* ಚೆನ್ನೈ ಸೂಪರ್ ಕಿಂಗ್ಸ್ ಎದುರಿಸುತ್ತಿದೆ ಸಾಲು ಸಾಲು ವೈಫಲ್ಯ* ಐಪಿಎಲ್ ಟೂರ್ನಿಯಲ್ಲಿ ಸತತ 4 ಸೋಲು ಕಂಡ ಸಿಎಸ್‌ಕೆ* ಜಡೇಜಾ ದೂರವುದನ್ನು ಬಿಟ್ಟು ಸಿಎಸ್‌ಕೆ ಫ್ರಾಂಚೈಸಿ ದೂರುವುದೇ ಒಳಿತು
ಬೆಂಗಳೂರು(ಏ.11): ಚೆನ್ನೈ ಸೂಪರ್ ಕಿಂಗ್ಸ್ (Chennai Super Kings). 4 ಬಾರಿ ಐಪಿಎಲ್ ಚಾಂಪಿಯನ್. ಎರಡು ಸಲ ಚಾಂಪಿಯನ್ಸ್ ಲೀಗ್ ವಿನ್ನರ್. ಐಪಿಎಲ್ನಲ್ಲಿ (IPL 2022) ಆಡಿರೋ 12 ಸೀಸನ್ನಲ್ಲಿ 11 ಸಲ ನಾಕೌಟ್ ಹಂತಕ್ಕೇರಿದ ತಂಡ. ಐಪಿಎಲ್ನಲ್ಲಿ ಈ ಸಾಧನೆ ಮಾಡಿ ಏಕೈಕ ತಂಡ. ಮುಂಬೈ ಇಂಡಿಯನ್ಸ್ (Mumbai Indians) ಬಿಟ್ಟರೆ ಐಪಿಎಲ್ನಲ್ಲಿ ಮೋಸ್ಟ್ ಸಕ್ಸಸ್ ಫುಲ್ ಟೀಮ್. ಫ್ಯಾನ್ ಫಾಲೋವರ್ಸ್ನಲ್ಲೂ ಅಷ್ಟೇ. ಇಷ್ಟೆಲ್ಲಾ ಟ್ರ್ಯಾಕ್ ರೆಕಾರ್ಡ್ ಹೊಂದಿರೋ ಚೆನ್ನೈ ಸೂಪರ್ ಕಿಂಗ್ಸ್, ಈ ಸಲ ಯಾಕೋ ಮಕಾಡೆ ಮಲಗಿದೆ. ಸತತ ನಾಲ್ಕು ಪಂದ್ಯ ಸೋತು ಸುಣ್ಣವಾಗಿದೆ.
ಕ್ಯಾಪ್ಟನ್ಸಿ ಬದಲಿಸಿದ್ದೇ ಸೋಲಿಗೆ ಕಾರಣವಲ್ವಾ..?:
ಎಂ ಎಸ್ ಧೋನಿ (MS Dhoni) 12 ವರ್ಷಗಳ ಕಾಲ CSK ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿದ್ದರು. ಆ 12 ವರ್ಷದಲ್ಲಿ ಒಂದು ವರ್ಷ ಬಿಟ್ರೆ ಉಳಿದ 11 ವರ್ಷವೂ ಚೆನ್ನೈ ತಂಡವನ್ನ ನಾಕೌಟ್ ಹಂತಕ್ಕೇರಿದ್ದ ಮಹಿ, 4 ಸಲ ಚಾಂಪಿಯನ್ ಮಾಡಿದ್ದರು. ಆದರೆ ಈ ಸಲ ನಾಯಕತ್ವ ತ್ಯಜಿಸಿದ್ದರಿಂದ ರವೀಂದ್ರ ಜಡೇಜಾಗೆ (Ravindra Jadeja) ಕ್ಯಾಪ್ಟನ್ಸಿ ನೀಡಲಾಗಿದೆ. ಜಡ್ಡು ಅನಾನುಭವಿ. ಹಾಗಾಗಿನೇ ಸಿಎಸ್‌ಕೆ ಸತತ 4 ಪಂದ್ಯ ಸೋತಿದೆ ಅನ್ನೋರು ಇದ್ದಾರೆ. ಆದ್ರೆ ಚೆನ್ನೈ ಸೋಲಿಗೆ ಜಡೇಜಾ ಕಾರಣಲ್ಲ, ಬದಲಿಗೆ ಫ್ರಾಂಚೈಸಿಗಳೇ ನೇರ ಹೊಣೆ.
