ಹರಾಜಿನ ನಡುವೆ ಕುಸಿದು ಬಿದ್ದ ಹರಾಜು ದಾರ ಹ್ಯೂ ಎಡ್ಮೀಡ್ಸ್ ಹ್ಯೂ ಎಡ್ಮೀಡ್ಸ್ ಆರೋಗ್ಯ ಸ್ಥಿರ ವೈದ್ಯರಿಂದ ಚಿಕಿತ್ಸೆ ಚಾರು ಶರ್ಮಾಗೆ ಮುನ್ನಡೆಸಲಿದ್ದಾರೆ ಐಪಿಎಲ್ ಹರಾಜು 2022
ಬೆಂಗಳೂರು(ಫೆ.12): ಐಪಿಎಲ್ ಹರಾಜು 2022 ಪಕ್ರಿಯೆ ನಡುವೆ ಹರಾಜು ದಾರ ಹ್ಯೂ ಎಡ್ಮೀಡ್ಸ್ ದಿಢೀರ್ ಕುಸಿದು ಬಿದ್ದ ಘಟನೆ ನಡೆದಿದೆ. ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಹ್ಯೂ ಎಡ್ಮೀಡ್ಸ್ ಆರೋಗ್ಯ ಸ್ಥಿರವಾಗಿದೆ ಎಂದು ಬಿಸಿಸಿಐ ವೈದ್ಯರು ಹೇಳಿದ್ದಾರೆ. ಆದರೆ ಐಪಿಎಲ್ ಹರಾಜು 2022 ಪ್ರಕ್ರಿಯೆಯನ್ನು ವೀಕ್ಷಕ ವಿವರಣೆಗಾರ ಚಾರು ಶರ್ಮಾ ಮುನ್ನಡೆಸಲಿದ್ದಾರೆ.
ಐಪಿಎಲ್ ಹರಾಜು ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದ್ದ ವೇಳೆ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಶ್ರೀಲಂಕಾದ ವಾವಿಂಡು ಹಸರಂಗ ಹರಾಜು ನಡೆಯುತ್ತಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10ಕೋಟಿಗೆ ಬಿಡ್ ಮಾಡಿತ್ತು. ಬಿರುಸಿನ ಬಿಡ್ಡಿಂಗ್ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಹ್ಯೂ ಎಡ್ಮೀಡ್ಸ್ ದಿಢೀರ್ ವೇದಿಕೆಯಿಂದ ಕೆಳಕ್ಕೆ ಕುಸಿದು ಬಿದ್ದಿದ್ದಾರೆ.
IPL Auction 2022 ವೇದಿಕೆಯಲ್ಲಿ ದಿಢೀರ್ ಕುಸಿದ ಬಿದ್ದ ಹರಾಜುದಾರ ಹ್ಯೂ ಎಡ್ಮೀಡ್ಸ್!
ತಕ್ಷಣ ಹ್ಯೂ ಎಡ್ಮೀಡ್ಸ್ ಅವರಿಗೆ ಬಿಸಿಸಿಐ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಕಡಿಮೆ ರಕ್ತದೊತ್ತಡದಿಂದ ಹ್ಯೂ ಎಡ್ಮೀಡ್ಸ್ ಕುಸಿದು ಬಿದ್ದಿದ್ದಾರೆ. ಹರಾಜುದಾರ ಕುಸಿದ ಬಿದ್ದ ವೇಳೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಲಂಚ್ ಬ್ರೇಕ್ ನೀಡಲಾಯಿತು. ನಿಗದಿತ ಸಮಯಕ್ಕೂ ಮೊದಲೇ ಲಂಚ್ ಬ್ರೇಕ್ ಘೋಷಿಸಲಾಯಿತು. ಇಷ್ಟೇ ಅಲ್ಲ 3.30ಕ್ಕೆ ಹರಾಜು ಮತ್ತೆ ಆರಂಭಿಸುವುದಾಗಿ ಐಪಿಎಲ್ ಗೌವರ್ನಿಂಗ್ ಕೌನ್ಸಿಲ್ ಹೇಳಿತ್ತು. ಆದರೆ 3.45ಕ್ಕೆ ಹರಾಜು ಪ್ರಕ್ರಿಯೆ ಮತ್ತೆ ಆರಂಭವಾಗುತ್ತಿದೆ ಎಂದು ಬಿಸಿಸಿಐ ಹೇಳಿದೆ.
IPL Auction 2022 ಮೊದಲ ಬಾರಿಗೆ ಸುರೇಶ್ ರೈನಾ ಅನ್‌ಸ್ಟೋಲ್ಡ್, ಮಾರಾಟವಾಗದೇ ಉಳಿದ ಆಟಗಾರರ ಲಿಸ್ಟ್!
