Asianet Suvarna News Asianet Suvarna News

ಈ 3 ದಿಗ್ಗಜ ಕ್ರಿಕೆಟಿಗರಿಗೆ ಟೀಂ ಇಂಡಿಯಾ ಬಾಗಿಲು ಬಂದ್..! ಟೆಸ್ಟ್‌ನಲ್ಲೂ ಸ್ಥಾನ ಸಿಗೋದು ಡೌಟ್..!

ಭಾರತ ಕ್ರಿಕೆಟ್‌ ತಂಡದಲ್ಲಿ ಮಿಂಚಿದ್ದ ಮೂವರು ದಿಗ್ಗಜ ಕ್ರಿಕೆಟಿಗರ ವೃತ್ತಿಬದುಕು ಅಂತ್ಯವಾದಂತೆ ಭಾಸವಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Cheteshwar Pujara to Umesh Yadav 3 Indian Cricketers test career is almost over all you need to know kvn
Author
First Published Sep 1, 2024, 5:18 PM IST | Last Updated Sep 1, 2024, 5:18 PM IST

ಬೆಂಗಳೂರು: ಬಾಂಗ್ಲಾದೇಶ ಎದುರು ಟೀಂ ಇಂಡಿಯಾ ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಸದ್ಯದಲ್ಲೇ ಈ ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಭಾರತ ಕ್ರಿಕೆಟ್ ತಂಡದ ಆಟಗಾರರ ಹೆಸರನ್ನು ಘೋಷಿಸಲಿದೆ. ಈ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ತಾರಾ ಆಟಗಾರರು ಕಣಕ್ಕಿಳಿಯಲಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಿಟ್ಟಿನಲ್ಲಿ ಈ ಸರಣಿ ಗೆಲುವು ಟೀಂ ಇಂಡಿಯಾ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ.

ಈ ಟೆಸ್ಟ್ ಸರಣಿಗೆ ಯುವ ಕ್ರಿಕೆಟಿಗರಾದ ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಅವರಂತಹ ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಬಾಂಗ್ಲಾದೇಶ ಎದುರಿನ ಸರಣಿಯ ಬಳಿಕ ಟೀಂ ಇಂಡಿಯಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳ ಎದುರು ಮಹತ್ವದ ಟೆಸ್ಟ್ ಸರಣಿಯನ್ನಾಡಲಿದೆ. ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಕೂಡಾ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡುವ ಮನೋಭಾವ ಹೊಂದಿದ್ದಾರೆ. ಹೀಗಾಗಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಕನವರಿಕೆಯಲ್ಲಿರುವ ಈ ಐವರು ದಿಗ್ಗಜ ಕ್ರಿಕೆಟಿಗರ ಪಾಲಿಗೆ ಮತ್ತೊಮ್ಮೆ ನಿರಾಸೆಯಾಗುವ ಸಾಧ್ಯತೆಯಿದೆ, ಅಷ್ಟಕ್ಕೂ ಯಾರು ಆ ಮೂವರು ದಿಗ್ಗಜ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಇದೆಂಥಾ ಕ್ರಿಕೆಟ್..! ಕೇವಲ 10 ಎಸೆತದಲ್ಲೇ ಟಿ20 ಪಂದ್ಯ ಫಿನಿಶ್‌, ಇತಿಹಾಸ ನಿರ್ಮಿಸಿದ ಭಾರತೀಯ ಮೂಲದ ಬೌಲರ್..!

