IPL Auction 2022 ಮೊದಲ ಬಾರಿಗೆ ಸುರೇಶ್ ರೈನಾ ಅನ್‌ಸ್ಟೋಲ್ಡ್, ಮಾರಾಟವಾಗದೇ ಉಳಿದ ಆಟಗಾರರ ಲಿಸ್ಟ್!

  • ಯುವ ಆಟಗಾರರ ಖರೀದಿಗೆ ಫ್ರಾಂಚೈಸಿ ಆಸಕ್ತಿ
  • ಐಪಿಎಲ್‌ನಲ್ಲಿ ದಾಖಲೆ ವೀರ ಸುರೇಶ್ ರೈನಾ ಅನ್‌ಸೋಲ್ಡ್
  • ರೈನಾ ಖರೀದಿಗೆ ನಿರಾಸಕ್ತಿ, ಅಭಿಮಾನಿಗಳಿಗೆ ಬೇಸರ
IPL auction 2022 Suresh raina goes unsold for first time list of players details ckm

ಬೆಂಗಳೂರು(ಫೆ.12):  ಐಪಿಎಲ್ ಹರಾಜು ಪ್ರಕ್ರಿಯೆ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಯುವ ಆಟಗಾರರು ಕೋಟಿ ಕೋಟಿ ಮೊತ್ತಕ್ಕೆ ಬಿಕರಿಯಾದರೆ, ವಿಂಡೀಸ್ ಕ್ರಿಕೆಟಿಗ ಜೇಸನ್ ಹೋಲ್ಡರ್ ಸೇರಿದಂತೆ ಕೆಲ ಕ್ರಿಕೆಟಿಗರು ಅಚ್ಚರಿ ಮೊತ್ತಕ್ಕೆ ಹರಾಜಾಗಿದ್ದಾರೆ. ಇದರ ನಡುವೆ ಐಪಿಎಲ್ ಟೂರ್ನಿಯಲ್ಲಿ ದಾಖಲೆ ವೀರ ಎಂದೇ ಗುರುತಿಸಿಕೊಂಡಿರುವ ಸುರೇಶ್ ರೈನಾ ಅನ್‌ಸೋಲ್ಟ್ ಆಗಿದ್ದಾರೆ. 

2 ಕೋಟಿ ರೂಪಾಯಿ ಮೂಲ ಬೆಲೆಯ ಸುರೇಶ್ ರೈನಾ ಖರೀದಿಸಲು ಯಾವ ತಂಡವೂ ಆಸಕ್ತಿ ತೋರಲಿಲ್ಲ. ಐಪಿಎಲ್ ಟೂರ್ನಿಯಲ್ಲಿ  ಎಂ.ಎಸ್.ಧೋನಿ ಹಾಗೂ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. 2016 ಹಾಗೂ 2017ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಿಷೇಧದಿಂದ ಸುರೇಶ್ ರೈನಾ ಗುಜರಾತ್ ಲಯನ್ಸ್ ತಂಡದ ಪರ ಆಡಿದ್ದು. ಈ ಎರಡು ವರ್ಷ ಹೊರತು ಪಡಿಸಿದರೆ 2008 ರಿಂದ 2021ರ ವರೆಗೆ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದಾರೆ.

IPL Auction 2022 ಹರ್ಷಲ್ ಪಟೇಲ್‌ ಮತ್ತೆ ಆರ್‌ಸಿಬಿ ಪಾಲು, 10.75 ಕೋಟಿ ರೂಗೆ ಖರೀದಿ!

ತಮಿಳುನಾಡಿನ ಕ್ರಿಕೆಟ್ ಅಭಿಮಾನಿಗಳು ಸುರೇಶ್ ರೈನಾಗೆ ಚಿನ್ನ ತಲಾ ಎಂದು ಕರೆಯುತ್ತಾರೆ. ಇಷ್ಟೇ ಅಲ್ಲ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ರೈನಾ 4ನೇ ಸ್ಥಾನದಲ್ಲಿದ್ದಾರೆ. ಆದರೆ ಐಪಿಎಲ್ ಟೂರ್ನಿಯಲ್ಲಿ  5,000 ರನ್ ಗಡಿ ದಾಟಿದ ಮೊದಲ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದಿದ್ದಾರೆ.

ಸುರೇಶ್ ರೈನಾ ಐಪಿಎಲ್ ದಾಖಲೆ
1,000 ರನ್ ಪೂರೈಸಿದ ಮೊದಲ ಐಪಿಎಲ್ ಬ್ಯಾಟ್ಸ್‌ಮನ್
3,000 ರನ್ ಪೂರೈಸಿದ ಮೊದಲ ಐಪಿಎಲ್ ಬ್ಯಾಟ್ಸ್‌ಮನ್

1,000 ರನ್ ಪೂರೈಸಿದ ಮೊದಲ ಐಪಿಎಲ್ ಬ್ಯಾಟ್ಸ್‌ಮನ್

IPL Auction 2022 ವೇದಿಕೆಯಲ್ಲಿ ದಿಢೀರ್ ಕುಸಿದ ಬಿದ್ದ ಹರಾಜುದಾರ ಹ್ಯೂ ಎಡ್ಮೀಡ್ಸ್

ಐಪಿಎಲ್ ಟೂರ್ನಿಯಲ್ಲಿ ಸುರೇಶ್ ರೈನಾ 205 ಪಂದ್ಯಗಳಿಂದ 5,528 ರನ್ ಸಿಡಿಸಿದ್ದಾರೆ. 1 ಶತಕ ಹಾಗೂ 39 ಅರ್ಧಶತಕ ಸಿಡಿಸಿದ್ದಾರೆ. 2021ರ ಐಪಿಎಲ್ ಟೂರ್ನಿಯಲ್ಲಿ ಸುರೇಶ್ ರೈನಾ ನೀರಸ ಪ್ರದರ್ಶನ ನೀಡಿದ್ದರು. 12 ಪಂದ್ಯಗಳಿಂದ 160 ರನ್ ಸಿಡಿಸಿದ್ದಾರೆ. 

