ಔರಂಗಬಾದ್(ಜ.26): ಟೀಂ ಇಂಡಿಯಾ ಮಾಜಿ ನಾಯಕ, ಸದ್ಯ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಔರಾಂಗಾಬಾದ್‌ನ ಟ್ರಾವೆಲ್ ಎಜೆಂಟ್ ಅಜರ್  ಹಾಗೂ ಮತ್ತಿಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಇದನ್ನೂ ಓದಿ: ಸಾನಿಯಾ ಮಿರ್ಜಾ ತಂಗಿ ಜೊತೆ ಮೊಹಮ್ಮದ್ ಅಜರ್ ಪುತ್ರನ ಅದ್ಧೂರಿ ವಿವಾಹ!

ಮೊಹಮ್ಮದ್ ಅಜರುದ್ದೀನ್ ಹಾಗೂ ಇಬ್ಬರು ಹಲವು ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಕೆಳದ ನವೆಂಬರ್‌ನಲ್ಲಿ ಅಜರ್ ಬುಕ್ ಮಾಡಿದ ವಿಮಾನ ಪ್ರಯಾಣದ ಟಿಕೆಟ್ ಒಟ್ಟು ಬೆಲೆ 20.96 ಲಕ್ಷ ರೂಪಾಯಿ ಆಗಿದೆ. ಆನ್‌ಲೈನ್ ಮೂಲಕ ಅಜರ್ ಹಣ ಪಾವತಿಸುವುದಾಗಿ ಹೇಳಿದ್ದ ಅಜರ್, ವರ್ಷ ಕಳೆದರೂ ಹಣ ಬಂದಿಲ್ಲ ಎಂದು  ದಾನೀಶ್ ಟೂರ್ ಅಂಡ್ರ ಟ್ರಾವೆಲ್ ಎಜೆಂಟ್ ಶಹಾಬ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ಈಡನ್ ಗಾರ್ಡನ್ಸ್‌ನಲ್ಲಿ ಅಜರುದ್ದೀನ್ ರಿಂಗ್ ಬೆಲ್-ಗಂಭೀರ್ ಆಕ್ರೋಶ!

ಶಹಾಬ್ ಕೇಸ್ ದಾಖಿಸಿದ ಬೆನ್ನಲ್ಲೇ ಮೊಹಮ್ಮದ್ ಅಜರುದ್ದೀನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಆರೋಪ ಆಧಾರ ರಹಿತವಾಗಿದೆ. ಈ ರೀತಿಯ ಯಾವುದೇ ವಂಚನೆ ಮಾಡಿಲ್ಲ. ಇಲ್ಲ ಸಲ್ಲದ ಆರೋಪ  ಮಾಡಿ ಕೇಸ್ ದಾಖಲಿಸಿರುವ ಶಬಾಬ್ ವಿರುದ್ಧ 100 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಿಸುವುದಾಗಿ ಅಜರ್ ಹೇಳಿದ್ದಾರೆ.