ಚೆನ್ನೈ(ಫೆ.07):  ಆಸೀಸ್ ಸರಣಿ ಗೆದ್ದು ತವರಿಗೆ ಆಗಮಿಸಿದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಮೊದಲ ಪಂದ್ಯವೇ ಕೊಹ್ಲಿ ಪಡೆದೆ ತೀವ್ರ ತಲೆನೋವು ತಂದಿಟ್ಟಿದೆ. ಇಂಗ್ಲೆಂಡ್ ಆರಂಭಿಕ 2 ಅಬ್ಬರಿಸಿ 578 ರನ್ ಸಿಡಿಸಿತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಚೆನ್ನೈ ಟೆಸ್ಟ್; ರೂಟ್ ಡಬಲ್ ಸೆಂಚುರಿಗೆ ಹಲವು ದಾಖಲೆ ಉಡೀಸ್!

ತಂಡಕ್ಕೆ ಆಸರೆಯಾಗಿದ್ದ ರಿಷಬ್ ಪಂತ್ 91 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ. ಇತ್ತ ಚೇತೇಶ್ವರ್ ಪೂಜಾರಾ ಹಾಗೂ ಪಂತ್ ದಿಟ್ಟ ಹೋರಾಟದಿಂದ ಮೊದಲ ಇನ್ನಿಂಗ್ಸ್‌ನಲ್ಲಿ  ತಿರುಗೇಟು ನೀಡುವ ಯತ್ನ ಮಾಡಿದರು. ಆದರೆ ಪೂಜಾರಾ ಕೂಡ 73 ರನ್ ಸಿಡಿಸಿ ನಿರ್ಗಮಿಸಿದರು.

6 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾಗೆ ವಾಶಿಂಗ್ಟನ್ ಸುಂದರ್ ಹಾಗೂ ರವಿಚಂದ್ರನ್ ಅಶ್ವಿನ್ ಆಸರೆಯಾಗಿದ್ದಾರೆ. 3 ದಿನದಾಟದಲ್ಲೂ ಆಂಗ್ಲರೇ ಮೇಲುಗೈ ಸಾಧಿಸಿದ್ದಾರೆ.  ಈ ಮೂಲಕ ಚೆನ್ನೈ ಟೆಸ್ಟ್ ಪಂದ್ಯ ಬಹುತೇಕ ಇಂಗ್ಲೆಂಡ್ ತಂಡದ ಹಿಡಿತದಲ್ಲಿದೆ.