ವೈಯುಕ್ತಿಕ ಕಾರಣಗಳಿಂದ 2020ರ ಐಪಿಎಲ್ ಟೂರ್ನಿಯಿಂದ ದಿಢೀರ್ ಹಿಂದೆ ಸರಿದಿದ್ದ ಸುರೇಶ್ ರೈನಾ ಚೈನ್ನೆ ಸೂಪರ್ ಕಿಂಗ್ಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಸಿಎಸ್‌ಕೆ ತಂಡದ ಜೊತೆಗಿನ ವೈಮನಸ್ಸಿನಿಂದ ಸುರೇಶ್ ರೈನಾ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ನಾಯಕ ಎಂ.ಎಸ್ ಧೋನಿ ಮಾತಿನಿಂದ 2021ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಸುರೇಶ್ ರೈನಾ ಅವರನ್ನು ರಿಟೈನ್ ಮಾಡಿಕೊಂಡಿತ್ತು. ಇದೀಗ 2022ರ ಹರಾಜಿನಲ್ಲಿ ಸಿಎಸ್‌ಕೆ ಮಾತ್ರವಲ್ಲ ಯಾವ ತಂಡವೂ ರೈನಾ ಖರೀದಿಗೆ ಆಸಕ್ತಿ ತೋರಲಿಲ್ಲ.

IPL Auction 2022 : ಲಖನೌ ತಂಡದಲ್ಲಿ ರಾಹುಲ್ -ಮನೀಷ್ ಜೋಡಿ, ಪಡಿಕ್ಕಲ್ ಮಿಲಿಯನೇರ್!

ಸುರೇಶ್ ರೈನಾ ಮಾತ್ರವಲ್ಲ, ಹಲವು ಪ್ರಮುಖ ಕ್ರಿಕೆಟಿಗರ ಖರೀದಿಗೆ ಫ್ರಾಂಚೈಸಿಗಳು ನಿರಾಸಕ್ತಿ ತೋರಿದೆ. ಆಸ್ಟ್ರೇಲಿಯಾ ಕ್ರಿಕೆಟಿಗ, ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ಸ್ಟೀವ್ ಸ್ಮಿತ್ ಖರೀದಿಗೂ ಯಾವ ಫ್ರಾಂಚೈಸಿ ಮುಂದೆ ಬಂದಿಲ್ಲ. ಸ್ಟೀವ್ ಸ್ಮಿತ್ 103 ಐಪಿಎಲ್ ಪಂದ್ಯಗಳಿಂದ 2485 ರನ್ ಸಿಡಿಸಿದ್ದಾರೆ. 1 ಶತಕ ಹಾಗೂ 11 ಅರ್ಧಶತಕ ಸಿಡಿಸಿದ್ದಾರೆ. ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಮುನ್ನಡೆಸೆ ಫೈನಲ್ ಕೊಂಡೊಯ್ದಿದ್ದ ಕೀರ್ತಿಯೂ ಸ್ಮಿತ್‌ಗಿದೆ.

ಸುರೇಶ್ ರೈನಾ, ಸ್ಟೀವ್ ಸ್ಮಿತ್ ಸೇರಿದಂತೆ ಇದುವರೆಗಿನ ಹರಾಜಿನಲ್ಲಿ ನಾಲ್ವರು ಪ್ರಮುಖ ಆಟಗಾರರು ಅನ್‌ಸೋಲ್ಡ್ ಆಗಿದ್ದಾರೆ. ಇವರ ಮಾಹಿತಿ ಇಲ್ಲಿದೆ.

ಸುರೇಶ್ ರೈನಾ: ಮೂಲ ಬೆಲೆ 2 ಕೋಟಿ ರೂಪಾಯಿ
ಸ್ಟೀವ್ ಸ್ಮಿತ್: ಮೂಲ ಬೆಲೆ 2 ಕೋಟಿ ರೂಪಾಯಿ
ಶಕೀಬ್ ಅಲ್ ಹಸನ್: ಮೂಲ ಬೆಲೆ 2 ಕೋಟಿ ರೂಪಾಯಿ
ಡೇವಿಡ್ ಮಿಲ್ಲರ್ : ಮೂಲ ಬೆಲೆ 1 ಕೋಟಿ ರೂಪಾಯಿ

ಮೊದಲ ದಿನ ಮಾರಾಟವಾಗದೆ ಉಳಿದ ಆಟಗಾರರ ಎರಡನೇ ದಿನ(ಫೆ.13) ಅಂತಿಮ ಹಂತದಲ್ಲಿ ಮತ್ತೆ ಹರಾಜು ನಡೆಸಲಾಗುತ್ತದೆ. ಈ ವೇಳೆ ಫ್ರಾಂಚೈಸಿ ಆಸಕ್ತಿ ತೋರಿದರೆ ಸುರೇಶ್ ರೈನಾ ಆಟವನ್ನು ಅಭಿಮಾನಿಗಳು ವೀಕ್ಷಿಸಲು ಸಾಧ್ಯವಿದೆ.

Latest Videos
Follow Us:
Download App:
  • android
  • ios