ನಿವೃತ್ತಿ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಧೋನಿಇನ್ನೂ ಕೆಲಕಾಲ ಮುಂದುವರೆಯುತ್ತಾರಾ ಮಹಿಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಧೋನಿ

ಲಖ​ನೌ(ಮೇ.04): ಕಳೆದರಡು ವರ್ಷ​ಗ​ಳಿಂದ ಕೇಳಿ ಬರು​ತ್ತಿ​ರುವ ನಿವೃತ್ತಿ ವದಂತಿ ಬಗ್ಗೆ ಇನ್ನೂ ಗುಟ್ಟು ಬಿಟ್ಟು​ಕೊ​ಡದ ಎಂ.ಎ​ಸ್‌.​ಧೋನಿ ಮತ್ತೊಮ್ಮೆ ತಮ್ಮ ಹೇಳಿಕೆ ಮೂಲಕ ಅಭಿ​ಮಾ​ನಿ​ಗ​ಳಲ್ಲಿ ಕುತೂ​ಹಲ ಹೆಚ್ಚಿ​ಸಿ​ದ್ದಾರೆ. ಬುಧ​ವಾರ ಲಖನೌ ವಿರು​ದ್ಧದ ಪಂದ್ಯಕ್ಕೂ ಮುನ್ನ ಟಾಸ್‌ ವೇಳೆ ವೀಕ್ಷಕ ವಿವರಣೆಗಾರ ಡ್ಯಾನಿ ಮೊರಿಸ್ಸನ್‌ ‘ನಿಮ್ಮ ಕೊನೆ ಐಪಿ​ಎ​ಲ್‌ ​ಅನ್ನು ಹೇಗೆ ಎಂಜಾಯ್‌ ಮಾಡು​ತ್ತಿ​ದ್ದೀರಿ ಎಂದು ಕೇಳಿದ ಪ್ರಶ್ನೆಗೆ, ‘ಇದು ನನ್ನ ಕೊನೆ ಐಪಿ​ಎಲ್‌ ಎಂಬುದು ನೀವೇ ನಿರ್ಧ​ರಿ​ಸಿ​ದ್ದೀ​ರಿ’ ಎಂದು ಧೋನಿ ಉತ್ತ​ರಿ​ಸಿದರು. 

ಈ ಆವೃ​ತ್ತಿ​ಯಲ್ಲಿ ಹಲವು ಬಾರಿ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದ ಧೋನಿ ಈಗ ನಿವೃತ್ತಿ ವದಂತಿ ಅಲ್ಲ​ಗ​ಳೆ​ಯುವ ರೀತಿ ಮಾತ​ನಾ​ಡಿ​ದ್ದು, ಹಲವು ರೀತಿಯ ವಿಶ್ಲೇ​ಷ​ಣೆಗೆ ಕಾರ​ಣ​ವಾ​ಗಿದೆ. ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಧೋನಿಯ ಕೆಲವು ಮಾತುಗಳು ಅವರ ನಿವೃತ್ತಿ ವದಂತಿಯನ್ನು ಪುಷ್ಠಿಗೊಳಿಸುತ್ತಿದ್ದರೆ, ಮತ್ತೆ ಕೆಲವು ಮಾತುಗಳು ಇನ್ನೂ ಧೋನಿ ಕ್ರಿಕೆಟ್‌ನಲ್ಲಿ ಮುಂದುವರೆಯಲಿದ್ದಾರೆ ಎನ್ನುವಂತಹ ಸೂಚನೆಗಳು ಸಿಗುತ್ತಿವೆ.

Scroll to load tweet…

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಆಡಿದ 10 ಪಂದ್ಯಗಳ ಪೈಕಿ 5 ಗೆಲುವು, ನಾಲ್ಕು ಸೋಲು ಮತ್ತು ಒಂದು ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದ್ದು, ಒಟ್ಟು 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ.

ಧೋನಿ ನಿವೃತ್ತಿ ಸೂಚನೆ ನೀಡಿ​ಲ್ಲ: ಕೋಚ್‌ ಸ್ಟಿಫನ್ ಫ್ಲೆಮಿಂಗ್‌

ಚೆನ್ನೈ: ಎಂ.ಎ​ಸ್‌.​ಧೋನಿ ಈ ಆವೃತ್ತಿ ಐಪಿ​ಎಲ್‌ ಬಳಿಕ ನಿವೃ​ತ್ತಿ​ಯಾ​ಗ​ಲಿ​ದ್ದಾರೆ ಎಂಬ ವದಂತಿ​ಗಳನ್ನು ಸ್ವತಃ ಚೆನ್ನೈ ತಂಡದ ಕೋಚ್‌ ಸ್ಟಿಫನ್ ಫ್ಲೆಮಿಂಗ್‌ ಅಲ್ಲ​ಗ​ಳೆ​ದಿದ್ದು, ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಎಂದಿ​ದ್ದಾರೆ. ಈಗಾ​ಗಲೇ ತಮ್ಮ ನಿವೃತ್ತಿ ಬಗ್ಗೆ ಧೋನಿಯೇ ಹಲವು ಬಾರಿ ಸುಳಿವು ನೀಡಿ​ದ್ದರು. 