1. ಚೇತೇಶ್ವರ್ ಪೂಜಾರ: 

ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಎಂದೇ ಗುರುತಿಸಿಕೊಂಡಿದ್ದ ಚೇತೇಶ್ವರ್ ಪೂಜಾರ ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಪರ ಕೊನೆಯ ಬಾರಿಗೆ ಕಣಕ್ಕಿಳಿದಿದ್ದರು. ಆಸ್ಟ್ರೇಲಿಯಾ ಎದುರಿನ ಫೈನಲ್‌ನಲ್ಲಿ ಪೂಜಾರ 4 ರನ್ ಗಳಷ್ಟೇ ಬಾರಿಸಿದ್ದರು. ಇದಾದ ಬಳಿಕ ಪೂಜಾರ ಅವರನ್ನು ಭಾರತ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಪೂಜಾರ ಆಡುತ್ತಿದ್ದ ನಂ.3ನೇ ಕ್ರಮಾಂಕವನ್ನು ಇದೀಗ ಶುಭ್‌ಮನ್ ಗಿಲ್ ಆಕ್ರಮಿಸಿಕೊಂಡಿದ್ದಾರೆ. ಹೀಗಾಗಿ ಪೂಜಾರಗೆ ಮತ್ತೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವುದು ಬಹುತೇಕ ಅನುಮಾನ ಎನಿಸಿದೆ.

2. ಅಜಿಂಕ್ಯ ರಹಾನೆ: 

ಮುಂಬೈ ಮೂಲದ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್ ಅಜಿಂಕ್ಯ ರಹಾನೆ, ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ಭಾರತ ಕ್ರಿಕೆಟ್‌ ತಂಡದಿಂದ ಹೊರಗುಳಿದಿದ್ದರು. ಆದರೆ ಅಚ್ಚರಿಯ ರೀತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ ತಂಡ ಕೂಡಿಕೊಂಡಿದ್ದರು. ರಹಾನೆ ಕಮ್‌ಬ್ಯಾಕ್ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. 36 ವರ್ಷದ ರಹಾನೆ ಭಾರತ ಪರ 85 ಟೆಸ್ಟ್ ಪಂದ್ಯಗಳನ್ನಾಡಿ 5,077 ರನ್ ಬಾರಿಸಿದ್ದಾರೆ. ಸದ್ಯ ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್, ಶ್ರೇಯಸ್ ಅಯ್ಯರ್ ಅವರಂತಹ ಬ್ಯಾಟರ್‌ಗಳು ಒಳ್ಳೆಯ ಫಾರ್ಮ್‌ನಲ್ಲಿರುವುದರಿಂದ ಬಹುತೇಕ ರಹಾನೆಗೆ ಭಾರತ ಟೆಸ್ಟ್ ತಂಡದ ಬಾಗಿಲು ಬಂದ್ ಆಗಿದೆ ಎಂದರೆ ಅಚ್ಚರಿಯೇನಿಲ್ಲ.

ಬಾಂಗ್ಲಾದೇಶ ಎದುರಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್; ಸ್ಟಾರ್ ಕ್ರಿಕೆಟಿಗನಿಗೆ ಗಾಯ..!

3. ಉಮೇಶ್ ಯಾದವ್:

ಟೀಂ ಇಂಡಿಯಾ ಬಲಗೈ ವೇಗಿ ಉಮೇಶ್ ಯಾದವ್, ಇದುವರೆಗೂ 57 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಕಳೆದ ವರ್ಷದ ಜೂನ್‌ನಲ್ಲಿ ಉಮೇಶ್ ಯಾದವ್, ಆಸ್ಟ್ರೇಲಿಯಾ ವಿರುದ್ದ ಟೀಂ ಇಂಡಿಯಾ ಪರ ಕೊನೆಯದಾಗಿ ಟೆಸ್ಟ್‌ ಪಂದ್ಯವನ್ನಾಡಿದ್ದರು. ಸದ್ಯ ತಂಡದಲ್ಲಿ ಸಿರಾಜ್, ಶಮಿ, ಬುಮ್ರಾ ವೇಗದ ಬೌಲಿಂಗ್‌ ವಿಭಾಗದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದು, ಉಮೇಶ್ ಟೆಸ್ಟ್‌ ಕ್ರಿಕೆಟ್ ಕರಿಯರ್ ಬಹುತೇಕ ಅಂತ್ಯವಾದಂತೆ ಭಾಸವಾಗುತ್ತಿದೆ.
 

Latest Videos
Follow Us:
Download App:
  • android
  • ios