ಭ್ರಷ್ಟಾಚಾರ, ಕಳ್ಳಾಟಗಳನ್ನ ಮುಕ್ತವಾಗಿಸಲು ಬಿಸಿಸಿಐ ಇಡುತ್ತಿರುವ ಹೆಜ್ಜೆ ತಪ್ಪಾಗಿದೆ. ಕಳಂಕಿತ ವ್ಯಕ್ತಿಗಳನ್ನ ಕರೆಯಿಸಿ, ಈಡನ್ ಗಾರ್ಡನ್ಸ್ ಪಂದ್ಯದ ರಿಂಗ್ ಬೆಲ್ ಮಾಡಿಸಿದ್ದೇಕೆ ಎಂದು ಕ್ರಿಕೆಟಿಗ ಗೌತಮ್ ಗಂಭೀರ್ ಆಕ್ರೋಶ ಹೊರಹಾಕಿದ್ದಾರೆ.
ನವದೆಹಲಿ(ನ.05): ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಗಂಟೆ ಭಾರಿಸೋ ಮೂಲಕ ಚಾಲನೆ ನೀಡಿದರು. ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿರುವ ಸಂಪ್ರಾದ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲೂ ಪಾಲಿಸಲಾಗುತ್ತಿದೆ.
ಭಾರತ ಹಾಗೂ ವಿಂಡೀಸ್ ನಡುವಿನ ಮೊದಲ ಟಿ20 ಪಂದ್ಯಕ್ಕೆ ರಿಂಗ್ ಬೆಲ್‌ಗಾಗಿ ಕೋಲ್ಕತ್ತಾ ಕ್ರಿಕಟ್ ಸಂಸ್ಥೆ ಹಾಗೂ ಬಿಸಿಸಿಐ ಮೊಹಮ್ಮದ್ ಅಜರುದ್ದೀನ್‌ಗೆ ಆಹ್ವಾನ ನೀಡಿತ್ತು. ಇದರಂತೆ ಅಜರ್ ಗಂಟೆ ಭಾರಿಸಿ ಪಂದ್ಯಕ್ಕೆ ಚಾಲನೆ ನೀಡಿದ್ದರು. ಆದರೆ ಅಜರ್ ರಿಂಗ್ ಬೆಲ್ ಮಾಡಿರುವುದು ಕ್ರಿಕೆಟಿಗ ಗೌತಮ್ ಗಂಭೀರ್ ಆಕ್ರೋಶಕ್ಕೆ ಕಾರಣವಾಗಿದೆ.
ದೆಹಲಿ ಮಾಲಿನ್ಯ ಕುರಿತು ಆಮ್ ಆದ್ಮಿ ಪಕ್ಷ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ಗಂಭೀರ್, ಇದೀಗ ಫಿಕ್ಸಿಂಗ್ ಆರೋಪದಲ್ಲಿ ಅಮಾನತ್ತಾಗಿದ್ದ ಅಜರ್ ರಿಂಗ್ ಬೆಲ್ ಮಾಡಿರುವುದಕ್ಕೆ ಗರಂ ಆಗಿದ್ದಾರೆ.
ಫಿಕ್ಸಿಂಗ್ ಆರೋಪದಿಂದ ಮೊಹಮ್ಮದ್ ಅಜರುದ್ದೀನ್ ಅವರ ಮೇಲೆ ನಿಷೇಧ ಹೇರಲಾಗಿತ್ತು. ಕೆಲ ವರ್ಷಗಳ ಹಿಂದ ಅಜರ್ ಅವರನ್ನ ಫಿಕ್ಸಿಂಗ್ ಆರೋಪದಿಂದ ಬಿಸಿಸಿಐ ಖುಲಾಸೆಗೊಳಿಸಿತ್ತು. ಭ್ರಷ್ಟಾಚಾರ ಮುಕ್ತವಾಗಿಸಲು ಹೊರಟಿರುವ ಬಿಸಿಸಿಐ ಕಳಂಕ ರಹಿತ ವ್ಯಕ್ತಿಯನ್ನ ಕರೆಸಬೇಕಿತ್ತು ಎಂದು ನೇರವಾಗಿ ಆಕ್ರೋಶ ಹೊರಹಾಕಿದ್ದಾರೆ.