ಇತ್ತ ಚಿಕಿತ್ಸೆ ನೀಡಿದ ವೈದ್ಯರ ತಂಡ ಹ್ಯೂ ಎಡ್ಮೀಡ್ಸ್‌ಗೆ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಬಿಸಿಸಿಐ ತಕ್ಷಣವೇ ಚಾರು ಶರ್ಮಾರನ್ನು ಹರಾಜು ಮುಂದುವರಿಸುವಂತೆ ಮನವಿ ಮಾಡಿದೆ. ಇದೀಗ 3.45ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ ಮತ್ತೆ ಆರಂಭಗೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಚಾರು ಶರ್ಮಾ ಮುನ್ನಡೆಸುತ್ತಿದ್ದಾರೆ. ಆದರೆ ಚಾರು ಶರ್ಮಾ ಈಗಾಗಲೇ ದೇಸಿ ಲೀಗ್ ಕ್ರಿಕೆಟ್ ಟೂರ್ನಿ, ಸೇರಿದಂತೆ ಇತರ ಕ್ರೀಡೆಗಳ ಹರಾಜು ಪ್ರಕ್ರಿಯೆ ಮುನ್ನಡೆಸಿದ್ದಾರೆ.
ದಿಡೀರ್ ಆರೋಗ್ಯ ಏರುಪೇರಾದ ಕಾರಣ ಬಿಸಿಸಿಐ ಕೂಡ ಒಂದು ಕ್ಷಣ ಚಿಂತೆಗೀಡಾಗಿತ್ತು. ಆದರೆ ತಕ್ಷಣವೇ ಚಾರು ಶರ್ಮಾಗೆ ಹರಾಜು ಮುನ್ನಡೆಸುವಂತೆ ಕೇಳಿಕೊಂಡಿದೆ. ಇತ್ತ ಚಾರು ಶರ್ಮಾ ತಕ್ಷಣ ಒಪ್ಪಿಕೊಂಡು ಅತ್ಯಂತ ಯಸ್ವಿಯಾಗಿ ಹರಾಜು ಮುನ್ಡೆಸುತ್ತಿದ್ದಾರೆ. ಮೊದಲ ದಿನದ ಹರಾಜಿನ ಬಳಿಕ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಸಂತಸ ವ್ಯಕ್ತಪಡಿಸಿದ್ದಾರೆ. ಕೊನೆ ಕ್ಷಣದಲ್ಲಿ ಚಾರು ಶರ್ಮಾಗೆ ಹರಾಜು ಮುನ್ನಡೆಸಲು ಕೇಳಿಕೊಳ್ಳಲಾಗಿದೆ. ತಕ್ಷಣವೇ ಒಪ್ಪಿಕೊಂಡು ಹರಾಜು ಮುನ್ನಡೆಸಿದ್ದಾರೆ. ಇದಕ್ಕಾಗಿ ಬಿಸಿಸಿಐ ಪರವಾಗಿ ಧನ್ಯವಾ ಹೇಳುತ್ತೇನೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಐಪಿಎಲ್ ಟ್ರೋಫಿ
2008ರಲ್ಲಿ ಐಪಿಎಲ್ ಟೂರ್ನಿ ಆರಂಭಗೊಂಡಿದೆ. ಮೊದಲ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಬಳಿಕ 2009ರಲ್ಲಿ ಡೆಕ್ಕನ್ ಚಾರ್ಜಸ್ ಪ್ರಶಸ್ತಿ ಗೆದ್ದುಕೊಂಡಿತು. 2010 ಹಾಗೂ 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸತತ 2 ಬಾರಿ ಟ್ರೋಫಿ ಗೆದ್ದುಕೊಂಡಿತು. 2012ರಲ್ಲಿ ಕೋಲ್ಕತಾ ನೈಟ್ ರೈಡರ್ಸ್, 2013ರಲ್ಲಿ ಮುಂಬೈ ಇಂಡಿಯನ್ಸ್, 2014ರಲ್ಲಿ ಕೋಲ್ಕತಾ ನೈಟ್ ರೈಡರ್ಸ್, 2015ರಲ್ಲಿ ಮುಂಬೈ ಇಂಡಿಯನ್ಸ್, 2016ರಲ್ಲಿ ಸನ್‌ರೈಸರ್ಸ್ ಹದರಾಬಾದ್, 2017ರಲ್ಲಿ ಮುಂಬೈ ಇಂಡಿಯನ್ಸ್, 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್, 2019, 2020ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದುಕೊಂಡಿದೆ.
