ್ವಿಯಾಗಿದ್ದಾರೆ.

ಹೌದು, ಮೂರನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿತು. ಮೊದಲೆರಡು ಟೆಸ್ಟ್‌ ಪಂದ್ಯಗಳಿಂದ ಹೊರಗುಳಿದಿದ್ದ ಡೇವಿಡ್‌ ವಾರ್ನರ್‌ ಸಂಪೂರ್ಣ ಫಿಟ್ನೆಸ್‌ನೊಂದಿಗೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಆದರೆ ವಾರ್ನರ್ ಅವರನ್ನು ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವಕಾಶ ನೀಡಲಿಲ್ಲ. ಪಂದ್ಯದ 4ನೇ ಓವರ್‌ನಲ್ಲೇ ಡೇವಿಡ್‌ ವಾರ್ನರ್(5) ಅವರನ್ನು ಒಂದಂಕಿ ಮೊತ್ತಕ್ಕೆ ಪೆವಿಲಿಯನ್ನಿಗಟ್ಟುವಲ್ಲಿ ಸಿರಾಜ್ ಯಶಸ್ವಿಯಾದರು.

ಆಸ್ಟ್ರೇಲಿಯಾ ವಿರುದ್ದದ ಸಿಡ್ನಿ ಟೆಸ್ಟ್‌ಗೆ ಟೀಂ ಇಂಡಿಯಾ ಪ್ರಕಟ; ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಮತ್ತೋರ್ವ ವೇಗಿ..!

ಇನ್ನು ಎರಡನೇ ವಿಕೆಟ್‌ಗೆ ವಿಲ್‌ ವಿಲ್‌ ಪುಕೊವ್ಸಿಕ್(14) ಹಾಗೂ ಮಾರ್ನರ್ ಲಬುಶೇನ್‌(2) ಜೋಡಿ 15 ರನ್‌ಗಳ ಜತೆಯಾಟವಾಡುತ್ತಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.  

ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಸೈನಿ: ಟೀಂ ಇಂಡಿಯಾ ವೇಗದ ಬೌಲರ್‌ ನವದೀಪ್ ಸೈನಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಡೆಲ್ಲಿ ವೇಗಿ ಸೈನಿಗೆ ಕ್ಯಾಪ್‌ ನೀಡುವ ಮೂಲಕ ಟೆಸ್ಟ್‌ ತಂಡಕ್ಕೆ ಭರಮಾಡಿಕೊಂಡರು.