ಚೆನ್ನೈ(ಫೆ.07): ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ 3 ದಿನವೂ ಹಿನ್ನಡೆ ಅನುಭವಿಸಿದೆ. 3ನೇ ದಿನದಲ್ಲಿ ಇಂಗ್ಲೆಂಡ್ ತಂಡ 578 ರನ್ ಸಿಡಿಸಿ ಆಲೌಟ್ ಆಗಿತ್ತು.  ಬೃಹತ್ ಮೊತ್ತಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಮಕಾಡೆ ಮಲಗಿತು.

91 ರನ್ ಸಿಡಿಸಿ ರಿಷಬ್ ಪಂತ್ ಔಟ್, ಸಂಕಷ್ಟಕ್ಕೆ ಸಿಲುಕಿದ ಭಾರತ!.

ರೋಹಿತ್ ಶರ್ಮಾ ಕೇವಲ 6 ರನ್ ಸಿಡಿಸಿ ಔಟಾಗೋ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದರು. ಶುಭಮನ್ ಗಿಲ್ 29 ರನ್ ಸಿಡಿಸಿದರು. ಚೇತೇಶ್ವರ್ ಪೂಜಾರ ತಂಡಕ್ಕೆ ಆಸರೆಯಾದರೆ, ನಾಯಕ ವಿರಾಟ್ ಕೊಹ್ಲಿ ಕೇವಲ 11 ರನ್ ಸಿಡಿಸಿ ಔಟಾದರು. ಇತ್ತ ಉಪನಾಯಕ ಅಜಿಂಕ್ಯ ರಹಾನೆ 1 ರನ್ ಸಿಡಿಸಿ ನಿರ್ಗಮಿಸಿದರು.

73 ರನ‌್‌ಗಳಿಗೆ 4 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಪೂಜಾರ ಹಾಗೂ ರಿಷಪ್ ಪಂತ್ ನೆರವಾದರು. ಇವರಿಬ್ಬರ ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು. ಆದರೆ ಪೂಜಾರ 73 ರನ್ ಸಿಡಿಸಿ ಔಟಾದರೆ, ಪಂತ್ 91 ರನ್ ಸಿಡಿಸಿದರು. 

ವಾಶಿಂಗ್ಟನ್ ಸುಂದರ್ ಅಜೇಯ 33 ಹಾಗೂ ಆರ್ ಅಶ್ವಿನ್ ಅಜೇಯ  8 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 4ನೇ ದಿನದಾಟ ಇದೀಗ ಕುತೂಹಲ ಕೆರಳಿಸಿದೆ. ಟೀಂ ಇಂಡಿಯಾವನ್ನು ಆಲೌಟ್ ಮಾಡುಲ ಲೆಕ್ಕಾಚಾರದಲ್ಲಿರುವ ಇಂಗ್ಲೆಂಡ್ ತಂಡಕ್ಕೆ ಭಾರತ ತಿರುಗೇಟು ನೀಡುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.