IPL 2023 ಕೋಲ್ಕತಾ ನೈಟ್‌ ರೈಡ​ರ್ಸ್‌- ಸನ್‌ರೈಸರ್ಸ್‌ ಹೈದರಾಬಾದ್ ಫೈಟ್‌ಗೆ ಕ್ಷಣಗಣನೆ

ಇತ್ತೀ​ಚೆ​ಗಷ್ಟೇ ಕ್ರಿಕೆಟ್‌ ಬದುಕಿನ ಕೊನೆ ಹಂತದಲ್ಲಿದ್ದೇನೆ ಎಂದಿದ್ದ ಧೋನಿ, ಕಳೆದ ವಾರ ಕೋಲ್ಕತಾ ವಿರು​ದ್ಧದ ಪಂದ್ಯದ ಬಳಿಕ, ಅಭಿ​ಮಾ​ನಿ​ಗ​ಳು ನನಗೆ ಬೀಳ್ಕೊ​ಡುಗೆ ನೀಡಲು ಪ್ರಯ​ತ್ನಿ​ಸಿ​ದರು ಎಂದಿ​ದ್ದರು. ಇದು ಹಲವು ಊಹಾ​ಪೋ​ಹಗ​ಳಿಗೆ ಕಾರ​ಣ​ವಾ​ಗಿತ್ತು.

ವಿದಾ​ಯದ ಸುಳಿ​ವು ನೀಡಿದ್ದ ಎಂ.ಎ​ಸ್‌.​ಧೋ​ನಿ!

ಕೋಲ್ಕ​ತಾ: ದಿನ​ಗಳ ಹಿಂದ​ಷ್ಟೇ ‘ಕ್ರಿಕೆಟ್‌ ಬದುಕಿನ ಕೊನೆ ಹಂತದಲ್ಲಿದ್ದೇನೆ’ ಎಂದಿದ್ದ ಸಿಎಸ್‌ಕೆ ನಾಯಕ ಎಂ.ಎಸ್‌.ಧೋನಿ, ಭಾನು​ವಾರ ಕೋಲ್ಕತಾ ವಿರು​ದ್ಧದ ಪಂದ್ಯದ ಬಳಿಕ ಮತ್ತೊಮ್ಮೆ ವಿದಾ​ಯದ ಸುಳಿವು ನೀಡಿ​ದಂತ ಹೇಳಿಕೆ ನೀಡಿದ್ದಾರೆ. ಪಂದ್ಯ ವೀಕ್ಷ​ಣೆಗೆ ಅಪಾರ ಪ್ರಮಾ​ಣ​ದಲ್ಲಿ ಚೆನ್ನೈ, ಧೋನಿ ಅಭಿ​ಮಾ​ನಿ​ಗಳು ಕ್ರೀಡಾಂಗ​ಣ​ದಲ್ಲಿ ನೆರೆ​ದಿ​ದ್ದರು.

ಈ ಬಗ್ಗೆ ಪಂದ್ಯದ ಬಳಿಕ ಪ್ರತಿ​ಕ್ರಿ​ಯಿ​ಸಿದ ಧೋನಿ, ‘ದೊಡ್ಡ ಸಂಖ್ಯೆ​ಯಲ್ಲಿ ಸೇರಿದ್ದ ಅಭಿ​ಮಾ​ನಿ​ಗ​ಳಿಗೆ ಧನ್ಯ​ವಾ​ದ​ಗಳು. ಇವರು ಮುಂದಿನ ಬಾರಿ ಕೆಕೆ​ಆರ್‌ ತಂಡದ ಜೆರ್ಸಿ ಧರಿಸಿ ಬರ​ಲಿ​ದ್ದಾರೆ. ಅವರು ಈ ಪಂದ್ಯ​ದಲ್ಲಿ ನನಗೆ ಬೀಳ್ಕೊ​ಡುಗೆ ನೀಡಲು ಪ್ರಯ​ತ್ನಿ​ಸಿ​ದರು. ನೆರೆದ ಅಷ್ಟೂ ಪ್ರೇಕ್ಷ​ಕ​ರಿಗೆ ಮತ್ತೊಮ್ಮೆ ಧನ್ಯ​ವಾ​ದ’ ಎಂದು ಹೇಳಿ​ದ್ದಾರೆ.