ಸಿಡ್ನಿ(ಜ.19): ದಕ್ಷಿಣ ಆಫ್ರಿಕಾ ತಂಡದ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌, ಬಿಗ್‌ ಬ್ಯಾಶ್‌ ಲೀಗ್‌ನ ಪಂದ್ಯವೊಂದರಲ್ಲಿ ಎದುರಾಳಿ ತಂಡದ ಆಟಗಾರನನ್ನು ರನೌಟ್‌ ಮಾಡಲು ಚೆಂಡನ್ನು ಫುಟ್ಬಾಲ್‌ನಂತೆ ಒದ್ದಿದ್ದಾರೆ. ನೇರವಾಗಿ ಚೆಂಡು ವಿಕೆಟ್‌ಗಳನ್ನು ಬೀಳಿಸಿದ್ದು ಈ ವಿಡಿಯೋ ವೈರಲ್‌ ಆಗಿದೆ.

IPL ಟೂರ್ನಿಗೂ ಮುನ್ನವೇ ಅಬ್ಬರಿಸಿದ RCB ಹೊಸ ಪ್ರತಿಭೆ..!

2020ರ ಐಪಿಎಲ್‌ನಲ್ಲಿ ಮೋರಿಸ್‌ ಆರ್‌ಸಿಬಿ ತಂಡದಲ್ಲಿ ಆಡಲಿದ್ದಾರೆ. ಶನಿವಾರ ಸಿಡ್ನಿ ಸಿಕ್ಸರ್‌ ಹಾಗೂ ಸಿಡ್ನಿ ಥಂಡರ್ಸ್‌ ನಡುವೆ ನಡೆಯುತ್ತಿದ್ದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಸಿಡ್ನಿ ಥಂಡರ್ಸ್‌ ಪರ ಆಡುತ್ತಿರುವ ಮೋರಿಸ್‌, ಸಿಡ್ನಿ ಸಿಕ್ಸರ್‌ ತಂಡದ ಡೇನಿಯಲ್‌ ಹ್ಯೂಜಸ್‌ ರನ್ನು ಫುಟ್ಬಾಲ್‌ ಸ್ಕಿಲ್‌ ಮೂಲಕ ರನೌಟ್‌ ಮಾಡಿದ್ದಾರೆ.

ಡಿಸೆಂಬರ್ 19ರಂದು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕ್ರಿಸ್‌ ಮೋರಿಸ್ ಅವರಿಗೆ 10 ಕೋಟಿ ನೀಡಿ ಖರೀದಿಸಿದೆ. ಮುಂಬರುವ 13ನೇ ಆವೃತ್ತಿಯಲ್ಲಿ ಕ್ರಿಸ್ ಮೋರಿಸ್ RCB ಪರ ಆಡಲಿದ್ದಾರೆ.