ಆ ತ್ರಿಮೂರ್ತಿಗಳನ್ನ ಬಿಡ್ನಲ್ಲಿ ಸಿಎಸ್‌ಕೆ ಖರೀದಿಸಿದ್ದೇಕೆ..?:
ಯೆಸ್, ಮೈದಾನದಲ್ಲಿ ಸಿಎಸ್‌ಕೆ ಸೋತಿಲ್ಲ. ಅದಕ್ಕೂ ಮುನ್ನ ಪ್ಲೇಯರ್ಸ್ ಬಿಡ್ನಲ್ಲೇ ಸಿಎಸ್‌ಕೆ ಸೋತು ಹೋಗಿತ್ತು. ಎಂಎಸ್ ಧೋನಿ ಸಕ್ಸಸ್ ಫುಲ್ ಪ್ಲೇಯರ್ ಕಮ್ ಕ್ಯಾಪ್ಟನ್. 4 ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಫಿಟ್ ಅಂಡ್ ಫೈನ್. ಹಾಗಾಗಿ ಅವರಿಗೆ 40 ವರ್ಷವಾದ್ರೂ ರಿಟೈನ್ ಮಾಡಿಕೊಂಡಿದ್ದು ತಪ್ಪಲ್ಲ. ಆದರೆ ಬಿಡ್ನಲ್ಲಿ ಕೋಟಿ ಕೋಟಿ ಕೊಟ್ಟು ಇಂಟರ್ನ್ಯಾಷನಲ್ ಕ್ರಿಕೆಟ್ನಿಂದ ರಿಟೈರ್ಡ್ ಆಗಿರೋ ಆಟಗಾರರನ್ನ ಖರೀದಿಸಿದ್ದು ತಪ್ಪು. ಅವರು ಡೊಮೆಸ್ಟಿಕ್ ಕ್ರಿಕೆಟ್ ಅನ್ನೂ ಸರಿಯಾಗಿ ಆಡ್ತಿಲ್ಲ.
IPL 2022: ಕೆಕೆಆರ್ ಎದುರಿನ ಪಂದ್ಯಕ್ಕೆ ಏನ್ರಿಚ್ ನೋಕಿಯ ಏಕೆ ಕಣಕ್ಕಿಳಿಯಲಿಲ್ಲ..?
ಅಂಬಟಿ ರಾಯುಡುಗೆ 6.75 ಕೋಟಿ, ರಾಬಿನ್ ಉತ್ತಪ್ಪಗೆ 2.00 ಕೋಟಿ ಮತ್ತು ಡ್ವೇನ್ ಬ್ರಾವೋ 4.40 ಕೋಟಿ ಕೊಟ್ಟು ಖರೀದಿಸ್ತು. 38 ವರ್ಷದ ಬ್ರಾವೋ ಫ್ರಾಂಚೈಸಿ ಲೀಗ್ಗಳನ್ನ ಆಡುತ್ತಿದ್ದರೆ, 36 ವರ್ಷದ ಉತ್ತಪ್ಪ-ರಾಯುಡು ಡೊಮೆಸ್ಟಿಕ್ನಲ್ಲಿ ಬರೀ ಟಿ20 ಪಂದ್ಯಗಳನ್ನ ಮಾತ್ರ ಆಡ್ತಿದ್ದಾರೆ. ಧೋನಿ ಐಪಿಎಲ್ಗೆ ಸೀಮಿತವಾಗಿದ್ದಾರೆ. ಹೀಗೆ 35 ಪ್ಲಸ್ ವಯಸ್ಸಿನ ನಾಲ್ವರು ಆಟಗಾರರನ್ನ ಪ್ಲೇಯಿಂಗ್-11ನಲ್ಲಿ ಹಾಕಿಕೊಂಡರೆ ಪಂದ್ಯ ಗೆಲ್ಲೋದಾದ್ರೂ ಹೇಗೆ ಹೇಳಿ.
ಕಳೆದ ವರ್ಷ ಇದೇ ಟೀಂ ಇಟ್ಟುಕೊಂಡು ಚಾಂಪಿಯನ್ ಆಗಿರಲಿಲ್ವಾ ಅಂತ ನೀವು ಕೇಳಬಹುದು. ಆದರೆ ಕಳೆದ ವರ್ಷಕ್ಕೂ ಈ ವರ್ಷಕ್ಕೂ ಒಂದು ವರ್ಷದ ವ್ಯತ್ಯಾಸವಿದೆ. ಆಟಗಾರರ ಫಿಟ್ನೆಸ್-ಫಾರ್ಮ್ ಎಲ್ಲವನ್ನೂ ಗಮನಿಸಬೇಕು. ಜೊತೆಗೆ ಈ ವರ್ಷ ಬಿಸಿಲು ಹೆಚ್ಚಿದೆ. ಆ ಬಿಸಿಲಿನಲ್ಲಿ ಈ ಸೀನಿಯರ್ಸ್ ಪ್ಲೇಯರ್ಗಳಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗಲ್ಲ. ಈ ನಾಲ್ವರೇ ಸೋಲಿಗೆ ಕಾರಣರಾಗುತ್ತಿದ್ದಾರೆ. ಫ್ರಾಂಚೈಸಿಗಳನ್ನ ದೂ ಷಿಸೋದು ಬಿಟ್ಟು, ಜಡ್ಡು ಕ್ಯಾಪ್ಟನ್ಸಿಯನ್ನ ಬೈಯ್ದರೆ ಏನು ಪ್ರಯೋಜನ ಅಲ್ವಾ..?
