Asianet Suvarna News Asianet Suvarna News

ಒಂದೇ ಓವರ್‌ನಲ್ಲಿ 22 ರನ್ ಚಚ್ಚಿದ ಪೂಜಾರ, ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ ಟೆಸ್ಟ್ ಸ್ಪೆಷಲಿಸ್ಟ್..!

ರಾಯಲ್ ಲಂಡನ್ ಏಕದಿನ ಕಪ್ ಟೂರ್ನಿಯಲ್ಲಿ ಚೇತೇಶ್ವರ್ ಪೂಜಾರ ಸ್ಪೋಟಕ ಬ್ಯಾಟಿಂಗ್
ಒಂದೇ ಓವರ್‌ನಲ್ಲಿ ಸ್ಪೋಟಕ 22 ರನ್ ಚಚ್ಚಿದ ಪೂಜಾರ
ಟೆಸ್ಟ್ ಸ್ಪೆಷಲಿಸ್ಟ್ ಸ್ಪೋಟಕ ಬ್ಯಾಟಿಂಗ್ ವಿಡಿಯೋ ವೈರಲ್

Cheteshwar Pujara Registers Ton In Royal London One Day Cup video viral kvn
Author
Bengaluru, First Published Aug 13, 2022, 5:18 PM IST

ಲಂಡನ್‌(ಆ.13): ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಇಂಗ್ಲೆಂಡ್‌ನಲ್ಲಿ ತಮ್ಮ ಭರ್ಜರಿ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಸಸೆಕ್ಸ್ ತಂಡದ ಪರ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ 2ನಲ್ಲಿ ಒಟ್ಟು 5 ಶತಕ ಸಿಡಿಸಿ ಮಿಂಚಿದ್ದ ಚೇತೇಶ್ವರ್ ಪೂಜಾರ, ಇದೀಗ ತಮ್ಮ ಅದೇ ಲಯವನ್ನು ಮುಂದುವರೆಸಿದ್ದಾರೆ. ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿಯಾಗಿರುವ ಪೂಜಾರ, ಒಂದೇ ಓವರ್‌ನಲ್ಲಿ ಬರೋಬ್ಬರಿ 22 ರನ್ ಬಾರಿಸಿ ಮಿಂಚಿದ್ದಾರೆ.

ಹೌದು, ಚೇತೇಶ್ವರ್ ಪೂಜಾರ ಸದ್ಯ ರಾಯಲ್ ಲಂಡನ್ ಏಕದಿನ ಕಪ್ ಟೂರ್ನಿಯಲ್ಲಿ ವಾರ್ವಿಕ್‌ಶೈರ್ ಎದುರಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಸಸೆಕ್ಸ್ ತಂಡದ ನಾಯಕ ಟಾಮ್ ಹೇನ್ಸ್‌ ಗಾಯಗೊಂಡು ಕೆಲಪಂದ್ಯಗಳಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಚೇತೇಶ್ವರ್ ಪೂಜಾರಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. 

ಸೆಸೆಕ್ಸ್‌ ತಂಡವು ಗೆಲ್ಲಲು 311 ರನ್‌ಗಳ ಗುರಿ ಪಡೆದಿತ್ತು. ಪೂಜಾರ ಕ್ರೀಸ್‌ಗಿಳಿಯುವಾಗ ಸಸೆಕ್ಸ್ ತಂಡವು 22 ಓವರ್ ಅಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 122 ರನ್ ಬಾರಿಸಿತ್ತು. ಆ ಬಳಿಕ ಸ್ಪೋಟಕ ಬ್ಯಾಟಿಂಗ್ ನಡೆಸಿದ ಸಸೆಕ್ಸ್ ತಂಡದ ನಾಯಕ ಚೇತೇಶ್ವರ್ ಪೂಜಾರ ಕೇವಲ 79 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಆಕರ್ಷಕ 107 ರನ್ ಚಚ್ಚಿದರು. ಇನ್ನು ಇನಿಂಗ್ಸ್‌ನ 45ನೇ ಓವರ್ ಬೌಲಿಂಗ್ ಮಾಡಿದ ಲಿಯಾಮ್ ನಾರ್ವೆಲ್‌ ಓವರ್‌ನಲ್ಲಿ 22 ರನ್‌ ಚಚ್ಚಿದರು. ಸಸೆಕ್ಸ್‌ ಇನಿಂಗ್ಸ್‌ನ 48ನೇ ಓವರ್‌ನಲ್ಲಿ ಶತಕ ಪೂರೈಸಿದ ಪೂಜಾರ, 49ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

75ನೇ ಸ್ವಾತಂತ್ರ್ಯೋತ್ಸವಕ್ಕೆ ದಿಗ್ಗಜರ ಕ್ರಿಕೆಟ್ ಧಮಾಕ.! ದಾದಾಗಿರಿ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ರೆಡಿ

ಚೇತೇಶ್ವರ್ ಪೂಜಾರ ಸ್ಪೋಟಕ ಶತಕದ ಹೊರತಾಗಿಯೂ, ಸಸೆಕ್ಸ್‌ ತಂಡವು ಗೆಲುವಿನ ನಗೆ ಬೀರಲು ವಿಫಲವಾಯಿತು. ಸಸೆಕ್ಸ್‌ ತಂಡವು ಕೇವಲ 4 ರನ್‌ಗಳ ಅಂತರದಲ್ಲಿ ರೋಚಕ ಸೋಲು ಅನುಭವಿಸಿತು. ಸದ್ಯ ಸಸೆಕ್ಸ್‌ ತಂಡವು 'ಎ' ಗುಂಪಿನಲ್ಲಿ 4 ಪಂದ್ಯಗಳನ್ನಾಡಿ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

Follow Us:
Download App:
  • android
  • ios